India vs Sri Lanka: ಶ್ರೀಲಂಕಾ ಬೌಲರ್​ಗಳಿಗೆ ಬೆವರಿಳಿಸಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ (Rohit Sharma) ಮೊದಲು ಕೇವಲ 32 ಎಸೆತಗಳಲ್ಲಿ ತಮ್ಮ 28 ನೇ T20I ಅರ್ಧಶತಕ ಗಳಿಸಿದರು.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
    ಏಷ್ಯಾ ಕಪ್​ನ (Asia Cup 2022) ಬಹು ರೋಮಾಂಚಕ ಭಾರತ vs ಶ್ರೀಲಂಕಾ ಪಂದ್ಯದಲ್ಲಿ (dia vs Sri Lanka)  ಭಾರತ 8 ವಿಕೆಟ್‌ಗೆ 173 ರನ್ ಗಳಿಸಿದೆ. ರೋಹಿತ್ ಶರ್ಮಾ ಅವರ 41 ಎಸೆತಗಳಲ್ಲಿ 72 ರನ್ ಮೂಲಕ ಭಾರತ ಸ್ಪರ್ಧಾತ್ಮಕ ಸವಾಲಿನ ಮೊತ್ತವನ್ನು ದಾಖಲಿಸಲು ಸಾಧ್ಯವಾಗಿದೆ. ರೋಹಿತ್ ಶರ್ಮಾ (Rohit Sharma) ಮೊದಲು ಕೇವಲ 32 ಎಸೆತಗಳಲ್ಲಿ ತಮ್ಮ 28 ನೇ T20I ಅರ್ಧಶತಕ ಗಳಿಸಿದರು. ಅಲ್ಲದೇ ಶ್ರೀಲಂಕಾದ ಬೌಲರ್‌ಗಳಿಗೆ ಬೆವರಿಳಿಸುವಂತೆ ಆಟವಾಡಿದರು. ಈ ಅರ್ಧಶತಕದ ಮೂಲಕ ರೋಹಿತ್ ಏಷ್ಯಾ ಕಪ್‌ನಲ್ಲಿ ಎರಡು ಅದ್ಭುತ ದಾಖಲೆಗಳನ್ನು ಮುರಿದಿದ್ದಾರೆ. ಈ  ಹಿಂದೆ ಕ್ರಮವಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಶಾಹಿದ್ ಅಫ್ರಿದಿ ಈ ದಾಖಲೆ ಮಾಡಿದ್ದರು.

    ರೋಹಿತ್ಕೂ ಶರ್ಮಾ  ಸಚಿನ್‌ ತೆಂಡೂಲ್ಕರ್ ಅವರ ಸರಿಸಮನಾಗಿ ಮತ್ತೊಂದು ಏಷ್ಯಾಕಪ್ ಪಟ್ಟಿಯಲ್ಲಿ ಸ್ಥಾನ ಪಡೆದರು. 72 ರನ್‌ಗಳ ನಾಕ್ ಏಷ್ಯಾ ಕಪ್ ಇತಿಹಾಸದಲ್ಲಿ ಅವರದ್ದು ಒಂಬತ್ತನೇ ಅರ್ಧಶತಕವಾಗಿದೆ.

    ಭಾರತದ ಪ್ಲೇಯಿಂಗ್ XI:
    ಕೆಎಲ್ ರಾಹುಲ್, ರೋಹಿತ್ ಶರ್ಮಾ(ಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್

    ಶ್ರೀಲಂಕಾದ ಪ್ಲೇಯಿಂಗ್ XI:
    ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (WK), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶಾನಕ (ಸಿ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ

    ಸದ್ಯ ಈ ಪಂದ್ಯ ರೋಚಕ ಹಂತ ತಲುಪಿದ್ದು ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚುತ್ತಿದೆ.

    ಟಿ20 ವಿಶ್ವಕಪ್​-ಭಾರತ ಪ್ರವಾಸಕ್ಕೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ
    ಮುಂಬರುವ ಟಿ20 ವಿಶ್ವಕಪ್ 2022 (T20 World Cup 2022) ಮತ್ತು ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia ) ನಡೆಯಲಿದೆ. ಇದಕ್ಕೂ ಮೊದಲು ಸೌತ್​ ಆಫ್ರಿಕಾ (South Africa) ಭಾರತದ ಪ್ರವಾಸವನ್ನು ಕೈಗೊಳ್ಳಲಿದ್ದು, ಈ 2 ಮಹತ್ವದ ಟೂರ್ನಿಗೆ 15 ಜನರ ತಂಡವನ್ನು ಪ್ರಕಟಿಸಿದೆ.

    ಇದನ್ನೂ ಓದಿ: Virat Kohli: ಧೋನಿ ಒಬ್ರಿಗೆ ನನ್ನ ಮೇಲೆ ಕಾಳಜಿ ಇರೋದು ಅಂತ ಸುಳ್ಳು ಹೇಳಿದ್ರಾ? ವಿರಾಟ್​ಗೆ ಬಿಸಿಸಿಐ ಕ್ಲಾಸ್​!

    ಇನ್ನು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ (Temba Bavuma) ಮುನ್ನಡೆಸಲಿದ್ದಾರೆ. ಇನ್ನು, ಈಗಾಗಲೇ ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನೇನು ಕೆಲ ದಿನಗಲ್ಲಿ ಭಾರತೀಯ ತಂಡವನ್ನೂ ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.

    ಇದನ್ನೂ ಓದಿ: Asia Cup 2022: ಐಪಿಎಲ್​ನಲ್ಲಿ ಮಿಂಚಿದ್ದವ್ರು, ಏಷ್ಯಾ ಕಪ್​ನಲ್ಲಿ ಗಪ್​ಚುಪ್​! ತ್ರಿಮೂರ್ತಿಗಳಿಗೆ ಕ್ರಿಕೆಟ್​ ಪ್ರೇಮಿಗಳ ಕ್ಲಾಸ್​

    ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ
    ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಏಡೆನ್ ಮಾರ್ಕ್ರಾಮ್, ಟ್ರಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರೀಝಾ ಹೆಂಡ್ರಿಕ್ಸ್, ಎನ್ರಿಚ್ ನಾರ್ಟ್ಜೆ, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ರಿಲ್ಲೇ ರೊಸೊವ್, ಡ್ವೇನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ತಬ್ರೇಜ್ ಶಮ್ಸಿ , ಕೇಶವ್ ಮಹಾರಾಜ್ ಮೀಸಲು ಆಟಗಾರರು: ಜಾರ್ನ್ ಫಾರ್ಟುಯಿನ್, ಮಾರ್ಕೊ ಜಾನ್ಸೆನ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ.
    Published by:guruganesh bhat
    First published: