ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಶತಕ ಸಿಡಿಸಿದ 18 ವರ್ಷದ ಜೂನಿಯರ್ ವರ್ಲ್ಡ್ ಕಪ್ ಸ್ಟಾರ್

ಇವತ್ತು ಶತಕ ಭಾರಿಸಿದ 18 ವರ್ಷದ ಆರ್ಯನ್ ಜುಯಲ್ ಅವರಿಗೆ ಇದು ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಗಿದೆ. ಹಾಗೆಯೇ, ಇದು ಅವರ ಚೊಚ್ಚಲ ರಣಜಿ ಶತಕವೂ ಹೌದು. ವಿಕೆಟ್​ಕೀಪರ್ ಬ್ಯಾಟ್ಸ್​ಮ್ಯಾನ್ ಆಗಿರುವ ಇವರು 2018ರ ಅಂಡರ್-19 ವಿಶ್ವಕಪ್ ತಂಡದ ಸದಸ್ಯರಾಗಿ ಮಿಂಚಿದ್ದರು.

news18
Updated:December 17, 2019, 5:56 PM IST
ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಶತಕ ಸಿಡಿಸಿದ 18 ವರ್ಷದ ಜೂನಿಯರ್ ವರ್ಲ್ಡ್ ಕಪ್ ಸ್ಟಾರ್
ಆರ್ಯನ್ ಜುಯಲ್
  • News18
  • Last Updated: December 17, 2019, 5:56 PM IST
  • Share this:
ಹುಬ್ಬಳ್ಳಿ(ಡಿ. 17): ರಣಜಿ ಟ್ರೋಫಿಯಲ್ಲಿ ಸತತ ಎರಡನೇ ಗೆಲುವಿನತ್ತ ಕಣ್ಣಿಟ್ಟಿರುವ ಕರ್ನಾಟಕ ತಂಡದ ಹಾದಿಗೆ ಉತ್ತರ ಪ್ರದೇಶದ ಯುವ ಕ್ರಿಕೆಟಿಗ ಆರ್ಯನ್ ಜುಯಲ್ ಮೊದಲ ದಿನವೇ ತಡೆಯೊಡ್ಡಿದರು. ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡ ಮೊದಲ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು. ಮಾಜಿ ಅಂಡರ್-19 ವಿಶ್ವಕಪ್ ಕ್ರಿಕೆಟಿಗರಾದ 18 ವರ್ಷದ ಆರ್ಯನ್ ಜುಯಲ್ ಅಮೋಘ ಶತಕ ಭಾರಿಸಿದ್ದು ಮೊದಲ ದಿನದ ಹೈಲೈಟ್ ಎನಿಸಿತು.

ಅಭಿಮನ್ಯು ಮಿಥುನ್ ಅವರ ಮಾರಕ ಬೌಲಿಂಗ್ ನಡುವೆ ಆರ್ಯನ್ ಜುವಲ್ ಅವರು ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಐದನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಸೇಫ್ ಅವರು ಆರ್ಯನ್​ಗೆ ಸರಿಯಾದ ಜೋಡಿಯಾಗಿ ನಿಂತರು. ಆರ್ಯನ್ ಮತ್ತು ಸೇಫ್ ಇಬ್ಬರೂ ನಾಲ್ಕನೇ ವಿಕೆಟ್​ಗೆ 109 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದು ವಿಶೇಷ. ಆರ್ಯನ್ ಅಮೋಘ 109 ರನ್ ಸಿಡಿಸಿ ಔಟಾದರೆ, ಮೊಹಮ್ಮದ್ ಸೇಫ್ 56 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: IPL 2020: ಐಪಿಎಲ್​ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರು ಇವರೇ

ಆರ್ಯನ್ ಜುಯಲ್ ಮತ್ತು ಮೊಹಮ್ಮದ್ ಸೇಫ್ ಅವರಿಬ್ಬರನ್ನು ಹೊರತುಪಡಿಸಿದರೆ ಉಳಿದಂತೆ ಕರ್ನಾಟಕದ ಬೌಲರ್​ಗಳೇ ಪಾರಮ್ಯ ಮೆರೆದರು. ಅಭಿಮನ್ಯು ಮಿಥುನ್ 45 ರನ್ನಿತ್ತು 3 ವಿಕೆಟ್ ಕಬಳಿಸಿದರು.

ದೇಶೀಯ 50 ಓವರ್ ಮತ್ತು 20 ಓವರ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿರುವ ಕರ್ನಾಟಕ ಕ್ರಿಕೆಟ್ ತಂಡ ಈಗ ರಣಜಿ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ತಮಿಳುನಾಡು ವಿರುದ್ಧದ ಮೊದಲ ಪಂದ್ಯದಲ್ಲಿ ಕರ್ನಾಟಕ ಗೆಲುವು ಪಡೆದಿತ್ತು. ಒಂದು ಪಂದ್ಯದಿಂದ 6 ಅಂಕ ಪಡೆದಿರುವ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಮೊದಲ ಪಂದ್ಯದಿಂದ ಸಿಕ್ಕಿರುವುದು ಕೇವಲ 1 ಅಂಕವಾಗಿದೆ.

ಇದನ್ನೂ ಓದಿ: ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: 7 ಸ್ಟಾರ್ ಆಟಗಾರರು ಔಟ್

ಇನ್ನು, ಇವತ್ತು ಶತಕ ಭಾರಿಸಿದ 18 ವರ್ಷದ ಆರ್ಯನ್ ಜುಯಲ್ ಅವರಿಗೆ ಇದು ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯವಾಗಿದೆ. ಹಾಗೆಯೇ, ಇದು ಅವರ ಚೊಚ್ಚಲ ರಣಜಿ ಶತಕವೂ ಹೌದು. ವಿಕೆಟ್​ಕೀಪರ್ ಬ್ಯಾಟ್ಸ್​ಮ್ಯಾನ್ ಆಗಿರುವ ಇವರು 2018ರ ಅಂಡರ್-19 ವಿಶ್ವಕಪ್ ತಂಡದ ಸದಸ್ಯರಾಗಿ ಮಿಂಚಿದ್ದರು. ಅದಕ್ಕೂ ಪೂರ್ವದಿಂದಲೇ ಇವರು ದೇಶೀಯ ಕ್ರಿಕೆಟ್​ನಲ್ಲಿ ಸಾಕಷ್ಟು ಮಿಂಚುತ್ತಾ ಬಂದಿದ್ದಾರೆ.ಸ್ಕೋರು ವಿವರ (ಮೊದಲ ದಿನಾಂತ್ಯಕ್ಕೆ):

ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 90 ಓವರ್ 232/5
(ಆರ್ಯನ್ ಜುಯಲ್ 109, ಮೊಹಮ್ಮದ್ ಸೇಫ್ ಅಜೇಯ 56, ಆಲ್ಮಾಸ್ ಶೌಕತ್ 22 ರನ್ – ಅಭಿಮನ್ಯು ಮಿಥುನ್ 45/3)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 17, 2019, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading