12 Runs All Out- ಟ್ವೆಂಟಿ20 ವರ್ಲ್ಡ್ ಕಪ್: 12 ರನ್​ಗೆ ಆಲೌಟ್; ಹೆಚ್ಚುವರಿ ರನ್​ಗಳೇ ಹೆಚ್ಚು; ಇಲ್ಲಿದೆ ಸ್ಕೋರ್ ಕಾರ್ಡ್

Lowest Scores in Women’s T20 Cricket: ಮಹಿಳೆಯರ ಟ್ವೆಂಟಿ20 ವಿಶ್ವಕಪ್​ನ ಅರ್ಹತಾ ಟೂರ್ನಿಯೊಂದರಲ್ಲಿ ಅರ್ಜೆಂಟೀನಾ ತಂಡ ಕೇವಲ 12 ರನ್​ಗೆ ಆಲೌಟ್ ಆಗಿದೆ. ಮಹಿಳಾ ಕ್ರಿಕೆಟ್​ನಲ್ಲಿ ಅತೀ ಕಡಿಮೆ ಸ್ಕೋರ್​ಗಳ ಪಟ್ಟಿ ಇಲ್ಲಿದೆ:

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೆಕ್ಸಿಕೋ ಸಿಟಿ: ಅರ್ಜೆಂಟೀನಾ ಮಹಿಳಾ ತಂಡ ಕೇವಲ 12 ರನ್​ಗೆ ಆಲೌಟ್ ಆಗಿ ಹೊಸ ದಾಖಲೆಗೆ ಕಾರಣರಾಗಿದ್ದಾರೆ. ಬ್ರೆಜಿಲ್ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಅತ್ಯಂತ ಅಲ್ಪಮೊತ್ತಕ್ಕೆ ಔಟ್ ಆಗಿದೆ. ಇದು ಮಹಿಳೆಯರ ಟ್ವೆಂಟಿ20 ವಿಶ್ವಕಪ್​ನ ಅಮೆರಿಕ ಅರ್ಹತಾ ಟೂರ್ನಿಯಲ್ಲಿ ನಡೆದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಬ್ರೆಜಿಲ್ 3.2 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ ಈ ಸ್ಕೋರನ್ನ ಬೆನ್ನತ್ತಿತು.

  ಅರ್ಜೆಂಟೀನಾ ಮಹಿಳೆಯರು ಗಳಿಸಿದ 12 ರನ್ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಆರನೇ ಅತ್ಯಂತ ಕಡಿಮೆ ಸ್ಕೋರ್ ಆದ ಇನ್ನಿಂಗ್ಸ್ ಆಗಿದೆ. ಈ 12 ರನ್ ಮೊತ್ತದಲ್ಲಿ ಮೂರು ಹೆಚ್ಚುವರಿ ರನ್​ಗಳು ಸೇರಿವೆ. ಈ ಹೆಚ್ಚುವರಿ ರನ್ ಇಡೀ ಇನ್ನಿಂಗ್ಸ್​ನ ಅತಿ ಹೆಚ್ಚು ಸ್ಕೋರ್ ಎನಿಸಿದೆ. ಮೂವರು ಬ್ಯಾಟರ್ಸ್ 2 ರನ್ ಗಳಿಸಿದ್ದು ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. ಬ್ರೆಜಿಲ್ ತಂಡದ ಐವರು ಆಟಗಾರ್ತಿಯರು ಬೌಲ್ ಮಾಡಿದ್ದು ಎಲ್ಲರಿಗೂ ವಿಕೆಟ್ ಸಿಕ್ಕಿದೆ.

  ಇನ್ನು, ಅರ್ಜೆಂಟೀನಾದ 12 ರನ್ ಗುರಿಯನ್ನ ಬ್ರೆಜಿಲ್ ಮಹಿಳೆಯರು ಬೆನ್ನತ್ತುವ ಹಾದಿಯಲ್ಲಿ 2 ವಿಕೆಟ್ ಕಳೆದುಕೊಂಡಿದ್ದಾರೆ. ಅವರ ಇನ್ನಿಂಗ್ಸ್​ನಲ್ಲೂ ಹೆಚ್ಚುವರಿ ರನ್​ಗಳೇ ಅತಿ ದೊಡ್ಡ ಸ್ಕೋರ್ ಎನಿಸಿತು. ಆ ತಂಡ ಗಳಿಸಿದ 13 ರನ್​ಗಳಲ್ಲಿ 7 ಎಕ್ಸ್​ಟ್ರಾ ರನ್​ಗಳು ಸೇರಿವೆ. ಇಡೀ ಪಂದ್ಯದಲ್ಲಿ ಆರು ಆಟಗಾರ್ತಿಯರು ಶೂನ್ಯ ಸಂಪಾದನೆ ಮಾಡಿ ಔಟಾಗಿದ್ದು ವಿಶೇಷ.

  ಮಾಲ್ಡೀವ್ಸ್ ಮತ್ತು ಮಾಲಿ ಮಹಿಳಾ ತಂಡಗಳು 6 ರನ್ ಗಳಿಸಿದ್ದು ಮಹಿಳಾ ಟಿ20 ಕ್ರಿಕೆಟ್​ನ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ಎನಿಸಿವೆ. ಈ ಪಟ್ಟಿಯಲ್ಲಿ ಅರ್ಜೆಂಟೀನಾದ 12 ರನ್ ಸ್ಕೋರು ಆರನೇ ಸ್ಥಾನ ಪಡೆದಿದೆ. ವಿಶ್ವದ ಅತೀ ಕಡಿಮೆ ರನ್ ಮೊತ್ತದ ಟಾಪ್-11 ಇನ್ನಿಂಗ್ಸ್ ಪಟ್ಟಿಯಲ್ಲಿ ಮಾಲ್ಡೀವ್ಸ್ ಮತ್ತು ಮಾಲಿ ಮಹಿಳಾ ತಂಡಗಳು ಗಳಿಸಿದ ಸ್ಕೋರ್​ಗಳೇ 8 ಇವೆ.

  ಇದನ್ನೂ ಓದಿ: IPL: ಹೊಸ ತಂಡಗಳು ಯಾವುವು? ಪೈಪೋಟಿಯಲ್ಲಿ ಯಾರ್‍ಯಾರು? ಬಿಸಿಸಿಐಗೆ ಬರೋ ದುಡ್ಡು ಎಷ್ಟು?

  ಮಹಿಳೆಯರ ಟ್ವೆಂಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತದ ಸ್ಕೋರು:

  1) 6 ರನ್: ಮಾಲ್ಡೀವ್ಸ್ vs ಬಾಂಗ್ಲಾದೇಶ: 2019

  2) 6 ರನ್: ಮಾಲಿ vs ರುವಾಂಡ: 2019

  3) 8 ರನ್: ಮಾಲ್ಡೀವ್ಸ್ vs ನೇಪಾಳ: 2019

  4) 10 ರನ್: ಮಾಲಿ vs ಉಗಾಂಡ: 2019

  5) 11 ರನ್: ಮಾಲಿ vs ತಾಂಜೇನಿಯಾ: 2019

  6) 12 ರನ್: ಅರ್ಜೆಂಟೀನಾ vs ಬ್ರೆಜಿಲ್: 2021

  7) 14 ರನ್: ಚೀನಾ vs ಯುಎಇ: 2019

  8) 14 ರನ್: ಮಾಲಿ vs ಉಗಾಂಡ: 2019

  9) 15 ರನ್: ಫಿಲಿಪ್ಪೈನ್ಸ್ vs ಇಂಡೋನೇಷ್ಯಾ: 2019

  10) 16 ರನ್: ಮಾಲ್ಡೀವ್ಸ್ vs ನೇಪಾಳ: 2019

  11) 17 ರನ್: ಮಾಲಿ vs ತಾಂಜೇನಿಯಾ: 2019

  ಇದನ್ನೂ ಓದಿ: T20 World Cup- ಕೇವಲ 44 ರನ್​​ಗೆ ನೆದರ್​ಲೆಂಡ್ಸ್ ಆಲೌಟ್; ಇಲ್ಲಿದೆ ಅತಿ ಕಡಿಮೆ ಸ್ಕೋರ್​ಗಳ ಲಿಸ್ಟ್

  ಕ್ವಾಲಿಫಯರ್​ನಲ್ಲಿ ಅಮೆರಿಕ ಮುಂದು:

  ಇನ್ನು, ಮಹಿಳೆಯರ ಟ್ವೆಂಟಿ20 ವಿಶ್ವಕಪ್ ಟೂರ್ನಿಯ ಯುಎಸ್ ಕ್ವಾಲಿಫಯರ್​ನಲ್ಲಿ ಅಮೆರಿಕ, ಬ್ರೆಜಿಲ್, ಕೆನಡಾ ಮತ್ತು ಅರ್ಜೆಂಟೀನಾ ತಂಡಗಳು ಪಾಲ್ಗೊಂಡಿವೆ. ತಲಾ ಮೂರು ಪಂದ್ಯಗಳನ್ನ ಆಡಿವೆ. ಅಮೆರಿಕ ಮೂರು ಪಂದ್ಯ ಗೆದ್ದು 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬ್ರೆಜಿಲ್ 4, ಕೆನಡಾ 2 ಅಂಕಗಳನ್ನ ಹೊಂದಿವೆ. ಅರ್ಜೆಂಟೀನ್ ಮೂರೂ ಪಂದ್ಯಗಳನ್ನ ಸೋತಿದೆ.

  ಅರ್ಜೆಂಟೀನಾ ಆಡಿದ ಮೂರು ಪಂದ್ಯಗಳಲ್ಲಿ ಕೆನಡಾ ವಿರುದ್ಧ ಗಳಿಸಿದ 62 ರನ್​ಗಳೇ ಅದರ ಅತ್ಯಧಿಕ ಸ್ಕೋರ್ ಆಗಿದೆ. ಈ ಕ್ವಾಲಿಫಯರ್​ನಲ್ಲಿ ಇನ್ನೂ ಒಂದು ಸುತ್ತಿನ ಪಂದ್ಯಗಳು ಬಾಕಿ ಇವೆ. ಇದರಲ್ಲಿ ಅಗ್ರಸ್ಥಾನ ಗಳಿಸಿದ ತಂಡವು ಗ್ಲೋಬಲ್ ಕ್ವಾಲಿಫಯರ್ ಟೂರ್ನಿಗೆ ಅರ್ಹತೆ ಗಿಟ್ಟಿಸಲಿದ್ದಾರೆ.
  Published by:Vijayasarthy SN
  First published: