Arshdeep Singh: ಅರ್ಶದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದನ್ನೇ ಬಳಸಿ ಭಾರತವನ್ನು ಒಡೆಯಲು ಯತ್ನಿಸಿದ ಪಾಕ್

ಭಾರತ ಪಾಕಿಸ್ತಾನ ಪಂದ್ಯದ ಅತ್ಯಂತ ನಿರ್ಣಾಯಕ ಹಂತದಲ್ಲಿ ಅರ್ಶದೀಪ್ ಸಿಂಗ್ ಕ್ಯಾಚ್ ಒಂದನ್ನು ಕೈಬಿಟ್ಟಿದ್ದರು. ಈ ಕ್ಯಾಚ್ ಕೈಚೆಲ್ಲಿದ್ದು ಭಾರತದ ಸೋಲಿಗೂ ಕಾರಣವಾಗಿತ್ತು.

ಅರ್ಶದೀಪ್ ಸಿಂಗ್

ಅರ್ಶದೀಪ್ ಸಿಂಗ್

 • Share this:
  ಪಾಕಿಸ್ತಾನದ ಭಾರತವನ್ನು ಹಾಳುಗೆಡಹುವ ಯಾವ ಪ್ರಯತ್ನವನ್ನೂ ಬಿಟ್ಟುಕೊಡುತ್ತಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಇದೀಗ ಹೊರಬಿದ್ದಿದೆ. ಭಾರತದ ಮೇಲೆ ಭಯೋತ್ಪಾದಕರನ್ನು ಛೂ ಬಿಟ್ಟು ಉಗ್ರಗಾಮಿ ಕೃತ್ಯ ನಡೆಸುವ ಜೊತೆಗೆ ಭಾರತೀಯರನ್ನು ಆಂತರಿಕವಾಗಿ ಒಡೆಯುವ ಪ್ರಯತ್ನಗಳನ್ನು (5th Generation Warfare) ಸಹ ಪಾಕಿಸ್ತಾನ ಎಗ್ಗಿಲ್ಲದೆ ನಡೆಸುತ್ತಿದೆ.  ಇದಕ್ಕೆ ಉದಾಹರಣೆ ಭಾರತ ಪಾಕಿಸ್ತಾನದ (India Pakistan Match) ನಡುವಿನ ಏಷ್ಯಾ ಕಪ್ ಪಂದ್ಯದಲ್ಲಿ ನಡೆದ ಆ ಒಂದು ಘಟನೆ!  ಹೌದು, ಭಾರತೀಯ ಬೌಲರ್ ಅರ್ಶದೀಪ್ ಸಿಂಗ್ (Arshdeep Singh) ಬಳಸಿಕೊಂಡು ಭಾರತವನ್ನು ಒಡೆಯುವ ಕುಕೃತ್ಯಕ್ಕೆ ಪಾಕಿಸ್ತಾನ (Pakistan) ಮುಂದಾಗಿದ್ದು ಜಗಜ್ಜಾಹೀರುಗೊಂಡಿದೆ.

  ಭಾರತ ಪಾಕಿಸ್ತಾನ ಪಂದ್ಯದ ಅತ್ಯಂತ ನಿರ್ಣಾಯಕ ಹಂತದಲ್ಲಿ ಅರ್ಶದೀಪ್ ಸಿಂಗ್ ಕ್ಯಾಚ್ ಒಂದನ್ನು ಕೈಬಿಟ್ಟಿದ್ದರು. ಈ ಕ್ಯಾಚ್ ಕೈಚೆಲ್ಲಿದ್ದು ಭಾರತದ ಸೋಲಿಗೂ ಕಾರಣವಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಅರ್ಶದೀಪ್ ಕುರಿತು ಭಾರೀ ಟೀಕೆ-ಟ್ರೋಲ್​ಗಳಿಗೆ ಕಾರಣವಾಗಿತ್ತು. ಆದರೆ ಅನುಶ್ ಸಕ್ಸೇನಾ ಸೇರಿ ಭಾರತೀಯ ನೆಟ್ಟಿಗರು ಈ ಕುತಂತ್ರವನ್ನು ಬಯಲಿಗೆಳೆದಿದ್ದಾರೆ.  ವಿಕಿಪೀಡಿಯಾ ಪೇಜ್​ ಬಳಸಿ ಭಾರತದ ವಿರುದ್ಧ ಸಂಚು
  ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಪಾಕಿಸ್ತಾನ ಅರ್ಶದೀಪ್ ಸಿಂಗ್ ವಿಕಿಪೀಡಿಯಾ ಪೇಜ್​ನಲ್ಲಿ ಅರ್ಶದೀಪ್ ಖಲಿಸ್ತಾನ ಪರ ಎಂದು ಸೇರಿಸಿಬಿಟ್ಟಿತ್ತು. ಅಪರಿಚಿತ ವಿಕಿಪೀಡಿಯಾ ಬಳಕೆದಾರನೊಬ್ಬ ಅರ್ಶದೀಪ್ ಸಿಂಗ್ ಪ್ರತ್ಯೇಕ ಖಲಿಸ್ಥಾನಿ ಕ್ರಿಕೆಟ್ ತಂಡದ ಪರ ಆಡುತ್ತಾರೆ ಎಂದು ಎಡಿಟ್ ಮಾಡಿದ್ದ.

  ಕ್ಯಾಚ್ ಕೈಚೆಲ್ಲಿದ ಸಿಟ್ಟನ್ನು ಭಾರತ ಒಡೆಯಲು ಬಳಕೆ
  ಹೇಗಿದ್ದರೂ ಅರ್ಶದೀಪ್ ಕ್ಯಾಚ್ ಬಿಟ್ಟಿದ್ದಕ್ಕೆ ಅವರ ಬಗ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಕೋಪ ಇರುತ್ತದೆ. ಅರ್ಶದೀಪ್ ವಿಕಿಪೀಡಿಯಾ ಪೇಜ್​ನಲ್ಲಿ ಈತ ಭಾರತ ವಿರೋಧಿ ಖಲಿಸ್ಥಾನ ಪರ ಎಂದು ಕಂಡುಬಿಟ್ಟರಂತೂ ಕೇಳುವುದೇ ಬೇಡ, ಅರ್ಶದೀಪ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಳ್ಳುತ್ತಾರೆ. ಅಲ್ಲದೇ ಸಿಖ್ ಸಮುದಾಯವನ್ನು ಖಲಿಸ್ಥಾನ ಪರ ಎಂದು ಬಿಂಬಿಸಬಹುದು ಎಂಬುದು ಪಾಕಿಸ್ತಾನದ ಪಿತೂರಿಯಾಗಿತ್ತು.

  ವಿಕಿಪೀಡಿಯಾ ಪೇಜ್​ನಲ್ಲಿ ತಪ್ಪು ಮಾಹಿತಿ ಬಂದಿದ್ದೇಗೆ?
  ಕ್ರಿಕೆಟಿಗ ಅರ್ಶದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟದಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನಿ ಚಳವಳಿಗೆ ಲಿಂಕ್ ಮಾಡುವ ನಕಲಿ ಮಾಹಿತಿಯನ್ನು ಹೇಗೆ ಪ್ರಕಟಿಸಲಾಗಿದೆ ಎಂಬುದನ್ನು ವಿವರಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಇಂದು ವಿಕಿಪೀಡಿಯಾದ ಅಧಿಕಾರಿಗಳನ್ನು ಕರೆಸಿದೆ. ಈ ತಪ್ಪು ಮಾಹಿತಿಯು ಕೋಮು ಸೌಹಾರ್ದತೆಯನ್ನು ಕದಡುವ ಅಪಾಯ ಹೊಂದಿದೆ. ಅಲ್ಲದೇ ಕ್ರಿಕೆಟಿಗನ ಕುಟುಂಬಕ್ಕೆ ಮಾರಕವಾಗಬಹುದು ಎಂದು ಕೇಂದ್ರವು ವಿಕಿಪೀಡಿಯಾಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

  ಇದನ್ನೂ ಓದಿ: Sourav Ganguly: ಸೌರವ್ ಗಂಗೂಲಿ ಮಾಡಿದ ಅದೊಂದು ಪೋಸ್ಟ್ ಈಗ ಇಷ್ಟೆಲ್ಲಾ ಸದ್ದು ಮಾಡ್ತಿದೆ! ನೀವು ನೋಡಿದ್ರಾ?

  ಅರ್ಶದೀಪ್ ಪರ ನಿಂತ ಹರ್ಭಜನ್ ಸಿಂಗ್
  ಹೀಗೆ ಅರ್ಶದೀಪ್ ಅವರನ್ನು ಬಳಸಿಕೊಂಡು ಪಾಕಿಸ್ತಾನಿ ಬೆಂಬಲಿತ ಖಲಿಸ್ಥಾನಿ ಪ್ರತ್ಯೇಕತೆಯ ಹೆಸರಲ್ಲಿ ಭಾರತವನ್ನು ಒಡೆಯುವ ಪ್ರೊಪಗಾಂಡಾವನ್ನು ಟ್ವಿಟರ್ ತುಂಬಾ ಹಬ್ಬಿಸಲಾಗುತ್ತಿತ್ತು. ಆದರೆ ಇದನ್ನು ತಕ್ಷಣವೇ ಗಮನಿಸಿದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅರ್ಶದೀಪ್ ವಿರುದ್ಧ ಇಂತಹ ಟೀಕೆಗಳನ್ನು ನಿಲ್ಲಿಸುವಂಯೆ ಆಗ್ರಹಿಸಿದರು. ಯಾರೂ ಬೇಕಂತಲೇ ಕ್ಯಾಚ್ ಬಿಡುವುದಿಲ್ಲ, ಅದನ್ನು ಅರ್ಥ ಮಾಡಿಕೊಂಡು ಯುವ ಕ್ರಿಕೆಟರ್​ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡಬಾರದೆಂದು ಅವರು ನೆಟ್ಟಿಗರಲ್ಲಿ ಕೇಳಿಕೊಂಡರು.

  ಪಾಕಿಸ್ತಾನದ ಪ್ರಮುಖ ವ್ಯಕ್ತಿಗಳಿಂದಲೂ ಕುತಂತ್ರಕ್ಕೆ ಬೆಂಬಲ
  ಅರ್ಶದಿಪ್ ಖಲಿಸ್ಥಾನಿ ಎಂದು ಸುಳ್ಳನ್ನು ಬಿಂಬಿಸಲು ಟ್ವೀಟ್ ಮಾಡಿದವರ ಪೈಕಿ ಪಾಕಿಸ್ತಾನದ ಪ್ರಮುಖರೂ ಸೇರಿದ್ದರು. ISPR ಸಹಾಯಕ ಮತ್ತು ನ್ಯೂಯಾರ್ಕ್‌ನ ನಿಕ್ಕಿ ಏಷ್ಯಾದ ಪ್ರಸ್ತುತ ಡಿಜಿಟಲ್ ಸಂಪಾದಕ W.S ಖಾನ್ ಖಲಿಸ್ಥಾನಿ ಎಂಬ ಪದವನ್ನು ಮೊದಲು ಬಳಸಿದ ಪ್ರಮುಖ ವ್ಯಕ್ತಿಯಾಗಿದ್ದ. “ಖಂಡಿತ ಅರ್ಶದೀಪ್ ಕ್ಯಾಚ್‌ ಕೈಬಿಟ್ಟ ಸರಿಯಾಗಿ 3 ನಿಮಿಷಗಳಲ್ಲಿ W.S ಖಾನ್ ಪಾಕಿಸ್ತಾನಿ ಬೆಂಬಲಿತ ಖಲಿಸ್ಥಾನಿ ಪ್ರತ್ಯೇಕತೆಗೆ ಅರ್ಶದೀಪ್ ಸೇರಿದ್ದಾರೆ” ಎಂದು ಟ್ವೀಟ್ ಮಾಡಿದ್ದರು.

  ಇದನ್ನೂ ಓದಿ: Asia cup 2022 : ಟೀಂ ಇಂಡಿಯಾದ ಈ ಆಟಗಾರನಿಗೆ ಜನ್ಮದಲ್ಲಿ ಬುದ್ಧಿ ಬರಲ್ಲ, ಯಾವಾಗ ಹೇಗೆ ಆಡಬೇಕೆಂದು ಗೊತ್ತಿಲ್ಲ ಎಂದು ಅಭಿಮಾನಿಗಳು ಗರಂ

  ಪ್ರತೀ ಟ್ವೀಟ್​ನಲ್ಲೂ ಸಾಬೀತಾಗುತ್ತಿತ್ತು ಪಾಕ್ ಪ್ರೊಪಗಾಂಡಾ
  ಟ್ವಿಟರ್​ನಲ್ಲೂ ಅರ್ಶದೀಪ್ ಖಲಿಸ್ಥಾನಿ ಪರ ಎಂದು ಬಿಂಬಿಸಲು ಟ್ರೆಂಡ್ ಅನ್ನೇ ಸೃಷ್ಟಿಸುವ ಯತ್ನ ಮಾಡಿದ್ದರು ಪಾಕಿಸ್ತಾನದ 5ನೇ ತಲೆಮಾರಿನ ಭಯೋತ್ಪಾದಕ ಮನಸ್ಥಿತಿಗಳು. ಆಗಸ್ಟ್ 4ರಂದು ರಾತ್ರಿ 11:5ಕ್ಕೆ ಸರಿಯಾಗಿ “ನನ್ನ ಖಲಿಸ್ಥಾನಿ ಸಹೋದರ ಅರ್ಶದೀಪ್” ಎಂದು @7cking__Mad ಎಂಬ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಅಲ್ಲದೇ ಕ್ಯಾಚ್ ಬಿಟ್ಟ ವಿಷಯವನ್ನೇ ಇಟ್ಟುಕೊಂಡು “ಈಗ ಅರ್ಶದೀಪ್ ಖಲಿಸ್ಥಾನಿ ಎಂದು ಘೋಷಿಸಬಹುದು” ಎಂಬರ್ಥದ ಟ್ವೀಟ್ ಮಾಡಲಾಗಿತ್ತು. ಇವೆಲ್ಲವೂ ಪಾಕಿಸ್ತಾನಿ ಮೂಲದ ಪ್ರೊಪಗಾಂಡಾ ನಿರೂಪಕರಿಂದಲೇ ಟ್ವೀಟ್ ಆಗುತ್ತಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ ಎಂಬುದು ಪ್ರತಿ ಟ್ವೀಟ್​ನಲ್ಲೂ ಸಾಬೀತಾಗುತ್ತಿತ್ತು.
  Published by:guruganesh bhat
  First published: