IPL 2021 ಫೈನಲ್‌ನಲ್ಲಿ CSK ವಿರುದ್ಧ ಆ್ಯಂಡ್ರೆ ರಸೆಲ್ ಅವರ ಸೇರ್ಪಡೆ ಕುರಿತು ಸುಳಿವು ನೀಡಿದ ಡೇವಿಡ್ ಹಸ್ಸಿ

Andre Russell: ಆಲ್‌ರೌಂಡರ್ ರಸೆಲ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು ಕೆಲವು ಪಂದ್ಯಗಳಲ್ಲಿ ಆಟವಾಡಲು ಸಾಧ್ಯವಾಗಿರಲಿಲ್ಲ. ಸಿಎಸ್‌ಕೆ (ಚೆನ್ನೈ ಸೂಪರ್ ಕಿಂಗ್ಸ್) ವಿರುದ್ಧದ ಫೈನಲ್ ಪಂದ್ಯದಲ್ಲಿ ಮರಳಬಹುದು ಎಂಬುವ ಆಶಾಭಾವನೆ ಇದೆ ಹಾಗಾಗಿ ಅವರು ತಂಡವನ್ನು ಸೇರಿಕೊಳ್ಳಬಹುದು ಎಂದು ಹಸ್ಸಿ ತಿಳಿಸಿದ್ದಾರೆ.

ಆ್ಯಂಡ್ರೆ ರಸೆಲ್- ಡೇವಿಡ್ ಹಸ್ಸಿ

ಆ್ಯಂಡ್ರೆ ರಸೆಲ್- ಡೇವಿಡ್ ಹಸ್ಸಿ

 • Share this:
  IPL 2021 Csk vs Kkr: ಆ್ಯಂಡ್ರೆ ರಸೆಲ್ (Andre Russell) ತನ್ನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)‌ ವಿರುದ್ಧದ ಐಪಿಎಲ್ (IPL) ಫೈನಲ್ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಬಹುದು ಕೋಲ್ಕತ್ತಾ ನೈಟ್ ರೈಡರ್ಸ್‌ನ(Kolkata Knight Riders)  ಮುಖ್ಯ ಮಾರ್ಗದರ್ಶಕ ಡೇವಿಡ್ ಹಸ್ಸಿ (David Hussey) ತಿಳಿಸಿದ್ದಾರೆ. ಆಲ್‌ರೌಂಡರ್ ರಸೆಲ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು ಕೆಲವು ಪಂದ್ಯಗಳಲ್ಲಿ ಆಟವಾಡಲು ಸಾಧ್ಯವಾಗಿರಲಿಲ್ಲ. ಸಿಎಸ್‌ಕೆ (ಚೆನ್ನೈ ಸೂಪರ್ ಕಿಂಗ್ಸ್) ವಿರುದ್ಧದ ಫೈನಲ್ ಪಂದ್ಯದಲ್ಲಿ ಮರಳಬಹುದು ಎಂಬುವ ಆಶಾಭಾವನೆ ಇದೆ ಹಾಗಾಗಿ ಅವರು ತಂಡವನ್ನು ಸೇರಿಕೊಳ್ಳಬಹುದು ಎಂದು ಹಸ್ಸಿ ತಿಳಿಸಿದ್ದಾರೆ.

  ಡೆಲ್ಲಿ ತಂಡದ (Delhi Capitals) ವಿರುದ್ಧ ಗೆಲುವು ಸಾಧಿಸಲು 136 ರನ್‌ಗಳ ಬೆನ್ನಟ್ಟಿದ ನೈಟ್ ರೈಡರ್ಸ್ 3.5 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 7 ರನ್ ಪೇರಿಸಿತು ಆದರೆ ಅಂತಿಮ ಓವರ್‌ನ ಎಸೆತದಲ್ಲಿ ರಾಹುಲ್ ತ್ರಿಪಾಠಿಯವರ ಅಮೋಘ ಸಿಕ್ಸರ್ ಪ್ರದರ್ಶನದಿಂದ ತಂಡವು ಮೇಲೆದ್ದು ಬಂದಿತು. ಸೋಲುವುದರ ಕುರಿತು ಚಿಂತಿಸದೆಯೇ ಫೈನಲ್‌ನಲ್ಲಿ ಚೆನ್ನಾಗಿ ಹೊರಹೊಮ್ಮುವಂತೆ ಹಸ್ಸಿ ತನ್ನ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರರು ಶ್ರೇಷ್ಠವಾಗಿ ಆಡುವವರು. ಅವರಿಗೆ ಹೇಗೆ ಆಡಬೇಕು ಎಂಬುದು ತಿಳಿದಿದೆ. ಚಿತ್ರಣಗಳು ಕಷ್ಟಕರವಾಗಿ ತೋರಿದರೂ ಅವರು ಆಡುತ್ತಿದ್ದಾರೆ. ಹಾಗಾಗಿ ನನಗೆ ಚಿಂತೆ ಇಲ್ಲವೆಂದು ಹಸ್ಸಿ ತಿಳಿಸಿದ್ದಾರೆ. 110-120 ಸ್ಟ್ರೈಕ್ ರೇಟ್‌ನಿಂದ ಅವರು ಎಡವಬಹುದಿತ್ತು ಹಾಗಾಗಿ ಚಿಂತಿಸುತ್ತಿಲ್ಲ. ನಾವು ದುಬೈಗೆ ಆತ್ಮವಿಶ್ವಾಸದಿಂದ ಪ್ರಯಾಣಿಸುತ್ತಿದ್ದೇವೆ ಏನಾಗಲಿದೆ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲವೆಂದು ಹಸ್ಸಿ ತಿಳಿಸಿದ್ದಾರೆ.

  ವೆಂಕಟೇಶ್ ಅಯ್ಯರ್ ಅವರ ಅತ್ಯದ್ಭುತ ಹಾಫ್ ಸೆಂಚುರಿ ಹಾಗೂ ಶುಭಮನ್ ಗಿಲ್ ಅವರ 46 ರನ್ ಕೆಕೆಆರ್‌ಗೆ ಅಡಿಪಾಯ ಹಾಕಿಕೊಟ್ಟಿತು. ಫೈನಲ್‌ಗೆ ಏರುವ ಆಶಾವಾದವನ್ನು ಹಸ್ಸಿ ತೋರಿದ್ದರು. ಕೆಕೆಆರ್ ನಾಯಕ ಮೋರ್ಗನ್‌ಗೆ ಸಂಪೂರ್ಣ ಶ್ರೇಯ ಸಲ್ಲುತ್ತದೆ. ಮುಂದಿನ ಪಂದ್ಯದಲ್ಲಿ ಮೋರ್ಗನ್, ದಿನೇಶ್ ಕಾರ್ತಿಕ್ ಮತ್ತು ಶಕೀಬ್ (ಅಲ್ ಹಸನ್) ಮೇಲೆ ಸಂಪೂರ್ಣ ವಿಶ್ವಾಸವಿದೆ. ತಮ್ಮ ದೇಶಕ್ಕಾಗಿ ಹಾಗೂ ಐಪಿಎಲ್‌ನಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಅವರು ನೆರವೇರಿಸಿದ್ದಾರೆ. ಹಾಗಾಗಿ ನಾವು ಮುಂದಿನ ಪಂದ್ಯದತ್ತ ಚಿತ್ತ ನೆಟ್ಟಿದ್ದೇವೆ ಎಂದು ಮುಖ್ಯ ಮಾರ್ಗದರ್ಶಕರು ತಿಳಿಸಿದ್ದಾರೆ. ಆಲ್ ರೌಂಡರ್ ಶಕೀಬ್ ಫೈನಲ್ ನಲ್ಲಿ ಆಯ್ಕೆಗೆ ಲಭ್ಯವಿರುವುದಾಗಿಯೂ ಹಸ್ಸಿ ಮಾಹಿತಿ ನೀಡಿದರು.

  Read AlsoIPL Qualifier 2021| KKR ವಿರುದ್ಧ DC ರೋಚಕ ಸೋಲು; ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರಿಷಬ್ ಪಂತ್, ಪೃಥ್ವಿ ಶಾ!

  ಶಕೀಬ್ ಒಬ್ಬ ಉತ್ತಮ ಆಟಗಾರ ನಮಗೆ ಎರಡು ಪಂದ್ಯಗಳನ್ನು ಜಯಿಸಿಕೊಟ್ಟಿದ್ದಾರೆ ಹಾಗಾಗಿ ಅವರು ಸಮರ್ಥರಾಗಿ ಆಡಬಲ್ಲರು ಎಂಬ ಆಶಯ ನನಗಿದೆ. ಅದೂ ಅಲ್ಲದೆ ಪ್ರತಿಯೊಬ್ಬರೂ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಮುಖ್ಯ ತರಬೇತುದಾರರಿಂದ (ಬ್ರಾಂಡನ್ ಮೆಕಲಮ್) ಮುಖ್ಯ ಕರೆಯಾಗಿದೆ ಎಂದು ಹಸ್ಸಿ ಹೇಳಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶದ ಪರವಾಗಿ ಆಡುವ ಅಯ್ಯರ್ ಮತ್ತು ಗಿಲ್ ಜೊತೆಗಿನ ಪಾಲುದಾರಿಕೆಯನ್ನು ಹಸ್ಸಿ ಈ ಸಂದರ್ಭದಲ್ಲಿ ಹೊಗಳಿದರು.

  Read Also: R Ashwin- ಆರ್ ಅಶ್ವಿನ್ ಯಾವುದೇ ತಂಡಕ್ಕೂ ಅಗತ್ಯ ಇಲ್ಲದ ಟಿ20 ಬೌಲರ್: ಸಂಜಯ್ ಮಂಜ್ರೇಕರ್

  ವೆಂಕಟೇಶ್ ಅಯ್ಯರ್‌ನಲ್ಲಿ ಒಬ್ಬ ಅತ್ಯುತ್ತಮ ಆಟಗಾರನನ್ನು ನಾವು ಕಂಡುಕೊಂಡಿದ್ದೇವೆ. ಅವರು ಒಬ್ಬ ಶ್ರೇಷ್ಠ ಆಟಗಾರ ಹಾಗೂ ತಂಡಕ್ಕೆ ಅದ್ಭುತ ಶಕ್ತಿ ಎಂದೆನ್ನಿಸಿದ್ದಾರೆ. ಅವರು ಪ್ರದರ್ಶಿಸಿದ ಸಿಕ್ಸ್‌ಗಳಂತಹ ಹಿಟ್‌ಗಳು ನಿಜವಾಗಿ ಆಟದ ವೈಖರಿಯನ್ನು ಬದಲಾಯಿಸಲಿದೆ ಹಾಗೂ ನಮ್ಮನ್ನು ಗೆಲ್ಲುವ ಸ್ಥಾನಕ್ಕೆ ಕರೆತರುವ ವಿಶ್ವಾಸವಿದೆ ಎಂದು ಹಸ್ಸಿ ತಿಳಿಸಿದ್ದಾರೆ.
  First published: