Ashes 2019 | ಆರ್ಚೆರ್ ಆಕ್ರಮಣ; ಆ್ಯಶಸ್​ನಲ್ಲಿ ಆಸೀಸ್ 179ಕ್ಕೆ ಆಲೌಟ್

Australia vs England: 5 ಪಂದ್ಯಗಳ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯ ಆಸ್ಟ್ರೇಲಿಯಾ 251 ರನ್​ಗಳ ಅಂತರದಿಂದ ಗೆದ್ದರೆ, 2ನೇ ಪಂದ್ಯ ಡ್ರಾ ಆಗಿತ್ತು. ಹೀಗಾಗಿ ಮೂರನೇ ಟೆಸ್ಟ್​ ಉಭಯ ತಂಡಗಳಿಗೆ ಮುಖ್ಯವಾಗಿದೆ.

Vinay Bhat | news18
Updated:August 23, 2019, 11:57 AM IST
Ashes 2019 | ಆರ್ಚೆರ್ ಆಕ್ರಮಣ; ಆ್ಯಶಸ್​ನಲ್ಲಿ ಆಸೀಸ್ 179ಕ್ಕೆ ಆಲೌಟ್
ಜೋಫ್ರಾ ಆರ್ಚೆರ್
Vinay Bhat | news18
Updated: August 23, 2019, 11:57 AM IST
ಬೆಂಗಳೂರು (ಆ. 23): ಲೀಡ್ಸ್​​ನಲ್ಲಿ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕಡಿಮೆ ಮೊತ್ತಕ್ಕೆ ಕುಸಿದಿದೆ. ಜೋಫ್ರಾ ಆರ್ಚೆರ್ ಬೌಲಿಂಗ್​ ದಾಳಿಗೆ ತತ್ತರಿಸಿದ ಕಾಂಗರೂ ಪಡೆ ಕೇವಲ 179 ರನ್​ಗಳಿಗೆ ಆಲೌಟ್ ಆಗಿವೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 61 ಹಾಗೂ ಮಾರ್ನಸ್ ಲಬುಸ್ಚಗ್ನೆ 74 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಿಲ್ಲ.

ಸ್ಟೀವ್ ಸ್ಮಿತ್ ಇಂಜುರಿಯಿಂದ ಹೊರಗುಳಿದಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಆರ್ಚೆರ್ ಮಾರಕ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಆಸೀಸ್ ಬ್ಯಾಟ್ಸ್​ಮನ್​ಗಳು ಮೊದಲ ಇನ್ನಿಂಗ್ಸ್​ನಲ್ಲಿ 52.1 ಓವರ್​ನಲ್ಲಿ 179 ರನ್​ಗೆ ಸರ್ವಪತನ ಕಂಡಿತು.

 



ಟೀಂ ಇಂಡಿಯಾ ಸ್ಟಾರ್ ಆಟಗಾರರನ್ನು ಕೊಲೆ ಮಾಡುವುದಾಗಿ ಬಿಸಿಸಿಗೆ ಇ-ಮೇಲ್!

ಆರ್ಚೆರ್ 17.1 ಓವರ್ ಬೌಲಿಂಗ್ ಮಾಡಿ 6 ವಿಕೆಟ್ ಕಿತ್ತರೆ, ಸ್ಟುವರ್ಟ್​ ಬ್ರಾಡ್ 2 ಹಾಗೂ ಕ್ರಿಸ್ ವೋಕ್ಸ್​ ಮತ್ತು ಬೆನ್ ಸ್ಟೋಕ್ಸ್​ ತಲಾ 1 ವಿಕೆಟ್ ಪಡೆದರು. ಆಸೀಸ್ ಆಲೌಟ್ ಆಗುತ್ತಿದ್ದಂತೆ ಮೊದಲ ದಿನದಾಟ ಅಂತ್ಯಗೊಳಸಿದ್ದು, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ ಆರಂಭಿಸಬೇಕಿದೆ.

 



5 ಪಂದ್ಯಗಳ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯ ಆಸ್ಟ್ರೇಲಿಯಾ 251 ರನ್​ಗಳ ಅಂತರದಿಂದ ಗೆದ್ದರೆ, 2ನೇ ಪಂದ್ಯ ಡ್ರಾ ಆಗಿತ್ತು. ಹೀಗಾಗಿ ಮೂರನೇ ಟೆಸ್ಟ್​ ಉಭಯ ತಂಡಗಳಿಗೆ ಮುಖ್ಯವಾಗಿದೆ.

 

First published:August 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...