Ashes 2019: ಹೊಸ ದಾಖಲೆಯೊಂದಿಗೆ ಮತ್ತೆ ಭರ್ಜರಿ ಕಮ್​ಬ್ಯಾಕ್​ ಮಾಡಿದ ಸ್ಮಿತ್!

ತ್ ಅತ್ಯುತ್ತಮ ಆಟ ಪ್ರದರ್ಶಿಸಿ ಮತ್ತೊಂದು ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಆ್ಯಶಸ್ ಸರಣಿಯಲ್ಲಿ ಸತತ ಎಂಟನೇ ಬಾರಿಗೆ 50ಕ್ಕೂ ಅಧಿಕ ರನ್ ಬಾರಿಸಿದ ಮೊದಲ ಆಟಗಾರ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ.

Vinay Bhat | news18-kannada
Updated:September 5, 2019, 11:05 AM IST
Ashes 2019: ಹೊಸ ದಾಖಲೆಯೊಂದಿಗೆ ಮತ್ತೆ ಭರ್ಜರಿ ಕಮ್​ಬ್ಯಾಕ್​ ಮಾಡಿದ ಸ್ಮಿತ್!
ಸ್ಟೀವ್ ಸ್ಮಿತ್
  • Share this:
ಬೆಂಗಳೂರು (ಸೆ. 05): ಇತ್ತೀಚೆಗಷ್ಟೆ ಐಸಿಸಿ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಹೊಸ ದಾಖಲೆಯೊಂದಿಗೆ ಭರ್ಜರಿ ಕಮ್​ಬ್ಯಾಕ್ ಮಾಡಿದ್ದಾರೆ.

ಸದ್ಯ ಸಾಗುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್​ನಲ್ಲಿ ಸ್ಮಿತ್ ಮತ್ತೊಮ್ಮ ತಂಡಕ್ಕೆ ಆಸರೆಯಾಗಿದ್ದಾರೆ. 2ನೇ ಟೆಸ್ಟ್​​ನಲ್ಲಿ ಗಾಯಗೊಂಡ ಪರಿಣಾಮ 3ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲಿಲ್ಲ. ನಿನ್ನೆ ಆರಂಭವಾಗಿರುವ ನಾಲ್ಕನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು.

ಮೊದಲ ಓವರ್​ನಲ್ಲೇ ಡೇವಿಡ್ ವಾರ್ನರ್ ಸೊನ್ನೆ ಸುತ್ತಿದರೆ, ಮಾರ್ಕಸ್ ಹ್ಯಾರಿಸ್ 13 ರನ್​ಗೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಸ್ಟೀವ್ ಸ್ಮಿತ್ ಹಾಗೂ ಮರ್ನಸ್ ಲಬುಸ್​​ಚಗ್ನೆ ಆರಂಭಿಕ ಆಘಾತದಿಂದ ತಂಡವನ್ನು ಮೇಲೆತ್ತಿದರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 116 ರನ್​ಗಳ ಕಾಣಿಕೆ ನೀಡಿದರು. ಚೆನ್ನಾಗಿ ಆಡುತ್ತಿದ್ದ ಲಬುಸ್​​ಚಗ್ನೆ 67 ರನ್ ಗಳಿಸಿರುವಾಗ ಔಟ್ ಆದರು.

ಸಣ್ಣ ರಾಜ್ಯದ ಕ್ರಿಕೆಟಿಗರು ನಿಮಗೆ ಕಾಣಿಸಲ್ಲ; ಆಯ್ಕೆ ಸಮಿತಿ ಮೈ ಚಳಿ ಬಿಡಿಸಿದ ಸೌರಾಷ್ಟ್ರ ಆಟಗಾರ

ಆದರೆ, ಸ್ಮಿತ್ ಅತ್ಯುತ್ತಮ ಆಟ ಪ್ರದರ್ಶಿಸಿ ಮತ್ತೊಂದು ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಆ್ಯಶಸ್ ಸರಣಿಯಲ್ಲಿ ಸತತ ಎಂಟನೇ ಬಾರಿಗೆ 50ಕ್ಕೂ ಅಧಿಕ ರನ್ ಬಾರಿಸಿದ ಮೊದಲ ಆಟಗಾರ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲದೆ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಸ್ಮಿತ್ ಭದ್ರ ಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಆ್ಯಶಸ್​​ನಲ್ಲಿ ಸ್ಮಿತ್ ಸತತ ಏಳು 50+ ರನ್ ಬಾರಿಸಿದ್ದರು.

 ಮೊದಲ ಹಾಗೂ ಎರಡನೇ ಟೆಸ್ಟ್​ನಲ್ಲಿ ತಂಡಕ್ಕೆ ಆಸರೆಯಾಗಿದ್ದ ಸ್ಮಿತ್ ಈಗ 4ನೇ ಟೆಸ್ಟ್​​ನಲ್ಲೂ ಆಧಾರವಾಗಿ ನಿಂತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 3 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿದೆ. ಸ್ಮಿತ್ 60 ರನ್ ಹಾಗೂ ಟ್ರಾವಿಸ್ ಹೆಡ್ 18 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading