HOME » NEWS » Sports » CRICKET ANGRY WITH UMPIRES DECISION ROHIT SHARMA HITS STUMPS WITH BAT

ಔಟಾದ ಕೋಪಕ್ಕೆ ರೋಹಿತ್ ಮಾಡಿದ್ರು ಎಡವಟ್ಟು; ಹಿಟ್​ಮ್ಯಾನ್​ಗೆ ಬಿತ್ತು ಭಾರೀ ದಂಡ

news18
Updated:April 29, 2019, 10:05 PM IST
ಔಟಾದ ಕೋಪಕ್ಕೆ ರೋಹಿತ್ ಮಾಡಿದ್ರು ಎಡವಟ್ಟು; ಹಿಟ್​ಮ್ಯಾನ್​ಗೆ ಬಿತ್ತು ಭಾರೀ ದಂಡ
ರೋಹಿತ್​ ಶರ್ಮಾ
  • News18
  • Last Updated: April 29, 2019, 10:05 PM IST
  • Share this:
ಕೋಲ್ಕತ್ತಾ(ಏ.29): ಭಾನುವಾರ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಔಟಾದ ಹತಾಶೆಯಲ್ಲಿ ಬ್ಯಾಟಿನಿಂದ ಸ್ಟಂಫ್ಸ್​ಗೆ ಬಡಿದು ಅಶಿಸ್ತು ತೋರಿಸಿದ್ದಾರೆ. ಈ ಕಾರಣಕ್ಕೆ ರೋಹಿತ್​​ಗೆ ಶೇ. 15ರಷ್ಟು ದಂಡ ವಿಧಿಸಲಾಗಿದೆ.

ಸತತ ಮೂರು ಬೌಂಡರಿ ಬಾರಿಸಿದ ರೋಹಿತ್​​ ಬಳಿಕ ಹ್ಯಾರಿ ಗುರ್ನೆ ಅವರ ​ಬೌಲಿಂಗ್​ಗೆ ಎಲ್​​ಬಿಡಬ್ಲ್ಯು ಬಲೆಗೆ ಬಿದ್ದರು. ಫೀಲ್ಡ್​ ಅಂಪೈರ್​ ಔಟ್​ ಎಂದು ತೀರ್ಪು ನೀಡಿದರು. ಆದರೆ ಚೆಂಡು ಬ್ಯಾಟಿಗೆ ತಾಗದಿದ್ದರು ಅಂಪೈರ್​ ನೀಡಿದ ತೀರ್ಮಾನಕ್ಕಾಗಿ ಪೆವಿಲಿಯನತ್ತ ಸಿಟ್ಟಿನಿಂದ ಸಾಗಿದರು. ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಬೇಕೆಂಬ ಹಂಬಲದಲ್ಲಿದ್ದ ಹಿಟ್​ಮ್ಯಾನ್​ ರೋಹಿತ್​ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಪೆವಿಲಿಯನತ್ತ ಸಾಗುವಾಗ ವೇಳೆ ನಾನ್​ಸ್ಟ್ರೈಕರ್​​ ತುದಿಯಲ್ಲಿದ್ದ ವಿಕೆಟ್​ಗೆ ಬ್ಯಾಟಿನಿಂದ ಬಡಿದು ಹತಾಶೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏರ್​ಟೆಲ್​ ಆಫರ್​: 48 ರೂ. ರೀಚಾರ್ಜ್​ ಮಾಡಿ ದಿನಕ್ಕೆ 3GB ಇಂಟರ್​ನೆಟ್​ ಸೇವೆ ಪಡೆಯಿರಿ

ಐಪಿಎಲ್​ ನಿಯಮವನ್ನು ರೋಹಿತ್​ ಶರ್ಮಾ ಗಾಳಿಗೆ ತೂರಿದ ಹಿನ್ನಲೆಯಲ್ಲಿ ಅವರ ಮೇಲೆ ಮ್ಯಾಚ್​ ರೆಫ್ರಿ ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ ಅಂಪೈರ್​ ನೀಡಿದ ತೀರ್ಪಿಗಾಗಿ ಬೇಸತ್ತ ರೋಹಿತ್​ ಅಂಪೈರ್​ ಜತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.


First published: April 29, 2019, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories