ಸ್ಯಾಂಡಲ್​ವುಡ್​ ನಟಿಯೊಂದಿಗೆ ಕ್ರಿಕೆಟಿಗ ರಾಹುಲ್ ಡೇಟಿಂಗ್?

'ಮುನ್ನಾ ಮೈಕೆಲ್' ಚಿತ್ರನಟಿ ನಿಧಿ ಅರ್ಗವಾಲ್​ ಜತೆ ರಾಹುಲ್​ಗೆ ಪ್ರೇಮಾಂಕುರವಾಗಿದೆ ಎನ್ನಲಾಗಿತ್ತು.

ಸೋನಾಲ್-ರಾಹುಲ್

ಸೋನಾಲ್-ರಾಹುಲ್

  • News18
  • Last Updated :
  • Share this:
ಬಾಲಿವುಡ್​ ಹಾಗೂ ಟೀಂ ಇಂಡಿಯಾಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಗೆ ಭಾರತದ ತಂಡದ ಆಟಗಾರರ ಹೆಸರುಗಳು ಬಾಲಿವುಡ್ ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ಈ ಬಾರಿಯ ಸರದಿ ಕನ್ನಡಿಗ ರಾಹುಲ್​ರದ್ದು.

ಅತ್ತ ಕಡೆ ವಿಶ್ವಕಪ್​ಗಾಗಿ ಭರ್ಜರಿ ತಯಾರಿಯಲ್ಲಿರುವ ಕೆ.ಎಲ್​ ರಾಹುಲ್ ಹೆಸರು ಇತ್ತಕಡೆ ನಟಿ ಸೋನಾಲ್ ಚೌಹಾಣ್ ಜೊತೆ ಕೇಳಿ ಬರುತ್ತಿದೆ. 'ಜನ್ನತ್', 'ಬುಡ್ಡಾ ಹೋಗ ತೆರಾ ಬಾಪ್' ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನಾಲ್ ಸದ್ಯ ರಾಹುಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್​ಗಳು ಬಿಟೌನ್​ನಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಾಲ್, ಡೇಟಿಂಗ್ ಮ್ಯಾಟರ್​ನ್ನು ಅಲ್ಲೆಗೆಳೆದಿದ್ದಾರೆ. ಅಲ್ಲದೆ ರಾಹುಲ್ ಓರ್ವ ಅತ್ಯುತ್ತಮ ಕ್ರಿಕೆಟಿಗ. ಪ್ರತಿಭಾವಂತ ವ್ಯಕ್ತಿಯಲ್ಲದೆ ಒಳ್ಳೆಯ ಹುಡುಗ ಅಂತ ಮೆಚ್ಚುಗೆಯ ಮಾತೇಳಿ ಅಡ್ಡಾಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ 'ಚೆಲುವೆ ನಿನ್ನ ನೋಡಲು' ಸಿನಿಮಾ ಮೂಲಕ ಸೋನಾಲ್ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡ ನಟಿಯೊಂದಿಗೆ  ರಾಹುಲ್ ಹೆಸರು ಕೇಳಿ ಬಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. 
View this post on Instagram
 

🌸🌸🌸 . . . . . . #sun #sand #vacation #positivevibes #beatheheat #waterbaby #happygirlsaretheprettiest #summer #tanlines


A post shared by Sonal Chauhan (@sonalchauhan) on


ಈ ಹಿಂದೆ ಕೂಡ ಕರ್ನಾಟಕದ ಬಲಗೈ ದಾಂಡಿಗನ ಹೆಸರು ಬಾಲಿವುಡ್  ಗ್ಲಾಮರ್ ಗೊಂಬೆಗಳೊಂದಿಗೆ ಕೇಳಿ ಬಂದಿತ್ತು. ಅದರಲ್ಲಿ ಮುಖ್ಯವಾಗಿ 'ಮುನ್ನಾ ಮೈಕೆಲ್' ಚಿತ್ರನಟಿ ನಿಧಿ ಅರ್ಗವಾಲ್​ ಜತೆ ರಾಹುಲ್​ಗೆ ಪ್ರೇಮಾಂಕುರವಾಗಿದೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ 'ತೇರೆ ತು ನೈನಾ' ಆಲ್ಬಂನಲ್ಲಿ ಕಾಣಿಸಿಕೊಂಡ ಅಕಾಂಕ್ಷ ಕಪೂರ್ ಹೆಸರಿನೊಂದಿಗೂ ಕನ್ನಡಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. 
View this post on Instagram
 

Take pride in how far you have come. Have faith in how far you can go. 🎯


A post shared by KL Rahul👑 (@rahulkl) on


ಆದರೆ ಇಂತಹ ಸುದ್ದಿಗಳನ್ನು ನಿರಾಕರಿಸಿದ್ದ ರಾಹುಲ್, ತಾನು ವಿಶ್ವಕಪ್​ನತ್ತ ಗಮನ ಕೇಂದ್ರೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು. ಬಾಲಿವುಡ್​ ತಾರೆಯರೊಂದಿಗೆ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ, ಜಹೀರ್ ಖಾನ್ ಸೇರಿದಂತೆ ಹಲವು ಟೀಂ ಇಂಡಿಯಾ ಆಟಗಾರರು ಇತ್ತೀಚೆಗೆ ಹಸೆಮಣೆ ಏರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್-ಸೋನಾಲ್ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ.ಸದ್ಯ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿರುವ ರಾಹುಲ್ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: VIDEO: ಎದುರಾಳಿ ತಂಡದ ಫೀಲ್ಡಿಂಗ್ ಸೆಟ್​ ಮಾಡಿದ ಕೂಲ್ ಕ್ಯಾಪ್ಟನ್: ಬಾಂಗ್ಲಾ ತಂಡಕ್ಕೆ ಧೋನಿ ನಾಯಕ?
First published: