HOME » NEWS » Sports » CRICKET ASIA CUP TO BE POSTPONED IF INDIA REACH WORLD TEST CHAMPIONSHIP FINAL PCB CHAIRMAN EHSAN MANI ZP

ಭಾರತ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದರೆ ಏಷ್ಯಾ ಕಪ್ ಮುಂದೂಡಿಕೆ..!

ಈ ಬಾರಿಯ ಏಷ್ಯಾ ಕಪ್ ಪಾಕಿಸ್ತಾನ್​ದಲ್ಲಿ ನಡೆಯಬೇಕಿತ್ತು. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ಹಿಂದೇಟು ಹಾಕುವ ಸಾಧ್ಯತೆಯಿದ್ದ ಕಾರಣ, ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ.

news18-kannada
Updated:February 28, 2021, 8:34 PM IST
ಭಾರತ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದರೆ ಏಷ್ಯಾ ಕಪ್ ಮುಂದೂಡಿಕೆ..!
Asia cup
  • Share this:
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಿದರೆ ಏಷ್ಯಾ ಕಪ್ ಟೂರ್ನಿಯನ್ನು ಮುಂದೂಡಲಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಇಹ್ಸಾನ್ ಮನಿ ತಿಳಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹಾಗೂ ಏಷ್ಯಾ ಕಪ್ ಜೂನ್​ ತಿಂಗಳಲ್ಲೇ ನಡೆದಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ.

ಏಷ್ಯಾ ಕಪ್ ಕಳೆದ ವರ್ಷ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಈ ವರ್ಷಕ್ಕೆ ಮುಂದೂಡಲಾಗಿದೆ. ಆದರೀಗ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ಗೆ ಭಾರತ ಫೈನಲ್​ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಜೂನ್ ತಿಂಗಳಿನಲ್ಲಿ ಏಷ್ಯಾ ಕಪ್ ನಡೆಯುವ ಸಾಧ್ಯತೆಗಳು ಕ್ಷೀಣ. ಹಾಗೆಯೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಟೂರ್ನಿಯನ್ನು ಜೂನ್‌ನಲ್ಲಿಯೇ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದೆ ಎಂದು ಇಹ್ಸಾನ್ ಮನಿ ತಿಳಿಸಿದ್ದಾರೆ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಫೈನಲ್ ಆಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಏಷ್ಯಾಕಪ್ ಟೂರ್ನಿಯನ್ನು ಮುಂದೂಡುವ ಅನಿವಾರ್ಯತೆ ಎದುರಾಗಬಹುದು ಎಂದು ಪಿಸಿಬಿಯ ಸಿಇಒ ಆಗಿರುವ ವಾಸಿಂ ಖಾನ್ ಸಹ ತಿಳಿಸಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶವು ಟೆಸ್ಟ್ ಚಾಂಪಿಯನ್ ಫೈನಲ್ ಪ್ರವೇಶಿಸುವ ತಂಡವನ್ನು ನಿರ್ಧರಿಸಲಿದೆ. ಒಂದು ವೇಳೆ ನಾಲ್ಕನೇ ಟೆಸ್ಟ್​ನಲ್ಲಿ ಭಾರತ ಇಂಗ್ಲೆಂಡ್​ನ್ನು ಮಣಿಸಿದರೆ ಅಥವಾ ಡ್ರಾ ಸಾಧಿಸಿದರೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಲಿದೆ. ಹಾಗೆಯೇ ಭಾರತ ಕೊನೆಯ ಟೆಸ್ಟ್​ನಲ್ಲಿ ಸೋತರೆ, ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಈ ಬಾರಿಯ ಏಷ್ಯಾ ಕಪ್ ಪಾಕಿಸ್ತಾನ್​ದಲ್ಲಿ ನಡೆಯಬೇಕಿತ್ತು. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ಹಿಂದೇಟು ಹಾಕುವ ಸಾಧ್ಯತೆಯಿದ್ದ ಕಾರಣ, ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ.

ಇನ್ನು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಪತ್ರ ಬರೆದಿದ್ದು, ಪಾಕ್ ಆಟಗಾರರಿಗೆ ಮಾತ್ರವಲ್ಲದೆ, ಅಭಿಮಾನಿಗಳು, ಪತ್ರಕರ್ತರು ಹಾಗೂ ಮಂಡಳಿಯ ಸದಸ್ಯರಿಗೆ ವೀಸಾ ನೀಡುವ ಬಗ್ಗೆ ಭಾರತ ಲಿಖಿತ ಭರವಸೆ ನೀಡಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.
Published by: zahir
First published: February 28, 2021, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories