Andre Russell: ವಿಶ್ವಕಪ್​​ನಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಆಟಗಾರ; ವೆಸ್ಟ್​ ಇಂಡೀಸ್​ಗೆ ಭಾರೀ ಹೊಡೆತ

Andre Russell: ರಸೆಲ್​ಗೆ ಮೊಣಕಾಲು ನೋವಿದ್ದರು ಕಳೆದ ಕೆಲ ಪಂದ್ಯಗಳಿಂದ ಆಡುತ್ತಲೇ ಇದ್ದಾರೆ. ಪಂದ್ಯದ ಮಧ್ಯೆ ಕೆಲ ಓವರ್ ಬೌಲಿಂಗ್ ಮಾಡಿ ಬಳಿಕ ನೋವು ತಾಳಲಾರದೆ ಮೈದಾನದಿಂದ ಹೊರ ನಡೆದ ಪ್ರಸಂಗವೂ ನಡೆದಿತ್ತು.

Vinay Bhat | news18
Updated:June 25, 2019, 3:46 PM IST
Andre Russell: ವಿಶ್ವಕಪ್​​ನಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಆಟಗಾರ; ವೆಸ್ಟ್​ ಇಂಡೀಸ್​ಗೆ ಭಾರೀ ಹೊಡೆತ
ಆ್ಯಂಡ್ರೋ ರಸೆಲ್
  • News18
  • Last Updated: June 25, 2019, 3:46 PM IST
  • Share this:

ಬೆಂಗಳೂರು (ಜೂ. 24): ಈ ಬಾರಿಯ ವಿಶ್ವಕಪ್​ನಲ್ಲಿ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರ ನಡೆಯುತ್ತಿರುವ ಸಂಖ್ಯೆ ಏರುತ್ತಲೆ ಇದೆ. ಇದಕ್ಕೆ ಹೊಸ ಸೇರ್ಪಡೆ ವೆಸ್ಟ್​ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಆಟಗಾರ ಆ್ಯಂಡ್ರೋ ರಸೆಲ್.


ರಸೆಲ್ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ವಿಶ್ವಕಪ್​ನಿಂದಲೇ ಹೊರಗುಳಿಯ ಬೇಕಾಗಿ ಬಂದಿದೆ. ಇವರು ಬದಲು ಮತ್ತೊಬ್ಬ ಆಟಗಾರ ಸುನೀಲ್ ಅಂಬ್ರಿಸ್​ರನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.


 


ಪ್ರಮುಖ ಹಂತದಲ್ಲೇ ರಸೆಲ್ ತಂಡ ಬಿಟ್ಟಿರುವುದು ವೆಸ್ಟ್​ ಇಂಡೀಸ್​ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅಲ್ಲದೆ ರಸೆಲ್​ಗೆ ಮೊಣಕಾಲು ನೋವಿದ್ದರು ಕಳೆದ ಕೆಲ ಪಂದ್ಯಗಳಿಂದ ಆಡುತ್ತಲೇ ಇದ್ದಾರೆ. ಪಂದ್ಯದ ಮಧ್ಯೆ ಕೆಲ ಓವರ್ ಬೌಲಿಂಗ್ ಮಾಡಿ ಬಳಿಕ ನೋವು ತಾಳಲಾರದೆ ಮೈದಾನದಿಂದ ಹೊರ ನಡೆದ ಪ್ರಸಂಗವೂ ನಡೆದಿತ್ತು.


ರಸೆಲ್ ಬದಲು ಸ್ಥಾನ ಪಡೆದುಕೊಂಡಿರುವ 26 ವರ್ಷ ಪ್ರಾಯದ ಅಂಬ್ರಿಸ್ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ.


ವೆಸ್ಟ್​ ಇಂಡೀಸ್ ಸದ್ಯ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. 4 ಪಂದ್ಯಗಳಲ್ಲಿ ಸೋಲುಂಡಿದ್ದು, ಒಂದು ರದ್ದಾಗಿದೆ. ಹೀಗಾಗಿ 3 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ.

ಈಗಾಗಲೇ ವಿಶ್ವಕಪ್​ನಲ್ಲಾದ ಇಂಜುರಿಯಿಂದಾಗಿ ಶಿಖರ್ ಧವನ್, ಡೇಲ್ ಸ್ಟೇನ್ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರು ಟೂರ್ನಿಂದ ಹೊರಗುಳಿದಿದ್ದಾರೆ.
First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ