ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನ 28ನೇ ಪಂದ್ಯವು ರೋಚಕ ದೃಶ್ಯಕ್ಕೆ ಸಾಕ್ಷಿಯಾಯಿತು. ಭಾರೀ ಕುತೂಹಲ ಮೂಡಿಸಿದ್ದ ಬಾರ್ಬಡೋಸ್ ಟ್ರೈಡೆಂಟ್ಸ್ ಮತ್ತು ಜಮೈಕಾ ತಲೈವಾಸ್ ನಡುವಣ ಪಂದ್ಯದಲ್ಲಿ ಆಂಡ್ರೆ ರಸೆಲ್ ಹಾಗೂ ರಶೀದ್ ಖಾನ್ ಎಲ್ಲರ ಗಮನ ಸೆಳೆದರು. ಪಂದ್ಯದ ವೇಳೆ 17ನೇ ಓವರ್‌ನಲ್ಲಿ ರಶೀದ್ ಖಾನ್ ಎಸೆದ ಗೂಗ್ಲಿ ಎಸೆತಕ್ಕೆ ರಸೆಲ್ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ ಚೆಂಡು ರಸೆಲ್ರನ್ನು ವಂಚಿಸಿ ಸ್ಟಂಪ್ಗೆ ತಾಗಿ ಹಾದು ಹೋಯಿತು. ಅತ್ತ ವಿಕೆಟ್ಗೆ ತಾಗಿದರೂ ಬೇಲ್ಸ್ ಬೀಳದ ಕಾರಣ ರಸೆಲ್ ಬಚಾವಾದರು.
ಆದರೆ ಇತ್ತ ರಸೆಲ್ ವಿಕೆಟ್ ಸಿಕ್ತು ಎನ್ನುವಷ್ಟರಲ್ಲಿ ಬೇಲ್ಸ್ ಬೀಳದೆ ರಶೀದ್ ಖಾನ್ ನಿರಾಶರಾದರು. ಇದನ್ನು ನೋಡಿದ ರಸೆಲ್ ಅಫ್ಘಾನ್ ಸ್ಪಿನ್ನರ್ರನ್ನು ಅವರ ವಿಕೆಟ್ ಕಿತ್ತಾಗ ಸಂಭ್ರಮಿಸುವ ಸೆಲೆಬ್ರೇಷನ್ ಮೂಲಕ ಅಣಕಿಸಿದರು.
ಇದೇ ವೇಳೆ ರಶೀದ್ ಖಾನ್ ಕೂಡ ತನ್ನ ಆತ್ಮೀಯ ರಸೆಲ್ರನ್ನು ಒದೆಯುವ ಪ್ರಯತ್ನ ಮಾಡಿದ್ದರು. ಮರುಕ್ಷಣವೇ ಇಬ್ಬರೂ ಚಿಯರ್ ಅಪ್ ಮಾಡಿ ಗಮನ ಸೆಳೆದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
THE LIGHTS ARE ON.... Dre Russ has a lucky escape. #CPL20 #JTvBT #CricketPlayedLouder pic.twitter.com/EcQ1TM8eog
— CPL T20 (@CPL) September 5, 2020
ಇದನ್ನೂ ಓದಿ: IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್ಮನ್ನ ಹೆಸರಿಸಿದ ಡೇವಿಡ್ ಹಸ್ಸಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ