ಬರ್ಮಿಂಗ್ಹ್ಯಾಮ್ (ಆ. 01): ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ ಕದನಕ್ಕೆ ಇಂದು ಭರ್ಜರಿ ಚಾಲನೆ ದೊರಕಿದೆ. ಈ ಮೂಲಕ ಐಸಿಸಿಯ ಕನಸಿನ ಕೂಸು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇಂದಿನಿಂದ ಆರಂಭವಾಗಿದೆ.
ಸದ್ಯ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ, ಆರಂಭದಲ್ಲೇ ಆಘಾತ ಅನುಭವಿಸಿದೆ. ಸ್ಟುವರ್ಟ್ ಬ್ರಾಡ್ ಬೌಲಿಂಗ್ ದಾಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಕಾಂಗರೂ ಪಡೆ ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಕೇವಲ 2 ರನ್ಗೆ, ಕ್ಯಾಮ್ರನ್ ಬೆನ್ಕ್ರಾಫ್ಟ್ 8 ಹಾಗೂ ಉಸ್ಮಾನ್ ಖ್ವಾಜಾ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ರೋಹಿತ್ ಹೆಂಡತಿ ಜೊತೆ ವಿರಾಟ್ ಸುತ್ತಾಟ; ವೈರಲ್ ಆಗುತ್ತಿದೆ ಫೋಟೋ
ಆಸ್ಟ್ರೇಲಿಯಾ ತಂಡವನ್ನು ವಿಕೆಟ್ ಕೀಪರ್ ಟಿಮ್ ಪೈನ್ ಮುನ್ನಡೆಸುತ್ತಿದ್ದು, ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ನಾಯಕನಾಗಿದ್ದಾರೆ. ಬೆನ್ ಸ್ಟೋಕ್ಸ್ ಉಪನಾಯಕ ಸ್ಥಾನವನ್ನು ವಹಿಸಿದ್ದಾರೆ.
ವಿಶೇಷ ಎಂದರೆ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದು ವಿಶ್ವದಾಖಲೆಗೆ ಪಾತ್ರರಾಗಿದ್ದ ಮಿಚೆಲ್ ಸ್ಟಾರ್ಕ್ರವರನ್ನು ಮೊದಲ ಆ್ಯಶಸ್ ಸರಣಿಯಿಂದ ಕೈ ಬಿಟ್ಟಿರುವುದು ಆಶ್ಚರ್ಯಕ್ಕೆ ಕಾರಣರಾಗಿದೆ. ಐದು ದಿನಗಳ ಕಾಲ ಈ ಪಂದ್ಯ ನಡೆಯಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಗೆದ್ದ ತಂಡಕ್ಕೆ ಸಣ್ಣ ಟ್ರೋಫಿ: ಆಶಸ್ ಸರಣಿ ಗೆದ್ದವರಿಗೆ ಸಿಗುವುದು ಕೇವಲ 11 ಸೆಂಟಿ ಮೀಟರ್ ಎತ್ತರದ ಬೂದಿ ಗಡಿಗೆ. ಇದು ಇಂಗ್ಲೆಂಡ್-ಆಸ್ಪ್ರೇಲಿಯಾ ಟೆಸ್ಟ್ ಕ್ರಿಕೆಟ್ ಹಿರಿಮೆಯ ಸಂಕೇತವಾಗಿದೆ. ವಿಶ್ವದ ಅತಿಕಿರಿಯ ಮೂಲ ಟ್ರೋಫಿ ಎಂಸಿಸಿ ವಶದಲ್ಲಿದೆ. ಇದರ ಪ್ರತಿಕೃತಿಯನ್ನಷ್ಟೇ ವಿಜೇತರಿಗೆ ನೀಡಲಾಗುತ್ತದೆ.
1883ರಲ್ಲಿ ಹುಟ್ಟು: 1877ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ಪಂದ್ಯ ನಡೆದಿತ್ತು. ಆದರೆ 1883ರ ನಂತರ ನಡೆದ ಸರಣಿಗಳಷ್ಟೇ ಆಶಸ್ ಸರಣಿ ಎದು ಪರಿಗಣಿಸಲಾಗಿದೆ. ಇದಕ್ಕೆ ಮುನ್ನ ಉಭಯ ತಂಡಗಳ ನಡುವೆ 16 ಟೆಸ್ಟ್ ನಡೆದಿದ್ದವು, ಇದರಲ್ಲಿ ಆಸೀಸ್ 10 ಹಾಗೂ ಇಂಗ್ಲೆಂಡ್ 2ರಲ್ಲಿ ಗೆಲುವು ಸಾಧಿಸಿದ್ದವು. ಉಳಿದ 4 ಪಂದ್ಯಗಳು ಡ್ರಾ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ