Ashes 2019: ಡ್ರಾನಲ್ಲಿ ಅಂತ್ಯಕಂಡ ಆ್ಯಶಸ್ ಟೆಸ್ಟ್​ ಸರಣಿ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಗೆಲುವು

ಮ್ಯಾಥ್ಯೂ ಹೇಡ್ ಶತಕ ಬಾರಿಸಿ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ನಾಯಕ ಟಿಮ್ ಪೈನ್ ಸೇರಿ ಉಳಿದ ಬ್ಯಾಟ್ಸ್​ಮನ್​ಗಳು ಇವರಿಗೆ ಸಾತ್ ನೀಡಲಿಲ್ಲ.

Vinay Bhat | news18-kannada
Updated:September 16, 2019, 8:35 AM IST
Ashes 2019: ಡ್ರಾನಲ್ಲಿ ಅಂತ್ಯಕಂಡ ಆ್ಯಶಸ್ ಟೆಸ್ಟ್​ ಸರಣಿ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಗೆಲುವು
ಆಸ್ಟ್ರೇಲಿಯಾ ಕ್ರಿಕೆಟ್ ತಂಡ
  • Share this:
ಬೆಂಗಳೂರು (ಸೆ. 16): ಲಂಡನ್​​ನ ಓವಲ್ ಮೈದಾನದಲ್ಲಿ ನಡೆದ ಆ್ಯಶಸ್ ಟೆಸ್ಟ್​ ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 135 ರನ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಐದು ಪಂದ್ಯಗಳ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಉಭಯ ತಂಡಗಳು 2-2 ರ ಸಮಬಲ ಸಾಧಿಸಿದ್ದು, ಡ್ರಾನಲ್ಲಿ ಅಂತ್ಯ ಕಂಡಿದೆ.

ರೋಚಕತೆಯಿಂದ ಕೂಡಿದ್ದ ಐದನೇ ಟೆಸ್ಟ್​​ನಲ್ಲಿ ಪಂದ್ಯದಲ್ಲಿ ಆಂಗ್ಲರು, ಆಸೀಸ್​ಗೆ ಗೆಲ್ಲಲು 399 ರನ್​ಗಳ ಟಾರ್ಗೆಟ್ ನೀಡಿದ್ದರು. ಈ ಗುರಿ ಬೆನ್ನಟ್ಟಿದ ಆಸೀಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ವಾರ್ನರ್(11) ಮತ್ತೆ ವೈಫಲ್ಯ ಅನುಭವಿಸಿದರೆ, ಮರ್ಕಸ್ ಹ್ಯಾರಿಸ್(9), ಲಬುಸ್ಚಗ್ನೆ(14), ಮಿಚೆಲ್ ಮಾರ್ಶ್​(24) ಬೇಗನೆ ಪೆವಿಲಿಯನ್ ಸೇರಿಕೊಂಡರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಸ್ಟೀವ್ ಸ್ಮಿತ್ ಕೂಡ 53 ಎಸೆತಗಳಲ್ಲಿ 23 ರನ್​ಗೆ ಔಟ್ ಆಗಿದ್ದು ತಂಡಕ್ಕೆ ಹೊಡ್ಡ ಹೊಡೆತ ಬಿದ್ದಂತಾಯಿತು.

ಅಫ್ಘಾನ್ ಆಟಗಾರರ ಭರ್ಜರಿ ಆಟ; ಬಾಂಗ್ಲಾ ಹುಲಿಗಳಿಗೂ ಮಣ್ಣು ಮುಕ್ಕಿಸಿದ ಕ್ರಿಕೆಟ್ ಶಿಶುಗಳು

ಆದರೂ ಮ್ಯಾಥ್ಯೂ ಹೇಡ್ ಶತಕ ಬಾರಿಸಿ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ನಾಯಕ ಟಿಮ್ ಪೈನ್ ಸೇರಿ ಉಳಿದ ಬ್ಯಾಟ್ಸ್​ಮನ್​ಗಳು ಇವರಿಗೆ ಸಾತ್ ನೀಡಲಿಲ್ಲ. ಹೇಡ್ 166 ಎಸೆತಗಳಲ್ಲಿ 117 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಕಾಂಗರೂ ಪಡೆ 77 ಓವರ್​​ನಲ್ಲಿ 263 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಟುವರ್ಟ್​​ ಬ್ರಾಡ್ ಹಾಗೂ ಜಾಕ್ ಲೀಚ್ ತಲಾ 4 ವಿಕೆಟ್ ಕಿತ್ತರೆ, ಜೋ ರೂಟ್ 2 ವಿಕೆಟ್ ಪಡೆದರು.

 ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಸ್ಟೀವ್ ಸ್ಮಿತ್ ಹಾಗೂ ಬೆನ್ ಸ್ಟೋಕ್ಸ್​​ ಸರಣಿಶ್ರೇಷ್ಠ ಬಾಜಿಕೊಂಡರೆ, ಜೋಫ್ರಾ ಆರ್ಚೆರ್ ಪಂದ್ಯಶ್ರೇಷ್ಠ ತಮ್ಮದಾಗಿಸಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಜಾಸ್ ಬಟ್ಲರ್​​ರ 70 ಹಾಗೂ ನಾಯಕ ಜೋ ರೂಟ್​ರ 57 ರನ್​ಗಳ ನೆರವಿನಿಂದ 294 ರನ್​ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ನಡೆಸಿದ ಕಾಂಗರೂ ಪಡೆ ಸ್ಟೀವ್ ಸ್ಮಿತ್​ರ 80 ಹಾಗೂ ಮರ್ನಸ್ ಲಬುಸ್ಚಗ್ನೆ ಅವರ 48 ರನ್​ಗಳ ನೆರವಿನಿಂದ 225 ರನ್​ಗೆ ಆಲೌಟ್ ಆಗಿತ್ತು.

69 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಆಂಗ್ಲರು ಭರ್ಜರಿ ಆಟ ಪ್ರದರ್ಶಿಸಿದರು. ಜೋ ಡೆನ್ಲಿ 206 ಎಸೆತಗಳಲ್ಲಿ 94 ರನ್ ಬಾರಿಸಿ ಶತಕ ವಂಚಿತರಾದೆರೆ, ಬೆನ್ ಸ್ಟೋಕ್ಸ್​ 67 ರನ್ ಚಚ್ಚಿದರು. ಜಾಸ್ ಬಟ್ಲರ್ 47 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 329 ರನ್​ಗೆ ಆಲೌಟ್ ಆಗಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 399 ರನ್​ಗಳ ಟಾರ್ಗೆಟ್ ನೀಡಿತ್ತು.

First published: September 16, 2019, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading