Ashes 2019 ENG vs AUS: 2ನೇ ಇನ್ನಿಂಗ್ಸ್​ನಲ್ಲೂ ಸಿಡಿದ ಸ್ಮಿತ್; ಉತ್ತಮ ಮುನ್ನಡೆಯತ್ತ ಆಸ್ಟ್ರೇಲಿಯಾ

ಒಂದೇ ಟೆಸ್ಟ್​ ಪಂದ್ಯದಲ್ಲಿ ಎರಡು ಶತಕ ಸಿಡಿಸಿ ಸ್ಮಿತ್ ದಾಖಲೆ ಬರೆದಿದ್ದಾರೆ. ಡಾನ್ ಬ್ರಾಡ್ಮನ್ ಬಳಿಕ ಎರಡನೇ ಅತಿ ವೇಗದಲ್ಲಿ 25 ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

  • News18
  • Last Updated :
  • Share this:
ಬರ್ಮಿಂಗ್​ಹ್ಯಾಮ್​ (ಆ. 04): ಆಂಗ್ಲರ ನಾಡಲ್ಲಿ ಸಾಗುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ ಮೊದಲ ಟೆಸ್ಟ್​ ಪಂದ್ಯ ಕುತೂಹಲ ಘಟ್ಟದತ್ತ ತಲುಪುತ್ತಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಕುಸಿಯುವ ಭೀತಿಯಲ್ಲಿದ್ದ ಆಸೀಸ್​ಗೆ ಬೆನ್ನೆಲುವಾಗಿ ನಿಂತು ಶತಕ ಬಾರಿಸಿ ಆಸರೆಯಾದ ಸ್ಟೀವ್ ಸ್ಮಿತ್(144) ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿ ಮಹತ್ವದ ಮುನ್ನಡೆಗೆ ಕಾರಣರಾಗಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾವನ್ನು 284 ರನ್​ಗೆ ಆಲೌಟ್ ಮಾಡಿ ಆಟ ಪ್ರಾರಂಭಿಸಿದ ಇಂಗ್ಲೆಂಡ್ 374 ರನ್​ ಕಲೆಹಾಕಿತು. 90 ರನ್​ಗಳ ಹಿನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಬಾಂಕ್ರಫ್ಟ್​​(7), ವಾರ್ನರ್(8), ಖ್ವಾಜಾ(40) ಬೇಗನೆ ಪೆವಿಲಿಯನ್ ಸೇರಿಕೊಂಡರು.

India Vs West Indies Live Score: ರೋಹಿತ್-ಧವನ್ ಅರ್ಧಶತಕದ ಜೊತೆಯಾಟ

ಈ ಸಂದರ್ಭ ತಂಡಕ್ಕೆ ಮತ್ತೆ ಆಸರೆಯಾಗಿದ್ದು ಸ್ಟೀವ್ ಸ್ಮಿತ್. ಟ್ರಾವಿಸ್ ಹೆಡ್ ಜೊತೆಗೂಡಿ 130 ರನ್​ಗಳ ಕಾಣಿಕೆ ನೀಡಿದ ಇವರಿಬ್ಬರು ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಸ್ಮಿತ್ 207 ಎಸೆತಗಳಲ್ಲಿ  142 ರನ್​ ಬಾರಿಸಿ ಔಟ್ ಆದರೆ, ಹೆಡ್ 51 ರನ್ ಕಲೆಹಾಕಿದರು. ಇವರ ಜೊತೆಯಾಟದ ನೆರವಿನಿಂದ ಆಸೀಸ್ 250ಕ್ಕೂ ಅಧಿಕ ರನ್​ಗಳ ಮುನ್ನಡೆಯಲ್ಲಿದೆ.

 ಇನ್ನು ಒಂದೇ ಟೆಸ್ಟ್​ ಪಂದ್ಯದಲ್ಲಿ ಎರಡು ಶತಕ ಸಿಡಿಸಿ ಸ್ಮಿತ್ ದಾಖಲೆ ಬರೆದಿದ್ದಾರೆ. ಡಾನ್ ಬ್ರಾಡ್ಮನ್ ಬಳಿಕ ಎರಡನೇ ಅತಿ ವೇಗದಲ್ಲಿ 25 ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನೂ ಮುರಿದಿದ್ದಾರೆ.119ನೇ ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ 25ನೇ ಶತಕ ಬಾರಿಸಿದ್ದಾರೆ. ಇತ್ತ ಕೊಹ್ಲಿ 127 ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಇದಿಷ್ಟೆ ಅಲ್ಲದೆ ಆ್ಯಶಸ್ ಟೆಸ್ಟ್ ಪಂದ್ಯವೊಂದರಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲೂ ಶತಕ ಬಾರಿಸಿದ ಆಸ್ಟ್ರೇಲಿಯಾದ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

 First published: