ಬೆಂಗಳೂರು (ಜ. 24): ಕಾಂಗರೂಗಳ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ತವರಿಗೆ ಮರಳಿರುವ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬರುತ್ತಿದೆ. ಆಟಗಾರರನ್ನು ಮೆರವಣಿಗೆ ಮಾಡಿ ಆರತಿ ಎತ್ತಿ ಬರಮಾಡಿಕೊಂಡಿದ್ದಾರೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಅನಾನುಭವಿ ಪ್ಲೇಯರ್ಸ್ ಚೊಚ್ಚಲ ಬಾರಿಗೆ ಟೆಸ್ಟ್ ಪಂದ್ಯ ಆಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈಗ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸಿದ್ದ ಟೀಂ ಇಂಡಿಯಾದ ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ.
ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನೆರವಾಗಿದ್ದ ಯುವ ಆಟಗಾರರಾದ ಮೊಹಮ್ಮದ್ ಸಿರಾಜ್, ಟಿ ನಟರಾಜನ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ಹಾಗೂ ನವದೀಪ್ ಸೈನಿ ಅವರಿಗೆ ಥಾರ್-ಎಸ್ಯುವಿ ಕೊಡುಗೆ ನೀಡಲಾಗುವುದೆಂದು ಆನಂದ ಮಹೀಂದ್ರಾ ಶನಿವಾರ ಘೋಷಿಸಿದ್ದಾರೆ.
IPL 2021: ಈ ಬಾರಿ ಡಿವಿಲಿಯರ್ಸ್ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!
ಆನಂದ್ ಮಹೇಂದ್ರಾ ಕ್ರೀಡಾಪಟುಗಳಿಗೆ ಉಡುಗೊರೆ ನೀಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2017ರಲ್ಲಿ ಸೂಪರ್ ಸೀರಿಸ್ ಗೆದ್ದಿದ್ದ ಕಿಡಂಬಿ ಶ್ರೀಕಾಂತ್ಗೂ ಇದೇ ಮಾದರಿಯ ಕಾರು ಉಡುಗೊರೆ ನೀಡಿದ್ದಾರೆ.
ಟೀಂ ಇಂಡಿಯಾದ ಈ ಯುವ ಆಟಗಾರರು ಭಾರತದ ಭವಿಷ್ಯದ ಪೀಳಿಗೆಯ ಯುವಕರಿಗೆ ಅಸಾಧ್ಯವಾದನ್ನು ಅನ್ವೇಷಿಸಲು ಹಾಗೂ ಕನಸು ಕಾಣುವಂತೆ ಪ್ರೇರಣೆ ನೀಡಿದ್ದಾರೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಈ ಉಡುಗೊರೆಗೆ ಕಾರಣವೆಂದರೆ ಯುವಕರು ತಮ್ಮ ಮೇಲೆ ಅಪಾರ ಭರವಸೆ ಇರಿಸಿಕೊಂಡು, ಕಡಿಮೆ ಪ್ರಯಾಣದ ಹಾದಿ ಹಿಡಿದು ಸಾಧಿಸಿದ್ದಾರೆ. ಅದನ್ನು ಪ್ರಚೋದಿಸುವುದಕ್ಕೆ. ಮೊಹಮ್ಮದ್, ಶಾರ್ದುಲ್, ಶುಭಮನ್, ನಟರಾಜನ್, ನವದೀಪ್ ಮತ್ತು ವಾಷಿಂಗ್ಟನ್ ಅವರಿಗೆ ಮಹೀಂದ್ರಾ ಥಾರ್ ಅನ್ನು ಆದ್ಯತೆಯ ಮೇಲೆ ಪಡೆಯುವಂತೆ ನಾನು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
India vs England: ಭಾರತ-ಇಂಗ್ಲೆಂಡ್ ಸರಣಿಗೆ ಕಾದು ಕುಳಿತಿರುವ ಅಭಿಮಾನಿಗಳಿಗೆ ದೊಡ್ಡ ಶಾಕ್
ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್ ದಿ ಗಬ್ಬಾ ಅಂಗಳದಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ನಿರ್ಣಾಯಕ ಪ್ರದರ್ಶನ ತೋರಿದ್ದರು. 2018ರ ಬಳಿಕ ಮೊದಲನೇ ಟೆಸ್ಟ್ ಆಡಿದ ಶಾರ್ದುಲ್ ಠಾಕೂರ್ ವೃತ್ತಿ ಬದುಕಿನ ಚೊಚ್ಚಲ ಅರ್ಧಶತಕ ಸಿಡಿಸಿದ್ದಲ್ಲದೆ ಬೌಲಿಂಗ್ನಲ್ಲೂ ಮಿಂಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಚೊಚ್ಚಲ ಪಂದ್ಯವಾಡಿದ ಮೊಹಮ್ಮದ್ ಸಿರಾಜ್, ನಿರ್ಣಾಯಕ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಕಬಳಿಸಿ, 3 ಪಂದ್ಯಗಳಲ್ಲಿ 13 ವಿಕೆಟ್ ಕಿತ್ತು ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ