Ashes 2019 ENG vs AUS: ಸ್ಮಿತ್ ಶತಕದ ನೆರವು; ಆಸೀಸ್ ಮೊದಲ ಇನ್ನಿಂಗ್ಸ್​ನಲ್ಲಿ 284ಕ್ಕೆ ಆಲೌಟ್

ಸ್ಮಿತ್ 219 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 144 ರನ್ ಗಳಿಸಿ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 284 ರನ್​ಗೆ ಸರ್ವಪತನ ಕಂಡಿತು.

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

  • News18
  • Last Updated :
  • Share this:
ಬರ್ಮಿಂಗ್​ಹ್ಯಾಮ್ (ಆ. 02): ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ ಕದನಕ್ಕೆ ಭರ್ಜರಿ ಚಾಲನೆ ದೊರಕಿದದೆ. ಮೊದಲ ದಿನವೇ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಬಹುಬೇಗನೆ ಪ್ರಮುಖ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ಮಧ್ಯೆ ಸ್ಟೀವ್ ಸ್ಮಿತ್ ಆಸರೆಯ ನೆರವಿನಿಂದ ಕಾಂಗರೂ ಪಡೆ 284 ರನ್​ಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಆಘಾತ ಅನುಭವಿಸಿತು. ಸ್ಟುವರ್ಟ್​ ಬ್ರಾಡ್ ಬೌಲಿಂಗ್ ದಾಳಿಗೆ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೇವಿಡ್ ವಾರ್ನರ್ ಕೇವಲ 2 ರನ್​ಗೆ, ಕ್ಯಾಮ್ರನ್ ಬೆನ್​ಕ್ರಾಫ್ಟ್​​ 8 ಹಾಗೂ ಉಸ್ಮಾನ್ ಖ್ವಾಜಾ 13 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಈ ಸಂದರ್ಭ ಸ್ಟೀವ್ ಸ್ಮಿತ್ ಜೊತೆಯಾದ ಟ್ರಾವಿಸ್ ಹೆಡ್ ಎಚ್ಚರಿಕೆಯ ಆಟಕ್ಕೆ ಮುಂದಾದರಾದರು ಕ್ರಿಸ್ ವೋಕ್ಸ್​ ಮಾರಕವಾಗಿ ಪರಿಣಮಿಸಿದರು. 35 ರನ್ ಗಳಿಸಿದ್ದ ಟ್ರಾವಿಸ್​ರನ್ನು ಹಾಗೂ ಬಂದ ಬೆನ್ನಲ್ಲೆ ಮ್ಯಾಥ್ಯೂ ವೇಡ್​​ರನ್ನು ಕೇವಲ 1 ರನ್​ಗೆ ಎಲ್​ಬಿ ಬಲೆಗೆ ಬೀಳಿಸಿದರು. ನಾಯಕ ಟಿಮ್ ಪೈನ್ ಆಟ 5 ರನ್​ಗೆ ಅಂತ್ಯವಾಯಿತು. ಹೀಗೆ ಒಂದು ಕಡೆ ವಿಕೆಟ್ ಕಳೆದುಕೊಂಡ ಆಸೀಸ್​ಗೆ ಸ್ಮಿತ್ ಆಸರೆಯಾಗಿ ನಿಂತು ರನ್ ಕಲೆಹಾಕಿದರು. 9ನೇ ವಿಕೆಟ್​ಗೆ ಪೀಟರ್ ಸಿಡ್ಲೆ ಜೊತೆಗೂಡಿ 88 ರನ್​ಗಳ ಜೊತೆಯಾಟ ಆಡಿದರು.

 



ಕಾಶ್ಮೀರದಲ್ಲಿ MSD; ಸೇನಾ ಸಮವಸ್ತ್ರದಲ್ಲಿ ವೈರಲ್ ಆಗುತ್ತಿದೆ ಧೋನಿಯ ಫೋಟೋ

ಜೊತೆಗೆ ಸ್ಮಿತ್ ಬ್ಯಾಟ್​ನಿಂದ 24ನೇ ಟೆಸ್ಟ್​ ಶತಕ ಮೂಡಿಬಂತು. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 24ನೇ ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಪಾತ್ರರಾದರು. ಸ್ಮಿತ್ ತಮ್ಮ 24ನೇ ಶತಕಕ್ಕಾಗಿ ಒಟ್ಟು 118 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಡಾನ್ ಬ್ರಾಡ್ಮನ್ ಅವರು ಕೇವಲ 66 ಇನ್ನಿಂಗ್ಸ್ ಗಳಲ್ಲಿ 24 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇನ್ನು ಪಟ್ಟಿಯ ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ 24 ಶತಕಕ್ಕಾಗಿ 123 ಇನ್ನಿಂಗ್ಸ್ ತೆಗೆದುಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿರುವ ಸಚಿನ್ 125 ಇನ್ನಿಂಗ್ಸ್ ಗಳಲ್ಲಿ 24 ಶತಕ ಸಿಡಿಸಿದ್ದರು.

 



ಅಂತಿಮವಾಗಿ ಸ್ಮಿತ್ 219 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 144 ರನ್ ಗಳಿಸಿ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 284 ರನ್​ಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಸ್ಟುವರ್ಟ್​ ಬ್ರಾಡ್ 5 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್​ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

 

First published: