Ashes 2019: ರೋಚಕ ಘಟ್ಟದತ್ತ ಆ್ಯಶಸ್ ಟೆಸ್ಟ್​ ಸರಣಿ; ಗೆಲುವಿಗಾಗಿ ಆಸೀಸ್-ಆಂಗ್ಲರ ಹೋರಾಟ!

ಮ್ಯಾಥ್ಯೂ ಹೇಡ್ ಅರ್ಧಶತಕ ಬಾರಿಸಿ ಗೆಲುವಿಗೆ ಹೋರಾಟ ನಡೆಸುತ್ತಿದ್ದರೆ, ನಾಯಕ ಟಿಮ್ ಪೈನ್ ಸಾತ್ ನೀಡುತ್ತಿದ್ದಾರೆ. ಆಸೀಸ್ ಗೆಲುವಿಗೆ ಇನ್ನೂ 200ಕ್ಕೂ ಅಧಿಕ ರನ್​ಗಳ ಅವಶ್ಯಕತೆ ಇದೆ.

Vinay Bhat | news18-kannada
Updated:September 15, 2019, 9:05 PM IST
Ashes 2019: ರೋಚಕ ಘಟ್ಟದತ್ತ ಆ್ಯಶಸ್ ಟೆಸ್ಟ್​ ಸರಣಿ; ಗೆಲುವಿಗಾಗಿ ಆಸೀಸ್-ಆಂಗ್ಲರ ಹೋರಾಟ!
ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್​
  • Share this:
ಬೆಂಗಳೂರು (ಸೆ. 15): ಲಂಡನ್ ಓವಲ್ ಮೈದಾನದಲ್ಲಿ ಸಾಗುತ್ತಿರುವ ಆ್ಯಶಸ್ ಸರಣಿಯ ಅಂತಿಮ 5ನೇ ಟೆಸ್ಟ್​ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಗೆಲ್ಲಲು 399 ರನ್​ಗಳ ಬೃಹತ್ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ 200 ರನ್ ಆಗುವ ಹೊತ್ತಿಗೆ 5 ವಿಕೆಟ್ ಕಳೆದುಕೊಂಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಜಾಸ್ ಬಟ್ಲರ್​​ರ 70 ಹಾಗೂ ನಾಯಕ ಜೋ ರೂಟ್​ರ 57 ರನ್​ಗಳ ನೆರವಿನಿಂದ 294 ರನ್​ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ನಡೆಸಿದ ಕಾಂಗರೂ ಪಡೆ ಸ್ಟೀವ್ ಸ್ಮಿತ್​ರ 80 ಹಾಗೂ ಮರ್ನಸ್ ಲಬುಸ್ಚಗ್ನೆ ಅವರ 48 ರನ್​ಗಳ ನೆರವಿನಿಂದ 225 ರನ್​ಗೆ ಆಲೌಟ್ ಆಗಿತ್ತು.

69 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಆಂಗ್ಲರು ಭರ್ಜರಿ ಆಟ ಪ್ರದರ್ಶಿಸಿದರು. ಜೋ ಡೆನ್ಲಿ 206 ಎಸೆತಗಳಲ್ಲಿ 94 ರನ್ ಬಾರಿಸಿ ಶತಕ ವಂಚಿತರಾದೆರೆ, ಬೆನ್ ಸ್ಟೋಕ್ಸ್​ 67 ರನ್ ಚಚ್ಚಿದರು. ಜಾಸ್ ಬಟ್ಲರ್ 47 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 329 ರನ್​ಗೆ ಆಲೌಟ್ ಆಗಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 399 ರನ್​ಗಳ ಟಾರ್ಗೆಟ್ ನೀಡಿತು.

7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್ಸ್​; ಇಲ್ಲಿದೆ ರೋಚಕ ಕ್ಷಣದ ವಿಡಿಯೋ!

 ಸದ್ಯ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ವಾರ್ನರ್(11) ಮತ್ತೆ ವೈಫಲ್ಯ ಅನುಭವಿಸಿದರೆ, ಮರ್ಕಸ್ ಹ್ಯಾರಿಸ್(9), ಲಬುಸ್ಚಗ್ನೆ(14), ಮಿಚೆಲ್ ಮಾರ್ಶ್​(24) ಬೇಗನೆ ಪೆವಿಲಿಯನ್ ಸೇರಿಕೊಂಡರು. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಸ್ಟೀವ್ ಸ್ಮಿತ್ ಕೂಡ 53 ಎಸೆತಗಳಲ್ಲಿ 23 ರನ್​ಗೆ ಔಟ್ ಆಗಿದ್ದು ತಂಡಕ್ಕೆ ಹೊಡ್ಡ ಹೊಡೆತ ಬಿದ್ದಂತಾಗಿದೆ.

ಆದರೂ ಮ್ಯಾಥ್ಯೂ ಹೇಡ್ ಅರ್ಧಶತಕ ಬಾರಿಸಿ ಗೆಲುವಿಗೆ ಹೋರಾಟ ನಡೆಸುತ್ತಿದ್ದರೆ, ನಾಯಕ ಟಿಮ್ ಪೈನ್ ಸಾತ್ ನೀಡುತ್ತಿದ್ದಾರೆ. ಆಸೀಸ್ ಗೆಲುವಿಗೆ ಇನ್ನೂ 200ಕ್ಕೂ ಅಧಿಕ ರನ್​ಗಳ ಅವಶ್ಯಕತೆ ಇದೆ. ಇತ್ತ ಇಂಗ್ಲೆಂಡ್ ಗೆಲುವಿಗೆ ಕಾಂಗರೂ ಪಡೆಯ 5 ವಿಕೆಟ್​ಗಳು ಬೇಕು.

ಈಗಾಗಲೇ ಐದು ಪಂದ್ಯಗಳ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ರ ಮುನ್ನಡೆ ಸಾಧಿಸಿದೆ. ಹೀಗಾಗಿ ಆಸೀಸ್ ಪಡೆ ಕನಿಷ್ಠ ಈ ಪಂದ್ಯ ಡ್ರಾ ಮಾಡಿಕೊಂಡರೆ ಸರಣಿ ಗೆದ್ದು ಬೀಗಲಿದೆ. ಇಂಗ್ಲೆಂಡ್ ಗೆದ್ದರೆ ಸರಣಿ ಸಮಬಲ ಆಗಲಿದೆ. ಎರಡನೇ ಟೆಸ್ಟ್​ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡಿತ್ತು.

First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading