HOME » NEWS » Sports » CRICKET ANUSHKA SHARMA RECEIVES HATE ON TWITTER AGAIN AS VIRAT KOHLI BOY LOSES AGAINST AUSTRALIA TEST SESR

INDvsAUSTest: ಟೀಮ್​ ಇಂಡಿಯಾ ಸೋಲು; ಟ್ರೋಲಿಗೆ ಗುರಿಯಾದ ವಿರಾಟ್​ ಮಡದಿ ಅನುಷ್ಕಾ ಶರ್ಮಾ

ಮುಂದಿನ ಮೂರು ಪಂದ್ಯಗಳಿಗೆ ಲಭ್ಯವಿರದ ಕೊಹ್ಲಿ, ಭಾರತಕ್ಕೆ ಬೇಗ ಮರಳುವ ಉದ್ದೇಶದಿಂದ ಪಂದ್ಯವನ್ನು ಬೇಗ ಮುಗಿಸಿದ್ದಾರೆ ಎಂದು ಟೀಕಾಪ್ರವಾಹರ ನಡೆಸಿದ್ದಾರೆ.

news18-kannada
Updated:December 19, 2020, 5:04 PM IST
INDvsAUSTest: ಟೀಮ್​ ಇಂಡಿಯಾ ಸೋಲು; ಟ್ರೋಲಿಗೆ ಗುರಿಯಾದ ವಿರಾಟ್​ ಮಡದಿ ಅನುಷ್ಕಾ ಶರ್ಮಾ
Kohli Anushka
  • Share this:
ಆಸ್ಟ್ರೇಲಿಯಾದ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲನ್ನಪ್ಪಿದೆ.  ಆಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿಯೇ ಕಡಿಮೆ ರನ್​ಗಳಿಗೆ ಭಾರತ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು, ಕೇವಲ 90 ರನ್​ಗಳ ಗುರಿಯನ್ನು ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 36 ರನ್​​ ಗಳಿಸಿದ ಟೀಮ್​ ಇಂಡಿಯಾದ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕ್ರಿಕೆಟ್​ ಅಭಿಮಾನಿಗಳು ಈ ಸೋಲಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ಅವರ ಹೆಂಡತಿ ಅನುಷ್ಕಾ ಶರ್ಮಾರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಮುಂದಿನ ಮೂರು ಪಂದ್ಯಗಳಿಗೆ ಲಭ್ಯವಿರದ ಕೊಹ್ಲಿ, ಭಾರತಕ್ಕೆ ಬೇಗ ಮರಳುವ ಉದ್ದೇಶದಿಂದ ಪಂದ್ಯವನ್ನು ಬೇಗ ಮುಗಿಸಿದ್ದಾರೆ ಎಂದು ಟೀಕಾಪ್ರವಾಹರ ನಡೆಸಿದ್ದಾರೆ. ಈಗಾಗಲೇ ತುಂಬು ಗರ್ಭಿಣಿಯಾಗಿರುವ ನಟಿ ಅನುಷ್ಕಾ ಶರ್ಮಾ, ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ಹೆಂಡತಿಗೆ ಪಕ್ಕದಲ್ಲಿರುವುದು ಅವಶ್ಯಕವಾಗಿರುವ ಹಿನ್ನಲೆ ವಿರಾಟ್​ ಪಿತೃತ್ವ ರಜೆ ಮೇಲೆ, ಪಂದ್ಯದಿಂದ ಹೊರಗುಳಿದಿದ್ದಾರೆ. 

ಪಂದ್ಯದಿಂದ ಹೊರಗುಳಿಯುವ ಬದಲು ಅನುಷ್ಕಾರನ್ನು ಆಸ್ಟ್ರೇಲಿಯಾಕ್ಕೆ ಕರೆತಂದು ಹೆರಿಗೆ ಮಾಡಿಸುವಂತೆ ಆಸ್ಟ್ರೇಲಿಯಾ ಮಾಜಿ ಬೌಲರ್​ ಬ್ರೇಟ್​ ಲೀ ಆಹ್ವಾನವನ್ನು ಕೂಡ ನೀಡಿದ್ದರು












ಭಾರತ ಟೆಸ್ಟ್​ನಲ್ಲಿ 36 ರನ್​ ಗಳಿಸುವ ಮೂಲಕ ಅತ್ಯಂತ ಕಡಿಮೆ ಸ್ಕೋರ್​ ದಾಖಲು ಮಾಡಿದೆ. ಆದರೆ, ಕೆಲವರು ಈ ರೀತಿ ಟೀಕೆಗೆ ಖಂಡಿಸಿದ್ದು, ಟೀಮ್​ ಇಂಡಿಯಾ ಸೋಲಿಗೆ  ನಟಿ ಅನುಷ್ಕಾರನ್ನು ಗುರಿಯಾಗಿಸುವುದು ತಪ್ಪು. ಈ ರೀತಿ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
Published by: Seema R
First published: December 19, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories