• ಹೋಂ
  • »
  • ನ್ಯೂಸ್
  • »
  • sports
  • »
  • Asia Cup 2022: ವಕಾರ್ ಯೂನಿಸ್​ಗೆ ಕೌಂಟರ್​ ನೀಡಿದ ಪಠಾಣ್, ಇರ್ಫಾನ್ ಯಾರ್ಕರ್​ಗೆ ನೆಟ್ಟಿಗರು ಫಿದಾ

Asia Cup 2022: ವಕಾರ್ ಯೂನಿಸ್​ಗೆ ಕೌಂಟರ್​ ನೀಡಿದ ಪಠಾಣ್, ಇರ್ಫಾನ್ ಯಾರ್ಕರ್​ಗೆ ನೆಟ್ಟಿಗರು ಫಿದಾ

ಇರ್ಫಾನ್ ಪಠಾಣ್ ಮತ್ತು ವಕಾರ್ ಯೂನಿಸ್

ಇರ್ಫಾನ್ ಪಠಾಣ್ ಮತ್ತು ವಕಾರ್ ಯೂನಿಸ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬೌಲರ್ ಆಗಿರುವ ವಕಾರ್ ಯೂನಿಸ್ ಅವರು ಶಾಹೀನ್ ಅಫ್ರಿದಿ ಅವರ ಗಾಯದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಒಂದು ಪೋಸ್ಟ್ ನಲ್ಲಿ ಬರೆದಿದ್ದು, ಇದು ಭಾರತ ತಂಡವನ್ನು ಗುರಿಯಾಗಿಸಿಕೊಂಡು ಮಾಡಿದ ಟ್ವೀಟ್ ಎಂದು ಅಭಿಮಾನಿಗಳಲ್ಲಿ ಈ ಪಂದ್ಯದ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚು ಮಾಡಿದೆ.

ಮುಂದೆ ಓದಿ ...
  • Share this:

2022ರ ಏಷ್ಯಾ ಕಪ್ (Asia Cup) ಆರು ದೇಶಗಳ ಕ್ರಿಕೆಟ್ ತಂಡಗಳ (Cricket Teams) ಪಂದ್ಯಾವಳಿಯಾಗಿದ್ದು (Match), ಇದು ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅದರಲ್ಲೂ ಭಾರತ ತಂಡವು (Team India) ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ (Pakistan) ವಿರುದ್ದ ಆಡಲಿದೆ ಎಂಬ ವಿಚಾರ ತಿಳಿದ ದಿನದಿಂದ ಕ್ರಿಕೆಟ್ ಅಭಿಮಾನಿಗಳಂತೂ (Cricket Fans) ಆ ದಿನಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯದ ಬಗ್ಗೆ ಟ್ವೀಟ್ ಗಳು (Tweet) ಶುರುವಾಗಿವೆ.


ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬೌಲರ್ ಆಗಿರುವ ವಕಾರ್ ಯೂನಿಸ್ ಅವರು ಶಾಹೀನ್ ಅಫ್ರಿದಿ ಅವರ ಗಾಯದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಒಂದು ಪೋಸ್ಟ್ ನಲ್ಲಿ ಬರೆದಿದ್ದು, ಇದು ಭಾರತ ತಂಡವನ್ನು ಗುರಿಯಾಗಿಸಿಕೊಂಡು ಮಾಡಿದ ಟ್ವೀಟ್ ಎಂದು ಅಭಿಮಾನಿಗಳಲ್ಲಿ ಈ ಪಂದ್ಯದ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚು ಮಾಡಿದೆ.


ವಕಾರ್ ಯೂನಿಸ್ ಅವರ ಟ್ವೀಟ್ ಗೆ ಇರ್ಫಾನ್ ಪಠಾಣ್ ಪ್ರತಿಕ್ರಿಯೆ
ಈಗಾಗಲೇ ಶ್ರೀಲಂಕಾ ಜೊತೆಗೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಶಾಹೀನ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು ಮತ್ತು ಅದೇ ವಿಷಯವು ಅವರನ್ನು ಇಡೀ ಏಷ್ಯಾ ಕಪ್ ಪಂದ್ಯಾವಳಿ ಮತ್ತು ಇಂಗ್ಲೆಂಡ್ ವಿರುದ್ಧದ ಟ್ವೆಂಟಿ20 ಟೂರ್ನಿಯಿಂದ ಹೊರಗಿರುವಂತೆ ಮಾಡಿತು. ಆದರೆ ಏಷ್ಯಾ ಕಪ್ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಶಾಹೀನ್ ಅವರ ಅನುಪಸ್ಥಿತಿಯ ಬಗ್ಗೆ ವಕಾರ್ ಹೆಚ್ಚು ಕಾಳಜಿ ವಹಿಸಿದ್ದು ಈ ಟ್ವೀಟ್ ನಲ್ಲಿ ನಾವು ನೋಡಬಹುದು. ಇವರ ಈ ಒಂದು ಟ್ವೀಟ್ ಗೆ ಭಾರತದ ಆಟಗಾರ ಇರ್ಫಾನ್ ಪಠಾಣ್ ಸಹ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ ನೋಡಿ.


ಇದನ್ನೂ ಓದಿ: MS Dhoni: ಧೋನಿ ಕಾರು ಕಲೆಕ್ಷನ್​ ಹೇಗಿದೆ ಗೊತ್ತಾ? ಕ್ಯಾಪ್ಟನ್ ಕೂಲ್ ಬಳಿಯಿರುವ ಐಷಾರಾಮಿ ಕಾರುಗಳಿವು


ವಕಾರ್ ಯೂನಿಸ್ ಅವರ ಟ್ವೀಟ್ ಹೇಗಿತ್ತು
"ಶಾಹೀನ್ ಅವರ ಗಾಯವು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳಿಗೆ ದೊಡ್ಡ ಪರಿಹಾರವಾಗಿದೆ. ಶೀಘ್ರದಲ್ಲಿಯೇ ಶಾಹೀನ್ ಅವರು ಫಿಟ್ ಆಗಿ ಪಂದ್ಯವನ್ನು ಆಡುತ್ತಾರೆ ಎಂಬ ಸಾಧ್ಯತೆಗಳು ತುಂಬಾನೇ ಕಡಿಮೆ ಇವೆ" ಎಂದು ಆಗಸ್ಟ್ 28 ರಂದು ದುಬೈನಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ಭಾರತವನ್ನು ಎದುರಿಸುವ ಏಷ್ಯಾ ಕಪ್ ಅಭಿಯಾನಕ್ಕೆ ಮುಂಚಿತವಾಗಿ ಪಾಕಿಸ್ತಾನವು ಭಾರಿ ಹಿನ್ನಡೆ ಅನುಭವಿಸಿದ ಕೆಲವೇ ಕ್ಷಣಗಳ ನಂತರ ವಕಾರ್ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.


ಇದಕ್ಕೆ ಇರ್ಫಾನ್ ಪಠಾಣ್ ರಿಪ್ಲೈ
2021 ರ ಟ್ವೆಂಟಿ20 ವಿಶ್ವಕಪ್ ಟೈನಲ್ಲಿ ಪಾಕಿಸ್ತಾನದ ಐತಿಹಾಸಿಕ 10 ವಿಕೆಟ್ ಗಳ ಗೆಲುವಿನಲ್ಲಿ ಶಾಹೀನ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಭಾರತ ಕ್ರಿಕೆಟ್ ತಂಡದ ಆಗಿನ ಆರಂಭಿಕರಾದ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನು ಮೊದಲ ಮೂರು ಓವರ್ ಗಳಲ್ಲಿಯೇ ಔಟ್ ಮಾಡಿದ್ದರು. ವಕಾರ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಇರ್ಫಾನ್ ಅವರು "ಭಾರತ ತಂಡದ ವೇಗಿಗಳಾದ ಬುಮ್ರಾ ಮತ್ತು ಹರ್ಷಲ್ ಈ ಏಷ್ಯಾ ಕಪ್ ನಲ್ಲಿ ಆಡದಿರುವುದು ಇತರ ತಂಡಗಳಿಗೆ ಸಮಾಧಾನ ತಂದಿದೆ" ಎಂದು ಬರೆದಿದ್ದಾರೆ.


ಗಾಯದ ಕಾರಣದಿಂದಾಗಿ ಏಷ್ಯಾ ಕಪ್ ಪಂದ್ಯಾವಳಿಯಿಂದ ಹೊರಗುಳಿಯಲಿರುವ ಭಾರತ ಹರ್ಷಲ್ ಮತ್ತು ಬುಮ್ರಾ ಇಬ್ಬರನ್ನೂ ತಮ್ಮ ತಂಡದಲ್ಲಿ ಹೆಸರಿಸಿಲ್ಲ. ಹರ್ಷಲ್ ಸೈಡ್ ಸ್ಟ್ರೈನ್ ನಿಂದ ಬಳಲುತ್ತಿದ್ದರು ಮತ್ತು ಆದ್ದರಿಂದ ಪ್ರಸ್ತುತ ಎನ್‌ಸಿಎ ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಬುಮ್ರಾ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.


ಇದನ್ನೂ ಓದಿ: India vs Pakistan: ಪಾಕ್​ ಪಂದ್ಯದ ವೇಳೆ ಖಂಡಿತ ಒತ್ತಡ ಇರುತ್ತೆ, ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಹೇಳಿದ್ದೇನು?

top videos


    ಸದ್ಯಕ್ಕೆ ಭಾರತದ ವೇಗದ ಬೌಲಿಂಗ್ ದಾಳಿಯಲ್ಲಿ ಭುವನೇಶ್ವರ್ ಕುಮಾರ್, ಆವೇಶ್ ಖಾನ್ ಮತ್ತು ಅರ್ಷ್‌ದೀಪ್ ಸಿಂಗ್ ಇದ್ದಾರೆ. ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್-ಬೈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಏಷ್ಯಾ ಕಪ್ 2022 ಟೂರ್ನಮೆಂಟ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ದುಬೈ ಮತ್ತು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ.

    First published: