ಟೆಸ್ಟ್ ಕ್ರಿಕೆಟ್ನ ರಣರಂಗ ಆ್ಯಶಸ್ ಸರಣಿಗಾಗಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿಯಲ್ಲಿದೆ. ಈ ಕುತೂಹಲಕಾರಿ ಸರಣಿ ಮೂಲಕವೇ ಟೆಸ್ಟ್ ಕ್ರಿಕೆಟ್ಗೆ ಹೊಸ ಲುಕ್ ನೀಡಲು ಐಸಿಸಿ ನಿರ್ಧರಿಸಿದೆ. ಅದರಂತೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಆಟಗಾರರ ಜೆರ್ಸಿ ಮೇಲೆ ಹೆಸರು ಮತ್ತು ನಂಬರ್ ಮುದ್ರಣವಾಗಲಿದೆ.
ವಿಶ್ವವೇ ಕಾತುರದಿಂದ ಕಾಯುತ್ತಿರುವ ಆ್ಯಶಸ್ ಸರಣಿ ಮೂಲಕ ಇಂತಹದೊಂದು ಪ್ರಯೋಗ ಮಾಡಲಾಗುತ್ತಿದ್ದು, ಏಕದಿನ ಮತ್ತು ಟಿ20 ಮಾದರಿಯಲ್ಲಿ ಇನ್ಮುಂದೆ ಟೆಸ್ಟ್ ಪಂದ್ಯಕ್ಕೂ ಹೆಸರು ಮತ್ತು ಸಂಖ್ಯೆಯನ್ನು ಮುದ್ರಿಸಲಾಗುತ್ತದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಈ ಸುದ್ದಿ ಹೊರ ಬೀಳುತ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟ್ ತನ್ನ ಟ್ವಿಟರ್ ಖಾತೆಯಲ್ಲಿ ಜೋ ರೂಟ್ ಅವರ ಜೆರ್ಸಿಯಲ್ಲಿ ಹೆಸರು ಮತ್ತು ನಂಬರ್ ಪ್ರದರ್ಶಿಸಿದೆ. ಹಾಗೆಯೇ ಐಸಿಸಿ ಕೂಡ ತನ್ನ ಸಾಮಾಜಿಕ ಖಾತೆಯಲ್ಲಿ ಮೊಯೀನ್ ಅಲಿ ಹಾಗೂ ಸ್ಟುವರ್ಟ್ ಬ್ರಾಡ್ ಅವರ ಹೊಸ ಜೆರ್ಸಿ ಲುಕ್ ಅನ್ನು ಪ್ರದರ್ಶಿಸುವ ಮೂಲಕ ಟೆಸ್ಟ್ ಕ್ರಿಕೆಟ್ನ ನೂತನ ಉಡುಪಿನ ಬದಲಾವಣೆಯನ್ನು ದೃಢಪಡಿಸಿದೆ.
Names and numbers on the back of Test shirts! 🏴🏏 pic.twitter.com/M660T2EI4Z
— England Cricket (@englandcricket) July 22, 2019
Red ball ☑️
Whites ☑️
Shirt numbers ... ☑️
👍 or 👎 ? pic.twitter.com/Jw5ykBZxuv
— ICC (@ICC) July 23, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ