Glenn Maxwell: ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!

Glenn Maxwell - KL Rahul

Glenn Maxwell - KL Rahul

ಕಿಂಗ್ಸ್ ಇಲೆವೆನ್ ಪಂಜಾಬ್ ಪರ 13 ಪಂದ್ಯಗಳನ್ನಾಡಿದ ಮ್ಯಾಕ್ಸ್​ವೆಲ್ ಗಳಿಸಿದ್ದು ಕೇವಲ 108 ರನ್​ಗಳು ಮಾತ್ರ. ಅದಕ್ಕಿಂತಲೂ ವಿಚಿತ್ರ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ.

  • Share this:

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 19 ಎಸೆತಗಳಲ್ಲಿ 45 ರನ್ ಸಿಡಿಸಿದ್ರೆ, 2ನೇ ಏಕದಿನ ಪಂದ್ಯದಲ್ಲಿ 29 ಎಸೆತಗಳಲ್ಲಿ ಸ್ಪೋಟಕ 63 ರನ್ ಚಚ್ಚಿದ್ದರು. ಮ್ಯಾಕ್ಸ್​ವೆಲ್ ಅವರ ಈ ಎರಡು ಇನಿಂಗ್ಸ್ ಈಗ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 13ನಲ್ಲಿ ಮ್ಯಾಕ್ಸಿಯ ಅತ್ಯಂತ ಕಳಪೆ ಪ್ರದರ್ಶನ.


ಕಿಂಗ್ಸ್ ಇಲೆವೆನ್ ಪಂಜಾಬ್ ಪರ 13 ಪಂದ್ಯಗಳನ್ನಾಡಿದ ಮ್ಯಾಕ್ಸ್​ವೆಲ್ ಗಳಿಸಿದ್ದು ಕೇವಲ 108 ರನ್​ಗಳು ಮಾತ್ರ. ಅದಕ್ಕಿಂತಲೂ ವಿಚಿತ್ರ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಇನ್ನು ಬೌಂಡರಿ ರೂಪದಲ್ಲಿ 9 ಫೋರ್ ಬಾರಿಸಿರುವುದೇ ಸಾಧನೆ. ಐಪಿಎಲ್ ಟೂರ್ನಿಯುದ್ದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಆಟಗಾರ ಇದೀಗ ಟೀಮ್ ಇಂಡಿಯಾ ವಿರುದ್ಧ ಆರ್ಭಟಿಸಿದ್ದಾರೆ.


ಅತ್ತ ಮಾಕ್ಸ್​ವೆಲ್ ಆರ್ಭಟಿಸುತ್ತಿದ್ದರೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಥಾನದಲ್ಲಿ ನಿಂತು ಆಕ್ರಮಣಕಾರಿ ಬ್ಯಾಟಿಂಗ್ ಗಮನಿಸುತ್ತಿದ್ದದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಎಲ್ ರಾಹುಲ್ ಎಂಬುದು ವಿಶೇಷ. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದ್ದ ಮ್ಯಾಕ್ಸಿ ಆಟವನ್ನು ನೋಡಿ ರಾಹುಲ್​ ಅವರ ಹಾವಭಾವ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸಿಮ್ ಜಾಫರ್ ಮೀಮ್ ಪೋಸ್ಟ್​ವೊಂದನ್ನು ಹಂಚಿಕೊಂಡು ಕಾಲೆಳೆದಿದ್ದರು.


ಅಷ್ಟೇ ಅಲ್ಲದೆ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಆಟಗಾರ ನ್ಯೂಜಿಲೆಂಡ್ ಆಲ್​ರೌಂಡರ್ ಜಿಮ್ಮಿ ನೀಶಮ್ ಕೂಡ ತಮಾಷೆಯ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಕೆಎಲ್ ರಾಹುಲ್ ಅವರ ಮುಖವೊಂದಿರುವ ಮೀಮ್ಸ್ ಎಂಬುದು ವಿಶೇಷ. ಮ್ಯಾಕ್ಸ್​ವೆಲ್ ಬ್ಯಾಟಿಂಗ್ ನೋಡಿ ಶಾಕ್ ಆದ ರಾಹುಲ್ ಎಂಬಂತೆ ಈ ಪೋಸ್ಟ್​ನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.

top videos


    ನೀಶಮ್ ಶೇರ್ ಮಾಡಿರುವ ಟ್ವೀಟ್​ಗೆ ಮ್ಯಾಕ್ಸ್​ವೆಲ್ ಕೂಡ ಪ್ರತಿಕ್ರಿಯಿಸಿರುವುದು ಮತ್ತೊಂದು ವಿಶೇಷ. ನಾನು ಬ್ಯಾಟಿಂಗ್ ವೇಳೆ ರಾಹುಲ್​ ಬಳಿ ಕ್ಷಮೆ ಕೇಳಿದ್ದೇನೆ ಎಂದು ತಮಾಷೆಯಾಗಿ ಗ್ಲೆನ್ ಮ್ಯಾಕ್ಸ್​ವೆಲ್ ಉತ್ತರಿಸಿದ್ದಾರೆ. ಸದ್ಯ ಈ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅತ್ತ ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಮ್ಯಾಕ್ಸಿ ಬಗ್ಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ಅಭಿಮಾನಿಗಳು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!

    First published: