HOME » NEWS » Sports » CRICKET ASLI HITMAN SE MILAYE HINDUSTAN KO ROHIT SHARMA RAPS GULLY BOY SONG WITH YUVRAJ SINGH AFTER MUMBAI INDIANS 4TH IPL TITLE WATCH

ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ರೋಹಿತ್-ಯುವರಾಜ್ ಮಾಡಿದ್ದೇನು ನೋಡಿ

IPL 2019 Final, MI vs CSK: ಧೋನಿ ಪಡೆ ವಿರುದ್ಧ ರೋಚಕ ಜಯ ಸಾಧಿಸಿ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರು ತಮ್ಮ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ.

Vinay Bhat | news18
Updated:May 13, 2019, 7:27 PM IST
ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ರೋಹಿತ್-ಯುವರಾಜ್ ಮಾಡಿದ್ದೇನು ನೋಡಿ
ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್
  • News18
  • Last Updated: May 13, 2019, 7:27 PM IST
  • Share this:
12ನೇ ಆವೃತ್ತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆ ಬಿದ್ದಿದ್ದು, ಮುಂಬೈ ಇಂಡಿಯನ್ಸ್​ ತಂಡ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 1 ರನ್​ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸ ಬರೆದಿದೆ. ಈ ಮಧ್ಯೆ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್​​ರ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ.

ಧೋನಿ ಪಡೆ ವಿರುದ್ಧ ರೋಚಕ ಜಯ ಸಾಧಿಸಿ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರು ತಮ್ಮ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಅದರಲ್ಲು ರೋಹಿತ್ ಹಾಗೂ ಯುವರಾಜ್​ ಹಿಂದಿಯ ಸೂಪರ್ ಹಿಟ್ 'ಗಲ್ಲಿ ಬಾಯ್' ಸಿನಿಮಾದ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ರಣವೀರ್ ಸಿಂಗ್ ಈ ಚಿತ್ರದಲ್ಲಿ ನಟಿಸಿದ್ದು, ಫೇಮಸ್​ ಹಾಡನ್ನು ರ್ಯಾಪ್​ನಲ್ಲಿ ಹಿಟ್​ಮ್ಯಾನ್ ಹಾಡಿದ್ದಾರೆ. ಅಲ್ಲದೆ ಸಿಕ್ಸರ್ ಸಿಂಗ್ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ: IPL 2019 Final: ಐಪಿಎಲ್ ಗೆದ್ದ ಹಾರ್ದಿಕ್ ಪಾಂಡ್ಯರ ಮುಂದಿನ ಗುರಿ ಏನು ಗೊತ್ತಾ?

 


ಐಪಿಎಲ್ ಫೈನಲ್​ನಲ್ಲಿ ಈವರೆಗೆ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕನೇ ಬಾರಿ ಮುಖಾಮುಖಿ ಆಗಿವೆ. 2010ರಲ್ಲಿ ಚೆನ್ನೈ  ಗೆಲುವು ಸಾಧಿಸಿದ್ದರೆ, 2013 ಹಾಗೂ 2015 ಮುಂಬೈ ಗೆದ್ದಿತ್ತು. ಇದೀಗ 2019ರಲ್ಲಿ ಚೆನ್ನೈ ವಿರುದ್ಧ ಮತ್ತೆ ಮುಂಬೈ ಕಿರೀಟ ಎತ್ತಿ ಹಿಡಿದು ಐಪಿಎಲ್ ಇತಿಹಾಸದಲ್ಲೇ ಈವರೆಗೆ ಗರಿಷ್ಠ ಟ್ರೋಫಿ ಗೆದ್ದ ತಂಡವಾಗಿ ಹೊರಹೊಮ್ಮಿದೆ.

First published: May 13, 2019, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories