• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs AUS: ಭಾರತ-ಆಸ್ಟ್ರೇಲಿಯಾ ಮೊದಲ ಪಂದ್ಯ, ನಿರೀಕ್ಷೆ ಹೆಚ್ಚಿಸುತ್ತಿವೆ ಅಂಕಿಅಂಶಗಳು

IND vs AUS: ಭಾರತ-ಆಸ್ಟ್ರೇಲಿಯಾ ಮೊದಲ ಪಂದ್ಯ, ನಿರೀಕ್ಷೆ ಹೆಚ್ಚಿಸುತ್ತಿವೆ ಅಂಕಿಅಂಶಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕ್ರಿಕೆಟ್ ಇತಿಹಾಸದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಮುಖಿಯು ಹೆಚ್ಚು ಚರ್ಚಿತ ಹಾಗೂ ಕುತೂಹಲಕಾರಿಯಾದ ಹಣಾಹಣಿ ಎಂದೇ ಖ್ಯಾತಿ ಪಡೆದುಕೊಂಡಿದೆ. ಅದರಲ್ಲೂ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳು ಸ್ಥಗಿತಗೊಂಡ ನಂತರ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಿಗೆ ಈ ಎರಡೂ ತಂಡಗಳ ಆಟವೇ ನಿರೀಕ್ಷಿತ ಪೈಪೋಟಿ ಎಂದೆನಿಸಿದೆ.

ಮುಂದೆ ಓದಿ ...
  • Share this:

ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ದಾಖಲೆಯನ್ನು ಗಮನಿಸಿದಾಗ 23 ಪಂದ್ಯಗಳಲ್ಲಿ 13 ಗೆಲುವುಗಳನ್ನು ಭಾರತ ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ. ಕ್ರಿಕೆಟ್ ಇತಿಹಾಸದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಮುಖಿಯು ಹೆಚ್ಚು ಚರ್ಚಿತ ಹಾಗೂ ಕುತೂಹಲಕಾರಿಯಾದ ಹಣಾಹಣಿ ಎಂದೇ ಖ್ಯಾತಿ ಪಡೆದುಕೊಂಡಿದೆ. ಅದರಲ್ಲೂ ಭಾರತ-ಪಾಕಿಸ್ತಾನ (India- Pakistan) ದ್ವಿಪಕ್ಷೀಯ ಕ್ರಿಕೆಟ್ (Cricket) ಸಂಬಂಧಗಳು ಸ್ಥಗಿತಗೊಂಡ ನಂತರ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಿಗೆ ಈ ಎರಡೂ ತಂಡಗಳ ಆಟವೇ ನಿರೀಕ್ಷಿತ ಪೈಪೋಟಿ ಎಂದೆನಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ T20I ಮೂರು ಪಂದ್ಯಗಳ (Match) ಸರಣಿಗೆ ಮುನ್ನ ಕೆಲವೊಂದು ಆಸಕ್ತಿಕರ ಅಂಕಿ ಅಂಶಗಳನ್ನು ಗಮನಿಸೋಣ


ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಕೆಲವೊಂದು ಆಸಕ್ತಿಕರ ಅಂಕಿ ಅಂಶಗಳು 


1) ಎರಡೂ ತಂಡಗಳು ಆಡಿರುವ ಕೊನೆಯ ಆರು ಪಂದ್ಯಗಳಲ್ಲಿ ತಲಾ ಮೂರು ಪಂದ್ಯಗಳನ್ನು ಭಾರತ ಹಾಗೂ ಆಸ್ಟ್ರೇಲಿಯಾ ಗೆದ್ದುಕೊಂಡಿದೆ.


2) ಡಿಸೆಂಬರ್ 8, 2020 ರಲ್ಲಿ ಸಿಡ್ನಿಯಲ್ಲಿ ನಡೆದ ಕೊನೆಯ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದು, 61 ಬಾಲ್‌ಗಳಲ್ಲಿ ನಾಲ್ಕು ಫೋರ್ ಹಾಗೂ ಮೂರು ಸಿಕ್ಸ್‌ಗಳನ್ನೊಳಗೊಂಡಂತೆ 85 ರನ್‌ಗಳನ್ನು ಬಾರಿಸಿದ್ದರು. ಅದಾಗ್ಯೂ ಈ ಪಂದ್ಯದಲ್ಲಿ ಭಾರತ 12 ರನ್‌ಗಳೊಂದಿಗೆ ಸೋಲುವ ಮೂಲಕ ವಿರಾಟ್ ಪರಿಶ್ರಮ ನಿಷ್ಫಲವಾಯಿತು.


ಇದನ್ನೂ ಓದಿ: Yuvraj Singh: 'ಒಂದೇ ಓವರಲ್ಲಿ 6 ಸಿಕ್ಸ್' ಯುವಿಯ ದಾಖಲೆಗೆ 15 ವರ್ಷ; ಮಗನೊಂದಿಗೆ ಮಾಜಿ ಆಲ್‌ರೌಂಡರ್ ಸಂಭ್ರಮ!


3) ಕೊಹ್ಲಿಯವರು ಪೇರಿಸಿದ 85 ರನ್ T20I ಯಲ್ಲೇ ಅವರ ಎರಡನೇ ಅತ್ಯಧಿಕ ಸ್ಕೋರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು. ಕೊಹ್ಲಿ ಈ ಹಿಂದೆ ಮಾರ್ಚ್ 31, 2016 ರಂದು ವಾಂಖಡೆ ಸ್ಟೇಡಿಯಮ್‌ನಲ್ಲಿ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ 89 ರನ್ ದಾಖಲಿಸಿದ್ದರು ಇಲ್ಲೂ ಕೂಡ ಭಾರತ 7 ವಿಕೆಟ್‌ಗಳಿಂದ ಸೋಲುಂಡಿತು.


4) ಭಾರತದ ನೆಲದಲ್ಲಿ ಆಸ್ಟ್ರೇಲಿಯಾವು ಅಕ್ಟೋಬರ್ 20, 2007 ಹಾಗೂ ಅಕ್ಟೋಬರ್ 7, 2017 ರಂದು ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಸೋಲುಂಡಿತು. ಇದೇ ತಂಡ ಅಕ್ಟೋಬರ್ 10, 2017 ಹಾಗೂ ಫೆಬ್ರವರಿ 27, 2019 ರಂದು ಮೂರು ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿತು.


5) ಫೆಬ್ರವರಿ 1, 2008 ರಲ್ಲಿ ಮೆಲ್ಬೋರ್ನ್‌ ಹಾಗೂ ಸಪ್ಟೆಂಬರ್ 28, 2012 ರಲ್ಲಿ ಕೊಲೊಂಬೊದಲ್ಲಿ ನಡೆದ ಐಸಿಸಿ ವರ್ಲ್ಡ್ ಟ್ವೆಂಟಿ20ನಲ್ಲಿ 9 ವಿಕೆಟ್‌ಗಳ ಅಂತರದಲ್ಲಿ ಎರಡು ಪಂದ್ಯಗಳ ಗೆಲುವನ್ನು ಕಿವೀಸ್ ಪಡೆ ತನ್ನದಾಗಿಸಿಕೊಂಡಿತು.


6) ಫೆಬ್ರವರಿ 1, 2008 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯಾಟದಲ್ಲಿ ಭಾರತ 74 ರನ್‌ಗೆ ಔಟಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ ಸೇರಿದಂತೆ T20 ಯಲ್ಲಿ ಎರಡೂ ತಂಡಗಳು ಕಲೆಹಾಕಿದ ಕಡಿಮೆ ಒಟ್ಟು ರನ್ ಇದಾಗಿತ್ತು.


7) T20I ಗಳಲ್ಲಿ ಯಾವುದೇ ಎದುರಾಳಿಯ ವಿರುದ್ಧ ಭಾರತ ಕಲೆಹಾಕಿದ ಒಟ್ಟು 74 ರನ್ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.


8) ಮಾರ್ಚ್ 30, 2014 ರಂದು ಮಿರ್‌ಪುರದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರು 11ಕ್ಕೆ 4 ವಿಕೆಟ್‌ಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಕಡಿಮೆ ಸ್ವರೂಪದಲ್ಲಿ ವಿಕೆಟ್ ಕಿತ್ತ ಬೌಲರ್‌ ಎಂಬ ಅತ್ಯುತ್ತಮ ಅಂಶ ಇದಾಗಿದೆ.


9) ನವೆಂಬರ್ 25, 2018 ರಂದು ಸಿಡ್ನಿಯಲ್ಲಿ ಕ್ರುನಾಲ್ ಪಾಂಡ್ಯ ಅವರ ವೃತ್ತಿಜೀವನದ ಅತ್ಯುತ್ತಮ ಅಂಶವಾದ 36 ಕ್ಕೆ 4 ವಿಕೆಟ್ ಗಳಿಸಿ ಪಂದ್ಯ ಗೆಲುವಿನ ಪ್ರದರ್ಶನವನ್ನು ನೀಡಿದರು. ಭಾರತವು ಆರು ವಿಕೆಟ್‌ಗಳಿಂದ ಪಂದ್ಯವನ್ನು ಜಯಿಸಿತು.


ಇದನ್ನೂ ಓದಿ:  Sunil Chhetri: ಫೋಟೋಗಾಗಿ ಭಾರತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿದ ರಾಜ್ಯಪಾಲ, ಇದೆಂಥಾ ದುರ್ವರ್ತನೆ ಎಂದ ನೆಟ್ಟಿಗರು


10)ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅಕ್ಟೋಬರ್ 10, 2017 ರಂದು ಗುವಾಹಟಿಯಲ್ಲಿ 21 ಕ್ಕೆ 4 ವಿಕೆಟ್‌ಗಳನ್ನು ಗಳಿಸಿ ವೃತ್ತಿಜೀವನದ ಅತ್ಯುತ್ತಮ ವಿಕೆಟ್ ಸಾಧನೆಯನ್ನು ಮಾಡಿದರು. ಭಾರತದ ವಿರುದ್ಧ ಆಸ್ಟ್ರೇಲಿಯಾದ ಬೌಲರ್‌ನ ಏಕೈಕ ನಾಲ್ಕು ವಿಕೆಟ್ ಸಾಧನೆ ಎಂದೆನಿಸಿದೆ.

First published: