Virat-Anushka: ಅನುಷ್ಕಾ ಶರ್ಮಾಗೆ ವಿರಹ ವೇದನೆಯಾ? ಈಕೆ ಹಾಕಿದ ಪೋಸ್ಟ್​ಗೆ ಸಿಕ್ಕಾಪಟ್ಟೆ ಲೈಕ್ಸ್

Anushka Sharma shares feelings in Instagram- ಕ್ವಾರಂಟೈನ್​ನಿಂದ ಹೃದಯ ತುಂಬಿದೆಯೋ, ಬಬಲ್ ಲೈಫ್ ಸಮಯದಲ್ಲಿನ ಪ್ರೀತಿಯೋ ಗೊತ್ತಾಗುತ್ತಿಲ್ಲ ಎಂದು ಅನುಷ್ಕಾ ಶರ್ಮಾ ತಮ್ಮ ವಿರಹ ವೇದನೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕೈ ಬೀಸುತ್ತಿರುವುದು

ವಿರಾಟ್ ಕೊಹ್ಲಿ ಕೈ ಬೀಸುತ್ತಿರುವುದು

  • Share this:
    ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ ಅಂತರ ಉಂಟಾಗಿದೆ. ಈ ವಿಷಯವನ್ನು ಸ್ವತಃ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಮೂರು ಫೋಟೋ ಹಂಚಿಕೊಂಡಿರುವ ಅನುಷ್ಕಾ ಶರ್ಮಾ (Virushka) ತಮ್ಮ ನಡುವಿನ ಅಂತರಕ್ಕೆ ಕಾರಣವನ್ನು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಬಾಲ್ಕನಿ ಮತ್ತು ಗಾರ್ಡನ್ ಏರಿಯಾದಲ್ಲಿ ನಿಂತು ಪತ್ನಿಯತ್ತ ಕೈ ಬೀಸೋದನ್ನು ಕಾಣಬಹುದಾಗಿದೆ.

    2021ರ ಟಿ20 ವಿಶ್ವಕಪ್ ಯುಎಇ (T20 World Cup 2021 UAE) ಯಲ್ಲಿ ನಡೆಯುತ್ತಿವೆ. ನಿನ್ನೆಯಿಂದಲೇ ಪಂದ್ಯಗಳು ಆರಂಭಗೊಂಡಿವೆ. ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ವಿಶ್ವಕಪ್ ಹಿನ್ನೆಲೆ ವಿರಾಟ್ ಕೊಹ್ಲಿ ಯುಎಇಯಲ್ಲಿ ಉಳಿದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ದುಬೈ ಹೋಟೆಲ್ ನಲ್ಲಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾ ಹಿನ್ನೆಲೆ ಅನುಷ್ಕಾ ಶರ್ಮಾ ದುಬೈ ಹೋಟೆಲ್ ವೊಂದರಲ್ಲಿ ಕ್ವಾರಂಟೈನ್ (Quarantine) ಆಗಿದ್ದಾರೆ. ಹಾಗಾಗಿ ಹೋಟೆಲ್ ನಲ್ಲಿದ್ರೂ ಕೊರೊನಾ ನಿಯಮ (COVID 19 Rules) ಹಿನ್ನೆಲೆ ಕಡ್ಡಾಯ ಕೊರೊನಾ ನಿಯಮಗಳನ್ನು ಫಾಲೋ ಮಾಡಬೇಕಿದೆ. ಬಾಲ್ಕನಿ ಮತ್ತು ಲಾನ್ ನಲಿಯೇ ನಿಂತು ಪತ್ನಿಗೆ ವಿರಾಟ್ ಕೊಹ್ಲಿ ಕೈ ಬೀಸುತ್ತಿದ್ದಾರೆ.

    ಕ್ವಾರಂಟೈನ್​ನಿಂದ ನಿಮ್ಮ ಹೃದಯ ತುಂಬುತ್ತದೆ ಮತ್ತು ಬಬಲ್ ಲೈಫ್​ನ ಸಮಯದಲ್ಲಿ ಪ್ರೀತಿ, ಈ ಎರಡು ಕ್ಯಾಪ್ಷನ್​ಗಳಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳೋದು ನನಗೆ ಗೊತ್ತಾಗುತ್ತಿಲ್ಲ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಕಿರುವ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿದೆ. ರಣ್‍ವೀರ್ ಸಿಂಗ್ (Ranveer Singh), ಸಾನಿಯಾ ಮಿರ್ಜಾ (Sania Mirza)  ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಮೆಂಟ್ ಮಾಡುತ್ತಿದ್ದಾರೆ. 25 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್​ಗೆ ಲೈಕ್ಸ್ ಕೊಟ್ಟಿದ್ದಾರೆ.



    ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11, 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಎರಡೂ ಕುಟುಂಬದ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಅನುಷ್ಕಾ ಶರ್ಮಾ 2018ರಲ್ಲಿ ಬಿಡುಗಡೆಯಾಗಿದ್ದ 'ಝೀರೋ' (Zero Cinema) ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: India vs Pakistan- ಭಾರತ-ಪಾಕ್ ಪಂದ್ಯದ ದಿನ ಸಾನಿಯಾ ಮಿರ್ಜಾ ಮಾಯ ಆಗೋದು ಯಾಕೆ ಗೊತ್ತಾ?

    ಬಿಡುವಿಲ್ಲದ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ: 

    ಇತ್ತ ವಿರಾಟ್ ಕೊಹ್ಲಿ ಅವರು ಸತತ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಮುಳುಗಿಹೋಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಬಳಿಕ ಐಪಿಎಲ್, ನಂತರ ಈಗ ಟಿ20 ವಿಶ್ವಕಪ್. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ. ಅದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ. ಹೀಗೆ ಬಿಡುವಿಲ್ಲದ ಕ್ರಿಕೆಟ್ ಪಂದ್ಯಗಳು ವಿರಾಟ್ ಕೊಹ್ಲಿಗೆ ಕಾಯುತ್ತಿವೆ. ಹಾಗೆಯೇ, ಕಳೆದ ನಾಲ್ಕು ತಿಂಗಳಿಂದ ಮೂರು ಪ್ರತ್ಯೇಕ ಬಯೋ ಬಬಲ್ ವಾಸದಿಂದ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರು ಹೈರಾಣಾಗಿ ಹೋಗಿದ್ದಾರೆ.

    ಭಾರತ ಈ ವಿಶ್ವಕಪ್​ನಲ್ಲಿ ಸೂಪರ್-12 ಸುತ್ತಿಗೆ ನೇರ ಪ್ರವೇಶ ಪಡೆದಿದೆ. ಅ. 24ರಂದು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಇದಕ್ಕೆ ಮುನ್ನ ಇವತ್ತು ಹಾಗೂ ಅ. 20ರಂದು ಸೌಥ್ ಆಫ್ರಿಕಾ ಹಾಗು ಆಸ್ಟ್ರೇಲಿಯಾ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನ ಆಡಲಿದೆ. ಸೂಪರ್-12 ಹಂತದಲ್ಲಿ ಎರಡನೇ ಗುಂಪಿನಲ್ಲಿರುವ ಭಾರತದ ಜೊತೆ ಪಾಕಿಸ್ತಾನವಲ್ಲದೆ ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಮೊದಲ ಸುತ್ತಿನಿಂದ ಪ್ರವೇಶ ಪಡೆಯುವ ಇನ್ನೆರಡು ತಂಡಗಳು ಇವೆ.

    - ಮಹಮ್ಮದ್ ರಫೀಕ್ ಕೆ.
    Published by:Vijayasarthy SN
    First published: