Ind vs Pak: ಪಾಕ್​ ಮೇಲೆ ಮತ್ತೊಂದು ದಾಳಿ, ಫಲಿತಾಂಶ ಒಂದೇ; ಭಾರತ ಕ್ರಿಕೆಟ್​ ತಂಡಕ್ಕೆ ಶಹಬ್ಬಾಸ್​ ಎಂದ ಅಮಿತ್​ ಶಾ

ಸಾಂಪ್ರದಾಯಿಕ ಎದುರಾಳಿಗಳು ಎಂದೇ ಪರಿಗಣಿಸಲ್ಪಡುವ ಭಾರತ- ಪಾಕಿಸ್ತಾನ ಕ್ರಿಕೆಟ್​ ಪಂದ್ಯದ ಬಗ್ಗೆ ಜಗತ್ತಿನೆಲ್ಲೆಡೆ ಕುತೂಹಲ ಮನೆಮಾಡಿತ್ತು. 89 ರನ್​ಗಳ ಅಂತರದಲ್ಲಿ ಪಾಕ್​ ವಿರುದ್ಧ ಭಾರೀ ಜಯ ಸಾಧಿಸಿದ ಭಾರತಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಶಹಬ್ಭಾಸ್​ ಎಂದಿದ್ದಾರೆ.

Sushma Chakre | news18
Updated:June 17, 2019, 10:29 AM IST
Ind vs Pak: ಪಾಕ್​ ಮೇಲೆ ಮತ್ತೊಂದು ದಾಳಿ, ಫಲಿತಾಂಶ ಒಂದೇ; ಭಾರತ ಕ್ರಿಕೆಟ್​ ತಂಡಕ್ಕೆ ಶಹಬ್ಬಾಸ್​ ಎಂದ ಅಮಿತ್​ ಶಾ
ಅಮಿತ್​​ ಶಾ
  • News18
  • Last Updated: June 17, 2019, 10:29 AM IST
  • Share this:
ನವದೆಹಲಿ (ಜೂ. 17): ನಿನ್ನೆ ನಡೆದ ವಿಶ್ವ ಕಪ್​ನಲ್ಲಿ ಪಾಕಿಸ್ತಾನ​ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಕ್ರಿಕೆಟ್​ ತಂಡಕ್ಕೆ ಅಭಿನಂದನೆಗಳು ಹರಿದುಬರುತ್ತಿವೆ. ರಾಜಕಾರಣಿಗಳು ಕೂಡ ಕೊಹ್ಲಿ ನೇತೃತ್ವದ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳು ಎಂದೇ ಪರಿಗಣಿಸಲ್ಪಡುವ ಭಾರತ- ಪಾಕಿಸ್ತಾನ ಕ್ರಿಕೆಟ್​ ಪಂದ್ಯದ ಬಗ್ಗೆ ಜಗತ್ತಿನೆಲ್ಲೆಡೆ ಕುತೂಹಲ ಮನೆಮಾಡಿತ್ತು. 89 ರನ್​ಗಳ ಅಂತರದಲ್ಲಿ ಪಾಕ್​ ವಿರುದ್ಧ ಭಾರೀ ಜಯ ಸಾಧಿಸಿದ ಭಾರತಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಶಹಬ್ಭಾಸ್​ ಎಂದಿದ್ದಾರೆ. ಟ್ವಿಟ್ಟರ್​ನಲ್ಲಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅಮಿತ್ ಶಾ ಈ ವಿಜಯವನ್ನು ಸರ್ಜಿಕಲ್​ ಸ್ಟ್ರೈಕ್​ ಜೊತೆಗೆ ಹೋಲಿಕೆ ಮಾಡಿದ್ದಾರೆ.

IND vs PAK: ತಮ್ಮ ದೇಶದ ಅಭಿಮಾನಿಗಳಿಂದಲೇ ಛೀಮಾರಿ ಹಾಕಿಸಿಕೊಂಡ ಪಾಕ್ ಕ್ರಿಕೆಟ್​ ತಂಡ

ಪಾಕಿಸ್ತಾನದ ಮೇಲೆ ಭಾರತ ಕ್ರಿಕೆಟ್​ ತಂಡ ಮತ್ತೊಂದು ದಾಳಿ ನಡೆಸಿದೆ. ದಾಳಿ ನಡೆಸಿದವರು ಬೇರೆ ಬೇರೆಯಾದರೂ ಫಲಿತಾಂಶ ಮಾತ್ರ ಒಂದೇ ಆಗಿದೆ. ಅದ್ಭುತ ಆಟ ಪ್ರದರ್ಶಿಸಿದ ಇಡೀ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಯೊಬ್ಬ ಭಾರತೀಯನೂ ಈ ವಿಜಯಕ್ಕೆ ಹೆಮ್ಮೆ ಪಡುತ್ತಾನೆ ಎಂದು ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.ಹಾಗೇ, ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಕೂಡ ಟ್ವೀಟ್​ ಮಾಡಿದ್ದು, ವಿಶ್ವಕಪ್​ನಲ್ಲಿ ಬಹಳ ಉತ್ತಮ ಪ್ರದರ್ಶನ ತೋರಿದ್ದೀರಿ. ಪಾಕಿಸ್ತಾನದ ವಿರುದ್ಧ ಆಡಿದ ಆಟವಂತೂ ಅದ್ಭುತವಾಗಿತ್ತು. ನಮಗೆಲ್ಲರಿಗೂ ಟೀಂ ಇಂಡಿಯಾದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ