Sarah Taylor: ಬೆತ್ತಲೆ ಫೋಟೋ ಹಾಕಿ ಸುದ್ದಿಯಾಗಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ದಿಢೀರ್ ನಿವೃತ್ತಿ!

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಾರಾ ಕಳೆದ ಕೆಲ ದಿನಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬೆತ್ತಲೆ ಫೋಟೋ ಹಾಕಿ ಭಾರೀ ಸುದ್ದಿಯಾಗಿದ್ದರು.

Vinay Bhat | news18-kannada
Updated:September 28, 2019, 11:37 AM IST
Sarah Taylor: ಬೆತ್ತಲೆ ಫೋಟೋ ಹಾಕಿ ಸುದ್ದಿಯಾಗಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ದಿಢೀರ್ ನಿವೃತ್ತಿ!
ಸಾರಾ ಟೇಲರ್
  • Share this:
ಬೆಂಗಳೂರು (ಸೆ. 28): ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್​ಮನ್, ಅನುಭವಿ ವಿಕೆಟ್ ಕೀಪರ್ ಸಾರಾ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತನ್ನ 13 ವರ್ಷಗಳ ಕ್ರಿಕೆಟ್ ಬದುಕನ್ನು ಅಂತ್ಯಗೊಳಸಿದ್ದಾರೆ.

30 ವರ್ಷದ ಸಾರಾ 2006 ರಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಎಲ್ಲಾ ಮಾದರಿಯಲ್ಲಿ ಒಟ್ಟು 226 ಪಂದ್ಯಗಳನ್ನು ಆಡಿ 6533 ರನ್ ಕಲೆಹಾಕಿದ್ದಾರೆ. ಅಲ್ಲದೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ದಾರೆ.

 

Vijay Hazare Trophy: ಕರ್ನಾಟಕಕ್ಕೆ ಕೇರಳ ಎದುರಾಳಿ; ಕೆ ಎಲ್ ರಾಹುಲ್ ಮೇಲೆ ಎಲ್ಲರ ಕಣ್ಣು

ನಿವೃತ್ತಿ ಬಗ್ಗೆ ಮಾತನಾಡಿರುವ ಸಾರ, 'ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ನಾನು ನಿವೃತ್ತಿ ಘೋಷಿಸಲು ಇದೇ ಸರಿಯಾದ ಸಮಯ. ಕ್ರಿಕೆಟ್ ಜೀವನ ಮರೆಯಲು ಸಾಧ್ಯವಿಲ್ಲ. ಮುಂದಿನ ಜೀವನವನ್ನು ಎದುರಿಸಲು ತಯಾರಾಗಿದ್ದೇನೆ. ನನಗೆ ಸಹಾಯ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಸ್ನೇಹಿತರಿಗೆ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು' ಎಂದು ಸಾರಾ ಹೇಳಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಾರಾ ಕಳೆದ ಕೆಲ ದಿನಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬೆತ್ತಲೆ ಫೋಟೋ ಹಾಕಿ ಭಾರೀ ಸುದ್ದಿಯಾಗಿದ್ದರು. ಪ್ರತಿಯೊಬ್ಬ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ನನ್ನ ದೇಹದಲ್ಲೂ ಸಮಸ್ಯೆಗಳನ್ನು ಹೊಂದಿದ್ದೇನೆ. ಹಾಗಾಗೀ ನಾನು ಫೋಟೋ ತೆಗೆಸಿಕೊಂಡಿದ್ದೇನೆ. ಒಳ್ಳೆಯ ಉದ್ದೇಶಕ್ಕಾಗಿ ನಗ್ನ ಫೋಟೋ ನೀಡಿರುವ ಬಗ್ಗೆ ನನಗೆ ಖಷಿಯಿದೆ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದರು.

  
View this post on Instagram
 

Waiting to go into bat like ... • @womenshealthuk • #thenakedissue #womenshealthmag #portrait


A post shared by Sarah Taylor (@sjtaylor30) on
First published: September 28, 2019, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading