ಬೆಂಗಳೂರು (ಆ. 26): ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 1 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ನಿಂತು ಹೋರಾಟ ನಡೆಸಿ ಆಂಗ್ಲರ ಮಾನ ಉಳಿಸಿದ್ದು, 1-1 ಅಂತರದ ಸಮಬಲ ಸಾಧಸಿದೆ.
ಲೀಡ್ಸ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 179 ರನ್ಗೆ ಆಲೌಟ್ ಆಗಿತ್ತು. ಇತ್ತ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಹ್ಯಾಜ್ಲೇವುಡ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 67 ರನ್ಗೆ ಸರ್ವಪತನ ಕಂಡಿತು. ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 246 ರನ್ ಬಾರಿಸಿತು. ಈ ಮೂಲಕ ಇಂಗ್ಲೆಂಡ್ಗೆ 359 ರನ್ಗಳ ಗುರಿ ನೀಡಿತು.
ಈ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ನಾಯಕ ಜೋ ರೂಟ್ 77 ಹಾಗೂ ಜೋ ಡೆನ್ಲಿ ಅವರ 50 ರನ್ಗಳ ನೆರವಿನಿಂದ ಉತ್ತಮ ಆರಂಭ ಪಡೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿದ ಆಂಗ್ಲರಿಗೆ ಬೆನ್ ಸ್ಟೋಕ್ಸ್ ಬಿಟ್ಟರೆ ಮತ್ಯಾವ ಬ್ಯಾಟ್ಸ್ಮನ್ಗಳು ಆಸರೆಯಾಗಿ ನಿಂತಿಲ್ಲ.
ಪರಿಣಾಮ 286 ರನ್ಗೆ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡಿತು. ಗೆಲುವಿಗೆ 73 ರನ್ಗಳ ಅವಶ್ಯಕತೆಯಿತ್ತು. ಇನ್ನೇನು ಗೆಲುವು ನಮ್ಮದೆ ಎಂದು ಬೀಗುತ್ತಿದ್ದ ಕಾಂಗರೂ ಪಡೆಗೆ ಸ್ಟೋಕ್ಸ್ ಶಾಕ್ ಮೇಲೆ ಶಾಕ್ ನೀಡಿದರು. ಕೊನೆಯ ವಿಕೆಟ್ಗೆ ಜಾಕ್ ಲೀಚ್(ಅಜೇಯ 1) ಜೊತೆಗೂಡಿ ಆಕರ್ಷಕ ಆಟ ಪ್ರದರ್ಶಿಸಿದ ಸ್ಟೋಕ್ಸ್ ಇಂಗ್ಲೆಂಡ್ಗೆ ಗೆಲುವಿನ ಸಿಹಿ ನೀಡಿದರು.
ಮಿಂಚಿದ ರಹಾನೆ-ಬುಮ್ರಾ; ವಿಂಡೀಸ್ ವಿರುದ್ಧ ಭಾರತಕ್ಕೆ 318 ರನ್ಗಳ ಭರ್ಜರಿ ಗೆಲುವು
Have you ever seen a better innings? 👑
Highlights: https://t.co/nqhtWKGjjl#Ashes pic.twitter.com/Zatw8PxiKP
— England Cricket (@englandcricket) August 25, 2019
Was this the best innings ever? 🔥🔥🔥
Full highlights: https://t.co/OdIENBPKsX#Ashes pic.twitter.com/LiiGzECFvc
— England Cricket (@englandcricket) August 25, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ