HOME » NEWS » Sports » CRICKET ASHTON AGAR TAKES NASTY BLOW TO HEAD AFTER DROPPING BROTHER WES CATCH VB

(VIDEO): ಫೀಲ್ಡಿಂಗ್ ಮಾಡುವಾಗ ಮುಖಕ್ಕೆ ಬಡಿದ ಚೆಂಡು; ಆಸೀಸ್ ಆಟಗಾರನಿಗೆ ಗಂಭೀರ ಗಾಯ

ವೆಸ್‌ ಅಗರ್‌ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಮಿಡ್‌ ಆನ್‌ನಲ್ಲಿ ನಿಂತಿದ್ದ ಆಷ್ಟನ್ ಅಗರ್‌ ಪ್ರಯತ್ನಿಸುತ್ತಾರೆ. ಆದರೆ ಆಯತಪ್ಪಿದ ಪರಿಣಾಮ ಚೆಂಡು ಅವರ ಹಣೆಯ ಮಧ್ಯ ಭಾಗಕ್ಕೆ ತಗುಲಿ ಅಲ್ಲೆ ಉರುಳಿ ಬಿದ್ದರು. ಈ ಸಂದರ್ಭ ಅವರ ಹಣೆಯಿಂದ ರಕ್ತ ಹರಿಯಲಾರಂಭಿಸಿತ್ತು.

Vinay Bhat | news18-kannada
Updated:November 18, 2019, 8:17 AM IST
(VIDEO): ಫೀಲ್ಡಿಂಗ್ ಮಾಡುವಾಗ ಮುಖಕ್ಕೆ ಬಡಿದ ಚೆಂಡು; ಆಸೀಸ್ ಆಟಗಾರನಿಗೆ ಗಂಭೀರ ಗಾಯ
ಆಷ್ಟನ್ ಅಗರ್
  • Share this:
ಆಸ್ಟ್ರೇಲಿಯಾದಲ್ಲಿ ನಡೆದ ಮಾರ್ಷ್​ ಒನ್ ಡೇ ಕಪ್ ಕ್ರಿಕೆಟ್ ಪಂದ್ಯದ ವೇಳೆ ಆಸೀಸ್ ಆಲ್ರೌಂಡರ್ ಆಟಗಾರ ಆಷ್ಟನ್ ಅಗರ್ ಮುಖಕ್ಕೆ ಚೆಂಡು ಬಡಿದಿದ್ದು, ಗಂಭೀರ ಗಾಯಗೊಂಡಿದ್ದಾರೆ.

ಸಹೋದರ ವೆಸ್‌ ಅಗರ್‌ ಅವರ ಕ್ಯಾಚ್‌ ಪಡೆಯುವ ವೇಳೆಯೇ ಆಷ್ಟನ್​​ ಈ ಆಘಾತಕ್ಕೆ ಸಿಲುಕಿದ್ದು, ಚೆಂಡಿನೇಟಿನಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದಾರೆ. ಅಡಿಲೇಡ್‌ನ‌ ಕರೆನ್‌ ರೋಲ್ಟನ್‌ ಓವಲ್​ನಲ್ಲಿ ಸೌತ್‌ ಆಸ್ಟ್ರೇಲಿಯ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯ ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.

 

ಧೋನಿ ಮಗಳಷ್ಟೇ ಅಲ್ಲ ಟೀಂ ಇಂಡಿಯಾದ ಈ ಆಟಗಾರನ ಮಗುಕೂಡ ಈಗ ಫೇಮಸ್!

ವೆಸ್‌ ಅಗರ್‌ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಮಿಡ್‌ ಆನ್‌ನಲ್ಲಿ ನಿಂತಿದ್ದ ಆಷ್ಟನ್ ಅಗರ್‌ ಪ್ರಯತ್ನಿಸುತ್ತಾರೆ. ಆದರೆ ಆಯತಪ್ಪಿದ ಪರಿಣಾಮ ಚೆಂಡು ಅವರ ಹಣೆಯ ಮಧ್ಯ ಭಾಗಕ್ಕೆ ತಗುಲಿ ಅಲ್ಲೆ ಉರುಳಿ ಬಿದ್ದರು. ಈ ಸಂದರ್ಭ ಅವರ ಹಣೆಯಿಂದ ರಕ್ತ ಹರಿಯಲಾರಂಭಿಸಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

 “ಪಶ್ಚಿಮ ಆಸ್ಟ್ರೇಲಿಯಾ ತಂಡದ ಆಟಗಾರ ಆಯಸ್ಟನ್ ಅಗರ್ ಫೀಲ್ಡಿಂಗ್ ವೇಳೆ ಕನ್ನಡಕ ಧರಿಸಿದ್ದರು. ಚೆಂಡು ಬಡಿದ ಪರಿಣಾಮವಾಗಿ ಅವರ ಕನ್ನಡಕ ತುಂಡಾಗಿತ್ತು. ತುಂಡಾದ ಕನ್ನಡಕದ ಚೂರುಗಳು ಅವರ ಮುಖಕ್ಕೆ ಬಡಿದಿದೆ. ಹೀಗಾಗಿ ರಕ್ತ ಹರಿಯಲಾರಂಭಿಸಿದೆ. ಹೆಚ್ಚಿನ ಅಪಾಯ ಆಗಿಲ್ಲ" ಎಂದು ವೆಸ್ ಅಗರ್ ಹೇಳಿದ್ದಾರೆ.

8 ತಿಂಗಳ ನಿಷೇಧದ ಬಳಿಕ ಭರ್ಜರಿ ಕಮ್​ಬ್ಯಾಕ್​; 39 ಎಸೆತಗಳಲ್ಲಿ ಪೃಥ್ವಿ ಶಾ ಸಿಡಿಸಿದ ರನ್ ಎಷ್ಟು ಗೊತ್ತಾ?

 

First published: November 18, 2019, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading