ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಸಮಯದ ನಂತರ ಅಂತೂ ಒಂದು ಶತಕ (Virat Kohli Century) ಬಾರಿಸಿದ್ದಾರೆ. ಬರೋಬ್ಬರಿ 1021 ದಿನಗಳ ನಂತರ ಅವರು ಏಷ್ಯಾ ಕಪ್ನ (Asia Cup 2022) ಅಪ್ಘಾನಿಸ್ತಾನದ ತಂಡದ (India vs Afghanistan) ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಏಷ್ಯಾ ಕಪ್ನಲ್ಲಿ ಭಾರತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿದ ವಿರಾಟ್ ಕೊಹ್ಲಿ ಔಟ್ ಆಗದೇ ಅಜೇಯರಾಗಿ ಉಳಿದು ಅಭಿಮಾನಿಗಳ ವಾಟ್ಸ್ಆ್ಯಪ್ ಸ್ಟೇಟಸ್ಗೆ ಕಾರಣವಾಗಿದ್ದಾರೆ. ವಿರಾಟ್ ಕೊಹ್ಲಿ ಸೆಂಚುರಿ ಅವರ ಅಭಿಮಾನಿಗಳಲ್ಲಿ (Virat Kohli Fans Reactions) ಹರ್ಷೋದ್ಘಾರ ಮೂಡಿಸಿದ್ದು ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ಗಳ ತುಂಬಾ ಕಿಂಗ್ ಕೊಹ್ಲಿಯ ಆರ್ಭಟ ಜೋರಾಗಿದೆ. ಅಪ್ಘಾನಿಸ್ತಾನ ವಿರುದ್ಧ ಭಾರತ 101 ರನ್ಗಳ ಭರ್ಜರಿ ಜಯ ಗಳಿಸಿದೆ.
ವಿರಾಟ್ ಕೊಹ್ಲಿ 3 ವರ್ಷಗಳ ನಂತರ ಅಂದರೆ ನಿಖರವಾಗಿ 1020 ದಿನಗಳ ನಂತರ ಅಫ್ಘಾನಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಪಮದ್ಯವೊಂದರಲ್ಲಿ ಭಾರತಕ್ಕಾಗಿ ಶತಕ ಸಿಡಿಸಿದ್ದಾರೆ. ಮೊಹಮ್ಮದ್ ನಬಿ ಟಾಸ್ ಗೆದ್ದು ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಭಾರತ 2 20 ಓವರ್‌ಗಳಿಗೆ 212 ರನ್ ಗಳಿಸಿದ್ದರೆ ಅದರ ಪೈಕಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 61 ಎಸೆತಗಳಲ್ಲಿ ಔಟಾಗದೆ 122 ರನ್ ಗಳಿಸಿದ ರನ್ಗಳೇ ಇದ್ದವು.
ರಿಕಿ ಪಾಂಟಿಂಗ್ ಸರಿಗಟ್ಟಿದ ಕಿಂಗ್ ಕೊಹ್ಲಿ
ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ರನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಕೊನೆಯದಾಗಿ 2019 ರ ನವೆಂಬರ್‌ನಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಶತಕ ಗಳಿಸಿದ್ದರು.
ಪತ್ನಿ ಮತ್ತು ಮಗಳಿಗೆ ಶತಕ ಅರ್ಪಣೆ
ಅಲ್ಲದೇ ಇಂದಿನ ಈ ಅಜೇಯ ಭರ್ಜರಿ ಶತಕವನ್ನು ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾಗೆ ಅರ್ಪಿಸಿದ್ದಾರೆ. ತಮ್ಮ ಶತಕದ ಹಿಂದಿನ ಸ್ಪೂರ್ತಿ ಅನುಷ್ಕಾ ಶರ್ಮಾ ಎಂದಿದ್ದಾರೆ ಕಿಂಗ್ ಕೊಹ್ಲಿ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರಿವರು
ಸಚಿನ್ ತೆಂಡೂಲ್ಕರ್ - 664 ಪಂದ್ಯಗಳಲ್ಲಿ 100
ರಿಕಿ ಪಾಂಟಿಂಗ್ - 560 ಪಂದ್ಯಗಳಲ್ಲಿ 71 ಶತಕ
ವಿರಾಟ್ ಕೊಹ್ಲಿ - 468 ಪಂದ್ಯಗಳಲ್ಲಿ 71 ಶತಕ
ಏಷ್ಯಾಕಪ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ನಂತರ ವಿರಾಟ್ ಕೊಹ್ಲಿ ಭಾರತದ ಇನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಇದನ್ನೂ ಓದಿ: Urvashi Rautela: ಪಂತ್ ಆಯ್ತು, ಈಗ ಪಾಕ್ ಆಟಗಾರನೇ ಬೇಕಂತೆ! ಬಾಲಿವುಡ್ ನಟಿ ರೀಲ್ಸ್ ವಿಡಿಯೋ ವೈರಲ್
ಏಳು ಬಾರಿ ಏಷ್ಯಾ ಕಪ್ ಅನ್ನು ಗೆದ್ದಂತಹ ಭಾರತ ಕ್ರಿಕೆಟ್ ತಂಡದ ಮೇಲೆ ಅಭಿಮಾನಿಗಳು ತುಂಬಾನೇ ಭರವಸೆ ಇಟ್ಟಿಕೊಂಡಿದ್ದು, ಈಗ ಎಂಟನೇ ಬಾರಿಗೆ ಭಾರತ ಕ್ರಿಕೆಟ್ ತಂಡವು ಈ ಏಷ್ಯಾ ಕಪ್ ಅನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆ ಅಂತ ತುಂಬಾನೇ ಕುತೂಹಲದಿಂದ ಕಾಯುತ್ತಿದ್ದರು.. ಈಗಾಗಲೇ ಸೂಪರ್ ಫೋರ್ ಸುತ್ತಿನಲ್ಲಿ ಸತತವಾಗಿ ಆಡಿದ ಎರಡು ಪಂದ್ಯಗಳಲ್ಲಿ ಎರಡನ್ನೂ ಸೋತಿರುವಂತಹ ಭಾರತ ತಂಡಕ್ಕೆ ಇನ್ನೆಲ್ಲಿದೆ ಏಷ್ಯಾ ಕಪ್ ಫೈನಲ್ಗೆ ಹೋಗುವ ಅವಕಾಶ ಅಂತ ಬಹುತೇಕರಿಗೆ ಅನ್ನಿಸುತ್ತಿರಬಹುದು.
ಇದನ್ನೂ ಓದಿ: Asia Cup 2022: ಮೈದಾನದಲ್ಲಿ ಅಫ್ಘಾನ್ ಬೌಲರ್ಗೆ ಬ್ಯಾಟ್ ಬೀಸಿದ ಪಾಕ್ ಆಟಗಾರ, ಸ್ಟೇಡಿಯಂನಲ್ಲಿ ಬಡಿದಾಡಿಕೊಂಡ ಫ್ಯಾನ್ಸ್
ಈ ಬಾರಿಯ ಏಷ್ಯಾ ಕಪ್ ನ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ, ಸೂಪರ್ ಫೋರ್ ಸುತ್ತಿನಲ್ಲಿಯೂ ಸಹ ಅದನ್ನೇ ಮುಂದುವರೆಸುತ್ತೆ ಅಂತ ಅಭಿಮಾನಿಗಳು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸೂಪರ್ ಫೋರ್ ಸುತ್ತಿನಲ್ಲಿ ಮೊದಲ ಪಂದ್ಯವೇ ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನದೊಂದಿಗೆ ನಡೆದಿತ್ತು. ಎಲ್ಲರಿಗೂ ತಿಳಿದಿರುವಂತೆ ಆ ಪಂದ್ಯದಲ್ಲಿ ಭಾರತದ ವಿರುದ್ಧ 182 ರನ್ ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಹೀಗಾಗಿ ಭಾರತ ಏಷ್ಯಾ ಕಪ್ನಿಂದ ಹೊರಬಿದ್ದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ