• Home
 • »
 • News
 • »
 • sports
 • »
 • Kumble vs Kohli- ಕುಂಬ್ಳೆ ಜೊತೆ ಹಿಂದೆ ನಡೆದ ಜಟಾಪಟಿ ಕೊಹ್ಲಿಗೆ ಮುಳುವಾಯ್ತೆ? ಇಲ್ಲಿದೆ ವಿವರ

Kumble vs Kohli- ಕುಂಬ್ಳೆ ಜೊತೆ ಹಿಂದೆ ನಡೆದ ಜಟಾಪಟಿ ಕೊಹ್ಲಿಗೆ ಮುಳುವಾಯ್ತೆ? ಇಲ್ಲಿದೆ ವಿವರ

ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ

ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ

Timeline of Kumble vs Kohli: ಕುಲದೀಪ್ ಆಯ್ಕೆ, ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಆಯ್ಕೆ ಇತ್ಯಾದಿ ವಿಚಾರಗಳಲ್ಲಿ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಕುಂಬ್ಳೆ ‘ಕಠೋರ’ ವರ್ತನೆ ಕೊಹ್ಲಿಗೆ ಕಿರಿಕಿರಿಯಾಗಿತ್ತೆನ್ನಲಾಗಿದೆ. ಅದು 2017ರಲ್ಲಿ ಕುಂಬ್ಳೆ ರಾಜೀನಾಮೆಗೆ ಎಡೆ ಮಾಡಿಕೊಟ್ಟಿತ್ತು.

ಮುಂದೆ ಓದಿ ...
 • Cricketnext
 • Last Updated :
 • Share this:

  ರವಿಶಾಸ್ತ್ರಿ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆಂಬ ಅನುಮಾನ ಗಟ್ಟಿಯಾಗುತ್ತಿರುವಂತೆಯೇ ಅನಿಲ್ ಕುಂಬ್ಳೆ (Anil Kumble) ಮತ್ತೊಮ್ಮೆ ಕೋಚ್ (Team India Coach) ಆಗಲಿದ್ಧಾರೆ ಎಂಬ ಸುದ್ದಿ ಬಲಗೊಳ್ಳತೊಡಗಿದೆ. ವಿವಿಎಸ್ ಲಕ್ಷ್ಮಣ್ (VVS Laxman) ಅವರ ಹೆಸರೂ ಕೋಚ್ ಸ್ಥಾನಕ್ಕೆ ಚಾಲನೆಯಲ್ಲಿದೆ. ರವಿಶಾಸ್ತ್ರಿ ರಾಜೀನಾಮೆ ನೀಡಿದ ಬಳಿಕ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಕೇಳಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮ ವರದಿಗಳು ಅಂದಾಜಿಸಿವೆ. ಅಂದಹಾಗೆ ಅನಿಲ್ ಕುಂಬ್ಳೆ 2016ರಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದವರು. ಒಂದೇ ವರ್ಷದ ಅವಧಿಯಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು. ಅದಕ್ಕೆ ಕೊಹ್ಲಿ (Virat Kohli) ಜೊತೆ ಅವರ ಜಟಾಪಟಿಯೇ ಕಾರಣ ಎಂಬ ಅಭಿಪ್ರಾಯಗಳಿವೆ. ಬಿಸಿಸಿಐನ ಉನ್ನತ ಮೂಲವೊಂದರ ಪ್ರಕಾರ ಅನಿಲ್ ಕುಂಬ್ಳೆ ರಾಜೀನಾಮೆ ಘಟನೆಯನ್ನ ಸರಿಪಡಿಸುವ ಅಗತ್ಯ ಇದೆ. ವಿರಾಟ್ ಕೊಹ್ಲಿಯ ಒತ್ತಡಕ್ಕೆ ಬಿದ್ದು ಕುಂಬ್ಳೆಯನ್ನ ತೆಗೆದುಹಾಕಿದ್ದು ಸರಿಯಾದ ಕ್ರಮವಾಗಿರಲಿಲ್ಲ ಎಂದಿದ್ದಾರೆ.


  ಅನಿಲ್ ಕುಂಬ್ಳೆ ಆರ್​ಸಿಬಿಯ ಮೆಂಟರ್ ಆಗಿದ್ದಾಗಲೇ ವಿರಾಟ್ ಕೊಹ್ಲಿ ಮತ್ತವರ ನಡುವೆ ಉತ್ತಮ ಸಂಬಂಧ ಇರಲಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕೆ ಅನಿಲ್ ಕುಂಬ್ಳೆ ಅವರು 2013ರಲ್ಲಿ ಆರ್​ಸಿಬಿ ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರೆನ್ನಲಾಗಿದೆ. ಅನಿಲ್ ಕುಂಬ್ಳೆ ಕೋಚ್ ಆಗುವ ಮುನ್ನ ರವಿಶಾಸ್ತ್ರಿ ಅವರು ಟೀಮ್ ಇಂಡಿಯಾ ಮ್ಯಾನೇಜರ್ ಆಗಿದ್ದರು. ರವಿಶಾಸ್ತ್ರಿ ಅವರ ಅವಧಿ ಮುಗಿದಿದ್ದರಿಂದ ನೂತನ ಕೋಚ್ ಸ್ಥಾನಕ್ಕೆ 57 ಅರ್ಜಿಗಳು ಬಂದಿದ್ದವು. ಅದರಲ್ಲಿ ಅನಿಲ್ ಕುಂಬ್ಳೆಯವರದ್ದೂ ಒಂದು. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ನೇತೃತ್ವದ ಕ್ರಿಕೆಟ್ ಅಡ್ವೈಸರಿ ಕಮಿಟಿಯಿಂದ ಇಂಟರ್​ವ್ಯೂ ನಡೆದು ಕೊನೆಗೆ ಕುಂಬ್ಳೆ ಅವರನ್ನ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಆದರೆ, ತಂಡದೊಂದಿಗೆ ಅವರ ಪ್ರಯಾಣ ನಿರೀಕ್ಷಿಸಿದಷ್ಟು ದೂರ ಸಾಗಲಿಲ್ಲ. ಕೊಹ್ಲಿ ಮತ್ತವರ ನಡುವಿನ ಸಂಬಂಧದ ಮಧ್ಯೆ ಸೃಷ್ಟಿಯಾಗಿದ್ದ ಬಿರುಕು ಅವರನ್ನ ಹೊರಹೋಗುವಂತೆ ಮಾಡಿತೆನ್ನಲಾಗಿದೆ.


  ಇದನ್ನೂ ಓದಿ: Ravi Shastri- ‘ಅತಿಥಿ ಹೆಚ್ಚು ದಿನ ಇರಬಾರದು’- ರಾಜೀನಾಮೆ ಸುಳಿವು ನೀಡಿದರಾ ಕೋಚ್ ರವಿಶಾಸ್ತ್ರಿ?


  2016, ಜೂನ್ 23ರಂದು ಕುಂಬ್ಳೆ ಅವರನ್ನ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಅದಾದ ಬಳಿಕ ಅವರು ರಾಜೀನಾಮೆ ನೀಡುವವರೆಗೆ ಏನೇನಾಯಿತು ಎಂಬ ಟೈಮ್​ಲೈನ್ ಇಲ್ಲಿದೆ:


  2016, ಜುಲೈ-ಆಗಸ್ಟ್: ಕುಂಬ್ಳೆ ಕೋಚ್ ಆದ ನಂತರ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸುತ್ತದೆ. ವೆಸ್ಟ್ ಇಂಡೀಸ್​ನ ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 92 ರನ್​ಗಳಿಂದ ಆತಿಥೇಯರನ್ನ ಸೋಲಿಸುತ್ತದೆ. ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯನ್ನ ಭಾರತ 2-0ಯಿಂದ ಗೆದ್ದುಕೊಳ್ಳುತ್ತದೆ.


  2017, ಮಾರ್ಚ್ 25: ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಪಂದ್ಯವೊಂದಕ್ಕೆ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನ ಅಯ್ಕೆ ಮಾಡುವ ವಿಚಾರಕ್ಕೆ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತದೆ.


  2017, ಮಾರ್ಚ್ 28: ಧರ್ಮಶಾಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್ ಗೆಲುವು ಪಡೆಯುತ್ತದೆ. ಆ ಸರಣಿ 2-1ರಿಂದ ಭಾರತದ ವಶವಾಗುತ್ತದೆ. ಪಂದ್ಯಕ್ಕೆ ಆಯ್ಕೆಯಾಗಿದ್ದ ಕುಲದೀಪ್ ಯಾದವ್ ತಮ್ಮ ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸಲ್ಲಿ 4 ವಿಕೆಟ್ ಪಡೆದು ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಳ್ಳುತ್ತಾರೆ. ಆಗ ಕೊಹ್ಲಿ ಮತ್ತು ಕುಂಬ್ಳೆ ನಡುವಿನ ಜಗಳ ತೆರೆಮೆರೆಗೆ ಸರಿಯುತ್ತದೆ.


  2017, ಮೇ 23: ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನ ಸಹಾಯಕ ಮುಖ್ಯ ಕೋಚ್ ಆಗಿ ಬಡ್ತಿ ನೀಡಬೇಕು. ಬೌಲಿಂಗ್ ಕೋಚ್​ವೊಬ್ಬರನ್ನ ನೇಮಿಸಬೇಕು ಎಂದು ಬಿಸಿಸಿಐಗೆ ಕುಂಬ್ಳೆ ಪ್ರಸ್ತಾವನೆ ಮುಂದಿಟ್ಟರು. ಜಹೀರ್ ಖಾನ್ ಅವರನ್ನೇ ಬೌಲಿಂಗ್ ಕೋಚ್ ಆಗಿ ಮಾಡಬೇಕು ಎಂಬುದು ಕುಂಬ್ಳೆ ಅವರ ಒತ್ತಾಸೆಯಾಗಿತ್ತೆನ್ನಲಾಗಿದೆ.


  2017, ಮೇ 25: ಅನಿಲ್ ಕುಂಬ್ಳೆ ಅವರ ಕೋಚ್ ಅವಧಿ ಮುಗಿಯಲು ಒಂದು ತಿಂಗಳು ಇರುವಂತೆಯೇ ಕೋಚ್ ಸ್ಥಾನಕ್ಕೆ ಬಿಸಿಸಿಐನಿಂದ ಅಭ್ಯರ್ಥಿಗಳ ಹುಡುಕಾಟ ಶುರುವಾಗುತ್ತದೆ. ಅನಿಲ್ ಕುಂಬ್ಳೆ ಅವರಿಗೆ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಕೊಡಲಾಗುತ್ತದೆ.


  2017, ಮೇ 29: ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಕೆಲ ಆಟಗಾರರಿಗೆ ಕೋಚ್ ಅನಿಲ್ ಕುಂಬ್ಳೆಯ ಶಿಸ್ತುಬದ್ಧ ವರ್ತನೆ ಕಿರಿಕಿರಿ ತಂದಿದೆ. ಕುಂಬ್ಳೆ ಮತ್ತು ಕೊಹ್ಲಿ ಮಧ್ಯೆ ಸಂಬಂಧ ಸರಿ ಇಲ್ಲ ಎಂಬ ಸುದ್ದಿಗಳು ಕೇಳಿಬರುತ್ತವೆ.


  2017, ಜೂನ್ 1: ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತಾರೆ. ದೊಡ್ಡಗಣೇಶ್, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್​ಚಂದ್ ರಜಪೂತ್ ಅವರೂ ಕೋಚ್ ಸ್ಥಾನಕ್ಕೆ ಅರ್ಜಿ ಗುಜರಾಯಿಸುತ್ತಾರೆ.


  ಇದನ್ನೂ ಓದಿ: Akash Chopra on Virat Kohli: ಏಕದಿನ ನಾಯಕತ್ವಕ್ಕೂ ವಿರಾಟ್ ಗುಡ್‌ ಬೈ?: ಕಿಂಗ್ ಕೊಹ್ಲಿ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದೇನು?


  2017, ಜೂನ್ 3: ಇದೇ ವೇಳೆ ತಮ್ಮ ಹಾಗೂ ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ಸುದ್ದಿಯನ್ನ ವಿರಾಟ್ ಕೊಹ್ಲಿ ಅಲ್ಲಗಳೆಯುತ್ತಾರೆ. ಇದೆಲ್ಲವೂ ಕಪೋಲಕಲ್ಪಿತ ಸುದ್ದಿ ಎಂದು ತಳ್ಳಿಹಾಕುತ್ತಾರೆ. ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯಕ್ಕಿಂತ ಮುಂಚೆ ಆದ ಬೆಳವಣಿಗೆ.


  2017, ಜೂನ್ 17: ಚಾಂಪಿಯನ್ಸ್ ಟ್ರೋಫಿ ಬಳಿಕ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೊಹ್ಲಿಯನ್ನ ಭೇಟಿ ಮಾಡಿ ಚರ್ಚೆ ನಡೆಸುತ್ತದೆ.


  2017, ಜೂನ್ 20: ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತದೆ. ಆದರೆ, ಕೋಚ್ ಕುಂಬ್ಳೆ ಅವರು ಲಂಡನ್​ನಲ್ಲೇ ಉಳಿದುಕೊಳ್ಳುತ್ತಾರೆ. ಐಸಿಸಿಯ ಕ್ರಿಕೆಟ್ ಕಮಿಟಿಯ ಮುಖ್ಯಸ್ಥರಾಗಿದ್ದರಿಂದ ಲಂಡನ್​ನಲ್ಲಿ ನಡೆಯಲಿರುವ ಸಭೆ ನಡೆಸಲು ಕುಂಬ್ಳೆ ಲಂಡನ್​ನಲ್ಲಿ ಉಳಿದುಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.


  2017, ಜೂನ್ 20: ಭಾರತ ತಂಡ ವಿಂಡೀಸ್ ಪ್ರವಾಸಕ್ಕೆ ತೆರಳಿದ ದಿನವೇ ಅನಿಲ್ ಕುಂಬ್ಳೆ ಅವರು ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ. ತಾನು ಕೆಳಗಿಳಿಯುವುದು ಭಾರತೀಯ ಕ್ರಿಕೆಟ್​ನ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು ಎಂದು ಕುಂಬ್ಳೆ ಕಾರಣ ಕೊಡುತ್ತಾರೆ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು