ಭಾನುವಾರ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ಮೇಲೆ ಸವಾರಿ ಮಾಡುವ ಮೂಲಕ 12ನೇ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಕೆಕೆಆರ್ ತಂಡದ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕೊನೆಯಲ್ಲಿ ಅಬ್ಬರಿಸುವ ಮೂಲಕ ಕೊಲ್ಕತ್ತಾ ಪಾಲಿಗೆ ವಿಜಯದ ಸರಮಾಲೆ ಹಾಕಿದರು.
182 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಕೊಲ್ಕತ್ತಾ ವಿರುದ್ಧ ಒಂದು ಹಂತದಲ್ಲಿ ಹೈದರಾಬಾದ್ ಬೌಲರ್ಗಳು ಮೇಲುಗೈ ಸಾಧಿಸಿದ್ದರು. ಆದರೆ ಕೊನೆಯ ಓವರ್ಗಳಲ್ಲಿ ಹೊಡಿ ಬಡಿ ಆಟದ ಮೂಲಕ ವಿಂಡೀಸ್ ಆಟಗಾರ ರಸೆಲ್ ಸಿಡಿಯುವ ಮೂಲಕ ಪಂದ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಕೇವಲ 19 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸುವ ಮೂಲಕ ರಸೆಲ್ ಕೆಕೆಆರ್ಗೆ ಗೆಲುವು ತಂದುಕೊಟ್ಟರು. ಅಷ್ಟೇ ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ರಸೆಲ್, ಬಳಿಕ ನೇರವಾಗಿ ತೆರಳಿದ್ದು ಕ್ರೀಡಾಂಗಣಕ್ಕೆ ಬಂದಿದ್ದ ವಿಶೇಷ ಅಭಿಮಾನಿಯತ್ತ. ಸೆರ್ಬ್ರಲ್ ಪಾಲ್ಸಿ ಎಂಬ ತೊಂದರೆಯಿಂದ ಬಳಲುತ್ತಿರು ಹರ್ಷಲ್ ಗೋಯೆಂಕಾರನ್ನು ಭೇಟಿಯಾದ ಕೆರಿಬಿಯನ್ ಆಟಗಾರ ತಮ್ಮ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಿದರು. ಹರ್ಷಲ್ ಕೆಕೆಆರ್ ತಂಡ ಕಟ್ಟಾಭಿಮಾನಿಯಾಗಿದ್ದು, ತವರಿನಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ ತಪ್ಪದೇ ಆಗಮಿಸುತ್ತಾರೆ. ಇಂತಹ ವಿಶೇಷ ಅಭಿಮಾನಿಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಆ್ಯಂಡ್ರೆ ರಸೆಲ್, ಹರ್ಷಲ್ ಅವರಿಗೆ ಒಂದು ಸಿಹಿ ಅಪ್ಪುಗೆ ನೀಡಿ ಸಂತಸ ವ್ಯಕ್ತಪಡಿಸಿದರು. ಈ ವಿಡಿಯೋವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಫೀಶಿಯಲ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆ್ಯಂಡ್ರೆ ರಸೆಲ್ ನಡೆಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
.@Russell12A with our special Knight Rider @harshulgoenka1! 💜#KKRvSRH #VivoIPL #KKRHaiTaiyaar pic.twitter.com/Memf0PtATi
— KolkataKnightRiders (@KKRiders) March 24, 2019
King Khan @iamsrk with our special Knight Rider, @harshulgoenka1 after an amazing win at Eden Gardens! 🤩#KKRvSRH #KKRHaiTaiyaar 💜 pic.twitter.com/FSlqCXJJ0u
— KolkataKnightRiders (@KKRiders) March 24, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ