HOME » NEWS » Sports » CRICKET ASHOK DINDA INDIAN FAST BOWLER ASHOK DINDA RETIRES FROM ALL FORMS OF CRICKET VB

Ashok Dinda Retires: ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಅಶೋಕ್ ದಿಂಡಾ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಆರ್​ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳ ಪರ ಆಡಿ ಗಮನ ಸೆಳೆದಿದ್ದ ಬಲಗೈ ವೇಗದ ಬೌಲರ್‌ ದಿಂಡಾ, ತಮ್ಮ ಹಠಾತ್ ನಿವೃತ್ತಿ ನಿರ್ಧಾರದ ಹಿಂದೆ ವಯಸ್ಸಿನ ಪಾತ್ರ ದೊಡ್ಡದಾಗಿದೆ ಎಂದು ಹೇಳಿಕೊಂಡಿದ್ದಾರೆ.

news18-kannada
Updated:February 3, 2021, 8:15 AM IST
Ashok Dinda Retires: ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಅಶೋಕ್ ದಿಂಡಾ
Ashok Dinda
  • Share this:
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಅಶೋಕ್ ದಿಂಡಾ ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡದ ಪರ ಆಡಿದ್ದ 37 ವರ್ಷದ ಅನುಭವಿ ದಿಂಡಾ ಮಂಗಳವಾರ ಹಠಾತ್‌ ನಿವೃತ್ತಿಯಾಗಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದವರಾದ ಅಶೋಕ್ ದಿಂಡಾ ಭಾರತ ಪರ 13 ಏಕದಿನ ಮತ್ತು 9 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 12 ಮತ್ತು 17 ವಿಕೆಟ್​ ಪಡೆದಿದ್ದಾರೆ. ವೆಸ್ಟ್​ ಬೆಂಗಾಲ್​ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದು, ಒಟ್ಟು 116 ಪಂದ್ಯಗಳಲ್ಲಿ 420 ವಿಕೆಟ್ ಕಬಳಿಸಿದ್ದಾರೆ. 98 ಲಿಸ್ಟ್​ ಎ ಪಂದ್ಯಗಳಿಂದ 151 ವಿಕೆಟ್​ ಪಡೆದಿದ್ದರು.

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಆರ್​ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳ ಪರ ಆಡಿ ಗಮನ ಸೆಳೆದಿದ್ದ ಬಲಗೈ ವೇಗದ ಬೌಲರ್‌ ದಿಂಡಾ, ತಮ್ಮ ಹಠಾತ್ ನಿವೃತ್ತಿ ನಿರ್ಧಾರದ ಹಿಂದೆ ವಯಸ್ಸಿನ ಪಾತ್ರ ದೊಡ್ಡದಾಗಿದೆ ಎಂದು ಹೇಳಿಕೊಂಡಿದ್ದಾರೆ.

ICC World Test Championship: ಫೈನಲ್​ಗೇರಿದ ನ್ಯೂಜಿಲೆಂಡ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ನಡುವೆ ಪೈಪೋಟಿ..!

'ಭಾರತ ಪರ ಆಡಬೇಕು ಎಂಬುದು ಪ್ರತಿಯೊಬ್ಬ ಆಟಗಾರನ ಕನಸು. ನಾನು ಬೆಂಗಾಲ್ ತಂಡದಲ್ಲಿ ಆಡಿದ್ದೆ. ಹಾಗಾಗಿ ನನಗೆ ಭಾರತ ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಭಾರತ ಪರ ಆಡುವ ಅವಕಾಶವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನನಗೆ ನೀಡಿತು ಅಂದುಕೊಳ್ಳುತ್ತೇನೆ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಡಾ ಹೇಳಿದ್ದಾರೆ.

ಇನ್ನೂ 'ಬೆಂಗಾಲ್ ಪರ ಆಡುತ್ತಿದ್ದಾಗ ನನಗೆ ದೀಪ್‌ದಾಸ್ ಗುಪ್ತಾ, ರೋಹನ್ ಗವಾಸ್ಕರ್‌ನಂತ ಹಿರಿಯರು ಮಾರ್ಗದರ್ಶನ ನೀಡಿದ್ದಾರೆ. ಪ್ರತೀ ವಿಕೆಟ್ ಸಿಕ್ಕಾಗಲೂ ನನಗೆ ಬೆಂಬಲ ಸಿಗುತ್ತಿತ್ತು,' ಎಂದು ದಿಂಡಾ ತನ್ನ ಆಟದ ವೇಳೆಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

'ನಾನು ಸೌರವ್ ಗಂಗೂಲಿ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. 2005-06ರಲ್ಲಿ ಸೌರವ್ ಗಂಗೂಲಿ ನನ್ನನ್ನು ಬೆಂಗಾಲ್ 16 ಸದಸ್ಯರ ತಂಡಕ್ಕೆ ಆಯ್ಕೆ ಮಾಡಿಕೊಂಡರು. ನಾನು ಮಹಾರಾಷ್ಟ್ರದ ವಿರುದ್ಧ ಪದಾರ್ಪಣೆ ಮಾಡಿದ್ದೆ. ನಾನು ಯಾವಾಗಲೂ ದಾದಾಗೆ ಋಣಿಯಾಗಿರುತ್ತೇನೆ. ದಾದಾ ನನಗೆ ಸದಾ ಬೆಂಬಲ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.

IPL 2021: ಹರಾಜಿಗೂ ಮುನ್ನ ಸ್ಟಾರ್​ ಆಲ್​ರೌಂಡರ್​ನ್ನು ಖರೀದಿಸಲು RCB ಪ್ಲ್ಯಾನ್..!'ಈಗ ಕೋಚಿಂಗ್‌ ಕಡೆಗೆ ಎದುರು ನೋಡುತ್ತಿದ್ದೇನೆ. ಈ ಬಗ್ಗೆ ಗೋವಾ ಕ್ರಿಕೆಟ್‌ ಸಂಸ್ಥೆ ಜೊತೆಗೆ ಮಾತೂಕತೆ ನಡೆಸಿದ್ದೇನೆ. ಬಂಗಾಳದಲ್ಲಿ ಪ್ರತಿಭಾನ್ವೇಶಣೆ ನಡೆಸುವಂತೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಆಹ್ವಾನಿಸಿದ್ದಾರೆ. ಮುಂದಿನ ವಾರವೇ ಕೆಲಸ ಆರಂಭಿಸಿ ಎಂದಿದ್ದಾರೆ. ಆದರೆ ಈ ಬಗ್ಗೆ ನಾನಿನ್ನೂ ಆಲೋಚಿಸಿಲ್ಲ. ಕುಟುಂಬದವರೊಟ್ಟಿಗೆ ಕೆಲಸ ಸಮಯ ಕಳೆಯಬೇಕೆಂದಿದ್ದೇನೆ' ಎಂದು ಹೇಳಿದ್ದಾರೆ.

2005ರಿಂದ 2019ರವರೆಗೂ ಬೆಂಗಾಲ್ ತಂಡದ ಪರ ಆಡುತ್ತಿದ್ದ ದಿಂಡಾ ಕಳೆದ ವರ್ಷ ನಾಯಕ ಅಭಿಮನ್ಯು ಈಶ್ವರನ್ ಮತ್ತು ಕೋಚ್​ ರಣದೇಬ್ ಬೋಸ್ ಜತೆ ಜಗಳವಾಡಿದ್ದರು. ಈ ಬೆಳವಣಿಗೆಯ ಬಳಿಕ ಕ್ಷಮೆ ಕೇಳಲು ಹಿಂದೇಟು ಹಾಕಿದ್ದರಿಂದ ಶಿಸ್ತು ಕ್ರಮ ಜರುಗಿಸಿ ಅವರನ್ನು ತಂಡದಿಂದ ಹೊರ ಹಾಕಲಾಗಿತ್ತು. ನಂತರ 2021ರ ದೇಶಿ ಆವೃತ್ತಿಯಲ್ಲಿ ಗೋವಾ ತಂಡದ ಆಡುತ್ತಿದ್ದರು.
Published by: Vinay Bhat
First published: February 3, 2021, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories