Pak Bowler Arshad- ವರ್ಲ್ಡ್ ಕ್ಲಾಸ್ ಬೌಲರ್ ಆಗಿದ್ದವ ಜೀವನೋಪಾಯಕ್ಕೆ ಟ್ಯಾಕ್ಸಿ ಡ್ರೈವರ್ ಆದ ಕಥೆ

Arshad Khan- ಎರಡು ದಶಕದ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿದ್ದ ಪಾಕಿಸ್ತಾನದ ಆಫ್ ಸ್ಪಿನ್ನರ್ ಅರ್ಷದ್ ಖಾನ್ ನಿವೃತ್ತಿಯ ಬಳಿಕ ಆಸ್ಟ್ರೇಲಿಯಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ಅರ್ಶದ್ ಖಾನ್

ಅರ್ಶದ್ ಖಾನ್

 • Share this:
  ಅಂತರರಾಷ್ಟ್ರೀಯ ಕ್ರಿಕೆಟ್ ಎಂದರೆ ಆಟಗಾರರಿಗೆ ಕೈ ತುಂಬ ಹಣ, ಖ್ಯಾತಿ ಸಿಗುತ್ತದೆ. ತಮ್ಮಿಡೀ ಜೀವನಕ್ಕೆ ಆಗುವಷ್ಟು ಹಣವನ್ನು ಸಂಪಾದನೆ ಮಾಡಿ, ನಿವೃತ್ತಿಯ ಬಳಿಕ ಯಾವುದಾದರೂ ಪಾರ್ಟ್ ಟೈಮ್ ಉದ್ಯೋಗ ಮಾಡಿಕೊಂಡಿರಬಹುದು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟಿಗರು ಹೊಟ್ಟೆಪಾಡಿಗೆ ಪರದಾಡುವ ಪರಿಸ್ಥಿತಿಗೆ ಬಂದಿರುವ ಪ್ರಕರಣಗಳು ಅಪರೂಪಕ್ಕೆ ಸಿಗುತ್ತವೆ. ಟೆಸ್ಟ್ ರಾಷ್ಟ್ರವಲ್ಲದ ಬಡ ಕ್ರಿಕೆಟ್ ದೇಶಗಳಲ್ಲಿ ಇಂಥದ್ದು ಸಾಮಾನ್ಯ. ಜಿಂಬಾಂಬ್ವೆಯಂಥ ತಂಡದಲ್ಲೂ ಆಟಗಾರರಿಗೆ ಜೀವನೋಪಾಯಕ್ಕೆ ಕ್ರಿಕೆಟ್​ಗಿಂತ ಬೇರೆ ವೃತ್ತಿಯನ್ನ ನೆಚ್ಚಿಕೊಳ್ಳದೇ ಬೇರೆ ವಿಧಿ ಇಲ್ಲ. ಆದರೆ, ಭಾರತ, ಪಾಕಿಸ್ತಾನದಂಥ ದೇಶಗಳ ಕ್ರಿಕೆಟಿಗರಿಗೆ ಇಂಥ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಪಾಕಿಸ್ತಾನದ ಪ್ರತಿಭಾನ್ವಿತ ಸ್ಪಿನ್ನರ್ ಆಗಿದ್ದ ಅರ್ಷದ್ ಖಾನ್ ಅವರು ಜೀವನೋಪಾಯಕ್ಕೆ ಟ್ಯಾಕ್ಸಿ ಡ್ರೈವರ್ ಆಗಿದ್ದ ಸಂಗತಿ ನಮ್ಮ ಮುಂದಿದೆ.

  ಆರು ಅಡಿ ನಾಲ್ಕು ಅಂಗುಲ ಎತ್ತರದ ಲಂಬೂ ಆಟಗಾರ ಅರ್ಷದ್ ಖಾನ್ ಪಾಕಿಸ್ತಾನದ ಪ್ರತಿಭಾನ್ವಿತ ಆಫ್ ಸ್ಪಿನ್ನರ್ ಆಗಿದ್ದವರು. 1997ರಿಂದ 2006ರವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದರು. ಆದರೆ, ನಿವೃತ್ತಿಯ ಬಳಿಕ ಏನಾದರು ಎಂದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅರ್ಷದ್ ಖಾನ್ ಊಬರ್ ಕಂಪನಿಯ ಟ್ಯಾಕ್ಸಿ ಚಲಾಯಿಸುತ್ತಿದ್ದುದು 2015ರಲ್ಲಿ ಬೆಳಕಿಗೆ ಬಂದಿತ್ತು.

  ಅರ್ಷದ್ ಟ್ಯಾಕ್ಸಿ ಡ್ರೈವರ್ ಆಗಿದ್ದು ಗೊತ್ತಾಗಿದ್ದು ಹೀಗೆ:

  ಕಳೆದ ವರ್ಷ ಭಾರತದ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅರ್ಷದ್ ಖಾನ್ ಟ್ಯಾಕ್ಸಿ ಡ್ರೈವರ್ ಆಗಿರುವ ವಿಚಾರವನ್ನು ಮತ್ತು ಅದು ತಮಗೆ ಗೊತ್ತಾಗಲು ಕಾರಣವಾದ ಆಕಸ್ಮಿಕ ಘಟನೆ ಬಗ್ಗೆ ವಿವರಿಸಿ ಪೋಸ್ಟ್ ಹಾಕಿದ್ದರು.

  “ನಮ್ಮ ಕ್ಯಾಬ್​ನ ಚಾಲಕನೊಂದಿಗೆ ನಾವು ಮಾತನಾಡತೊಡಗಿದೆವು. ಆತ ತಾನು ಪಾಕಿಸ್ತಾನದವನಾಗಿದ್ದು ಸಿಡ್ನಿಯಲ್ಲಿ ವಾಸಿಸುತ್ತಿದ್ದೇನೆ ಎಂದ. ಐಸಿಎಲ್​ನಲ್ಲಿ ಲಾಹೋರ್ ಬಾದಶಾ ತಂಡದೊಂದಿಗೆ ಆಡುವಾಗ ಹೈದರಾಬಾದ್ ನಗರಕ್ಕೆ ಹಲವು ಬಾರಿ ಬಂದಿದ್ದಾಗಿ ಹೇಳಿದ. ಆಗ ನಾನು ಆತನ ಪೂರ್ಣ ಹೆಸರು ಕೇಳಿದೆ. ನಂತರ ಆತನ ಮುಖವನ್ನೂ ಗಮನಿಸಿದೆ. ಆತ ಅರ್ಷದ್ ಖಾನ್ ಎಂದು ನನಗೆ ಸ್ವಲ್ಪಮಟ್ಟಿಗೆ ಖಾತ್ರಿ ಆಗಿತು. ನಂತರ ನಾನು ಆತನ ಕೈ ಕುಲುಕಿ ಬೀಳ್ಕೊಟ್ಟೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಆ ವ್ಯಕ್ತ ಬರೆದುಕೊಂಡಿದ್ದರು.

  ಇದನ್ನೂ ಓದಿ: Ind vs pak : `ಮಾರೋ ಮುಜೆ ಮಾರೋ’​ ಖ್ಯಾತಿಯ ಯುವಕನ ಮತ್ತೊಂದು ವಿಡಿಯೋ ವೈರಲ್​!

  ಈಗ ಮಹಿಳಾ ತಂಡದ ಕೋಚ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಅರ್ಷದ್ ಖಾನ್ ಕಳೆದ ವರ್ಷ ನವೆಂಬರ್​ನಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ಧಾರೆ.

  ಅರ್ಷದ್ ಕ್ರಿಕೆಟ್ ವೃತ್ತಿಜೀವನ:

  50 ವರ್ಷದ ಅರ್ಷದ್ ಖಾನ್ 1993ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. 2001ರವರೆಗೂ ಪಾಕಿಸ್ತಾನ ತಂಡದ ಪರ್ಮನೆಂಟ್ ಮೆಂಬರ್ ಆಗಿದ್ದರು. ಅದಾದ ಬಳಿಕ ಅವಕಾಶಗಳು ಕಡಿಮೆಯಾಗತೊಡಗಿತು. 2006ರಲ್ಲಿ ಅವರು ಆಡಿದ ಕೊನೆಯ ಇಂಟರ್​ನ್ಯಾಷನಲ್ ಮ್ಯಾಚ್ ಆಗಿದೆ. ಅದಾದ ಬಳಿಕ ಅವರು ನೇಪಥ್ಯಕ್ಕೆ ಸರಿದರು.

  ಅರ್ಷದ್ ಖಾನ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 9 ಟೆಸ್ಟ್ ಮತ್ತು 58 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 32 ವಿಕೆಟ್, ಏಕದಿನ ಕ್ರಿಕೆಟ್​ನಲ್ಲಿ 56 ವಿಕೆಟ್​ಗಳನ್ನ ಅವರು ಸಂಪಾದಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಬರೋಬ್ಬರಿ 601 ವಿಕೆಟ್​ಗಳನ್ನ ಅವರು ಗಳಿಸಿದ್ಧಾರೆ. ಪಾಕಿಸ್ತಾನದ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಸಾಲಿನಲ್ಲಿ ಅರ್ಷದ್ ಖಾನ್ ಕೂಡ ಇದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದರ್ ಸೆಹ್ವಾಗ್ ಅವರಂಥ ಬ್ಯಾಟುಗಾರರನ್ನ ತಮ್ಮ ಸ್ಪಿನ್ ಗಾಳಕ್ಕೆ ಕೆಡವಿದ್ದಾರೆ.

  ಐಪಿಎಲ್​ಗೆ ಮುಂಚೆ ಆಡಲಾಗುತ್ತಿದ್ದ ಐಸಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಅರ್ಷದ್ ಖಾನ್ ಆಡಿದ್ದಾರೆ.
  Published by:Vijayasarthy SN
  First published: