• Home
  • »
  • News
  • »
  • sports
  • »
  • ಕೆಪಿಎಲ್​ನಲ್ಲಿ ಮತ್ತೊಂದು ಮ್ಯಾಚ್ ಫಿಕ್ಸಿಂಗ್ ಕರ್ಮಕಾಂಡ?; ಮಗನ ಮ್ಯಾಚ್​ಗೆ ಅಪ್ಪನೇ ಅಂಪೈರ್​!

ಕೆಪಿಎಲ್​ನಲ್ಲಿ ಮತ್ತೊಂದು ಮ್ಯಾಚ್ ಫಿಕ್ಸಿಂಗ್ ಕರ್ಮಕಾಂಡ?; ಮಗನ ಮ್ಯಾಚ್​ಗೆ ಅಪ್ಪನೇ ಅಂಪೈರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಪಿಎಲ್​ ನಿಯಮ ಪ್ರಕಾರ ಕುಟುಂಬಸ್ಥರಿದ್ದರೆ ಅಂಪೈರ್​ಗಳು ಆ ಮ್ಯಾಚ್​ಗೆ ಕಾರ್ಯನಿರ್ವಹಿಸುವಂತಿಲ್ಲ. ಹೀಗಾಗಿ, ಈ ಪಂದ್ಯ ಕೂಡ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

  • Share this:

ಬೆಂಗಳೂರು (ನ.22): ಕರ್ನಾಟಕ ಪ್ರೀಮಿಯರ್​ ಲೀಗ್​ (ಕೆಪಿಎಲ್​) ಮ್ಯಾಚ್​ ಫಿಕ್ಸಿಂಗ್​ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹನಿ ಟ್ರ್ಯಾಪ್​ ಮೂಲಕ ಆಟಗಾರರನ್ನು ಬ್ಲ್ಯಾಕ್​ಮೇಲ್​ ಮಾಡಲಾಗಿತ್ತು ಎನ್ನುವ ವಿಚಾರ ನಿನ್ನೆಯಷ್ಟೇ ಬಹಿರಂಗಗೊಂಡಿತ್ತು. ಈಗ ಈ ಪ್ರಕರಣದಲ್ಲಿ ಸಿಸಿಬಿಯಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಇದೇ ಮೊದಲ ಬಾರಿಗೆ ಅಂಪೈರ್ ಕರೆದು ವಿಚಾರಣೆ ನಡೆಸಲಾಗಿದೆ.

ಕೆಪಿಎಲ್​ನ  ಹಲವು ಪಂದ್ಯಗಳಿಗೆ​ ಅಂಪೈರ್​ ಆಗಿದ್ದ ಬಿ.ಕೆ. ರವಿ ಅವರನ್ನು ಸಿಸಿಬಿ ಪೊಲೀಸರು ಕರೆದು  ವಿಚಾರಣೆ ನಡೆಸಿದ್ದಾರೆ. ಇವರ ಮಗ ಶರತ್​ ಕೆಪಿಎಲ್ ತಂಡವೊಂದರಲ್ಲಿ ಆಡುತ್ತಿದ್ದರು. ಪುತ್ರ ಆಡಿದ್ದ ಪಂದ್ಯವೊಂದಕ್ಕೆ ರವಿ ಮೂರನೇ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಕ್ರಿಕೆಟ್​​ ನಿಯಮದ ಪ್ರಕಾರ ಕುಟುಂಬಸ್ಥರಿದ್ದರೆ ಅಂಪೈರ್​ಗಳು ಆ ಮ್ಯಾಚ್​ಗೆ ಕಾರ್ಯನಿರ್ವಹಿಸುವಂತಿಲ್ಲ. ಹೀಗಾಗಿ, ಈ ಪಂದ್ಯದಲ್ಲಿಯೂ ಫಿಕ್ಸಿಂಗ್ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ರವಿ ಅವರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದೆ. ಶೀಘ್ರದಲ್ಲೇ ಶರತ್ ಅವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಟ್ಟಿಂಗ್ ದಂಧೆಯಿಂದ ಬೇಸತ್ತು ಕ್ರಿಕೆಟರ್ ಸೂಸೈಡ್?; ವಿಚಾರಣೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ!

ಅಪ್ಪನಿಂದ ಸಿಕ್ಕಿತ್ತು ಅವಕಾಶ:

ಕೆಪಿಎಲ್ ನಲ್ಲಿ ಬೆಂಗಳೂರು ಬ್ಲಾಸ್ಟರ್ ಪರ ಬಿ.ಕೆ.ಶರತ್ ಆಡಿದ್ದರು. ರಣಜಿಯಲ್ಲಿ ಕರ್ನಾಟಕ ಪರ ಕರ್ನಾಟಕದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸಮನ್ ಆಗಿ ಆಡಿದ್ದರು. ರಣಜಿ ಪದಾರ್ಪಣೆ ಪಂದ್ಯದಲೇ ಸೆಂಚೂರಿ ಸಿಡಿಸಿದ್ದು ಶರತ್ ಹೆಚ್ಚುಗಾರಿಕೆ. ಬಿಕೆ.ರವಿ ಈ ಹಿಂದೆ ಕೋಚ್ ಆಗಿದ್ದರು. ಇದೇ ಪ್ರಭಾವ ಬಳಸಿ ಮಗನಿಗೆ ಕರ್ನಾಟಕ ರಣಜಿ ಟೀಮ್​ನಲ್ಲಿ ಸ್ಥಾನ ಕೊಡಿಸಿದ್ದರು ಎನ್ನಲಾಗಿದೆ.

ಏನಿದು ಪ್ರಕರಣ?:

ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಫಿಕ್ಸಿಂಗ್​ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಅನೇಕ ಆಟಗಾರರನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಭವೇಶ್ ಹಾಗೂ ದೆಹಲಿ ಮೂಲದ ಸನ್ಯಾಂಗಾಗಿ ಈ ಪ್ರಕರಣದ ಪ್ರಮುಖ ರುವಾರಿಗಳು. ಕೇವಲ ಬಳ್ಳಾರಿ ಟಸ್ಕರ್ಸ್ ಅಲ್ಲದೆ ಹಲವು ತಂಡಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಲು ಇವರು ಯತ್ನಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.

ಸ್ಪಾಟ್ ಫಿಕ್ಸಿಂಗ್ ಡೀಲ್ ನಡೆದಿರುವುದು ಜೆಪಿ ನಗರದ ಕೆಫೆಯೊಂದರಲ್ಲಂತೆ. ಕೇವಲ ಎರಡು ಲಕ್ಷ ರೂ.ಗೆ ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್ ಮಾಡಲು ಆಮಿಷವೊಡ್ಡಿದ್ದರು. ಆರಂಭದಲ್ಲಿ 2 ಲಕ್ಷ ಅಡ್ವಾನ್ಸ್, ಬಳಿಕ ಒಂದು ಓವರ್​ಗೆ 10 ಕ್ಕೂ ಅಧಿಕ ರನ್ ನೀಡಿದರೆ ಹೆಚ್ಚುವರಿ ಹಣ ನೀಡುವುದಾಗಿ ಆಮಿಷ ಒಡ್ಡಲಾಗಿತ್ತಂತೆ.

(ವರದಿ: ಕಿರಣ್ ಕೆಎನ್​​)

First published: