ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಆಯ್ಕೆದಾರರನ್ನೇ ಟ್ರೋಲ್ ಮಾಡಿದ್ರಾ ರಾಯುಡು?

ಸದ್ಯ ವರ್ಲ್ಡ್​ಕಪ್ ತಂಡದಲ್ಲಿರುವ ಆಟಗಾರರ ಬ್ಯಾಟಿಂಗ್ ಸರಾಸರಿಯನ್ನು ಗಮನಿಸಿದರೆ ರಾಯುಡು ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ.

zahir | news18
Updated:April 17, 2019, 4:53 PM IST
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಆಯ್ಕೆದಾರರನ್ನೇ ಟ್ರೋಲ್ ಮಾಡಿದ್ರಾ ರಾಯುಡು?
@w3livenews.com
zahir | news18
Updated: April 17, 2019, 4:53 PM IST
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಟಿ ರಾಯುಡು ಟ್ವಿಟರ್‌ನಲ್ಲಿ ಆಯ್ಕೆ ಸಮಿತಿಯ ಕಾಲೆಳೆಯುವ ಪ್ರಯತ್ನ ಮಾಡಿದ್ರಾ? ಏಕೆಂದರೆ ರಾಯುಡು ಮಾಡಿರುವ ಟ್ವೀಟ್​ ಇಂತಹದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಆಂಧ್ರಪ್ರದೇಶದ ಆಟಗಾರ ರಾಯುಡುಗೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸಾಕಷ್ಟು ನಿರೀಕ್ಷೆಯಿತ್ತು. ಆದರೆ 15 ರ ಬಳಗದಲ್ಲಿ ರಾಯುಡುಗೆ ಬದಲಿಗೆ ವಿಜಯ್ ಶಂಕರ್​ ಅವರಿಗೆ ಸ್ಥಾನ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್, 'ಅಂಬಟಿ ರಾಯುಡುಗೆ ಈಗಾಗಲೇ ಹಲವು ಅವಕಾಶ ನೀಡಿದ್ದೇವೆ. ವಿಜಯ್ ಶಂಕರ್‌ ರಾಯುಡುಗಿಂತ ಸಮರ್ಥ ಆಟಗಾರ ಎನಿಸಿಕೊಂಡಿದ್ದಾರೆ. ಏಕೆಂದರೆ ವಿಜಯ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಬಲ್ಲರು. ಅದರೊಂದಿಗೆ ಉತ್ತಮ ಫೀಲ್ಡರ್ ಸಹ ಹೌದು. ಹೀಗಾಗಿ ವಿಜಯ್​ ಅವರನ್ನು 4ನೇ ಕ್ರಮಾಂಕಕ್ಕಾಗಿ ಆಯ್ಕೆ ಮಾಡಲಾಗಿದೆ.

ರಾಯುಡು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫರಾಗುತ್ತಿದ್ದು, ಸ್ವದೇಶದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಾಯುಡು ಕಳಪೆ ಪ್ರದರ್ಶನ ತೋರಿದ್ದರು. ಅನುಭವಿ ಆಟಗಾರನಾಗಿರುವ ಇವರು ಐಪಿಎಲ್‌ನಲ್ಲೂ ಅಬ್ಬರಿಸದೇ ಇರುವುದು ಮುಳುವಾಯಿತು ಎನ್ನಲಾಗಿದೆ. ಹೀಗಾಗಿ ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದ ಸ್ಥಾನಕ್ಕೆ ವಿಜಯ್​ ಶಂಕರ್​ ಅನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಆಯ್ಕೆ ಸಮಿತಿಯ ನಿರ್ಲಕ್ಷ್ಯಕ್ಕೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿ ರಾಯುಡು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ವಿಶ್ವಕಪ್ ವೀಕ್ಷಿಸಲು 3D ಕನ್ನಡಕಕ್ಕೆ ಆರ್ಡರ್ ಮಾಡಿರುವುದಾಗಿ ಎಂದು ಬರೆದುಕೊಂಡಿದ್ದಾರೆ. ಇದು ಆಯ್ಕೆ ಸಮಿತಿ ಸದಸ್ಯರನ್ನು ಟ್ರೋಲ್ ಮಾಡಲೆಂದೇ ರಾಯುಡು ಮಾಡಿರುವ ಟ್ವೀಟ್ ಎನ್ನಲಾಗುತ್ತಿದೆ.

ಏಕೆಂದರೆ 55 ಏಕದಿನ ಪಂದ್ಯಗಳಿಂದ ಬ್ಯಾಟಿಂಗ್​ನಲ್ಲಿ 47.05 ಸರಾಸರಿಯನ್ನು ಹೊಂದಿದ್ದರೂ, ಕೈ ಬಿಡಲಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಹೀಗಾಗಿ ಆಯ್ಕೆಯಾದ ಆಟಗಾರರು ಅದೇನು ಸಾಧನೆ ಮಾಡಲಿದ್ದಾರೆ ಎಂಬುದನ್ನು ಮೂರು ಭಾಗದಿಂದಲೂ ವೀಕ್ಷಿಸಲು 3D ಗ್ಲಾಸ್ ತರಿಸಿರುವುದಾಗಿ ರಾಯುಡು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ವರ್ಲ್ಡ್​ಕಪ್ ತಂಡದಲ್ಲಿರುವ ಆಟಗಾರರ ಬ್ಯಾಟಿಂಗ್ ಸರಾಸರಿಯನ್ನು ಗಮನಿಸಿದರೆ ರಾಯುಡು ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಮೊದಲ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ, ಎರಡನೇ ಸ್ಥಾನದಲ್ಲಿ ಧೋನಿ ಇದ್ದರೆ, ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ನಂತರ ಉತ್ತಮ ಸರಾಸರಿ ಅಂಬಟಿ ರಾಯುಡು ಅವರದ್ದಾಗಿದೆ ಎಂಬುದು ಐಸಿಸಿ ಮಾಡಿರುವ ಟ್ವೀಟ್​ನಿಂದ ಬಹಿರಂಗವಾಗಿದೆ.
Loading...

ಇದನ್ನೂ ಓದಿ: VIDEO: ರಾಹುಲ್ ರಾಕೆಟ್, ಪೊಲಾರ್ಡ್​ ಪಂಟರ್, ಸ್ಟೋಕ್ಸ್ ಸೂಪರ್ ಮ್ಯಾನ್: ಐಪಿಎಲ್​ನಲ್ಲಿ ನಿಮ್ಮ ನೆಚ್ಚಿನ​ ಕ್ಯಾಚ್​ ಯಾವುದು?

ಇನ್ನೊಂದೆಡೆ ವಿಶ್ವಕಪ್ ವೇಳೆ ಮನೆಯಲ್ಲೇ ಇರುವುದರಿಂದ ಅಂಬಟಿ ರಾಯುಡು 3Dಯಲ್ಲಿ ಪಂದ್ಯ ವೀಕ್ಷಿಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ​ಓಪನರ್​ ಹಾಗೂ ಮಿಡಲ್ ಆರ್ಡರ್​ನಲ್ಲೂ ಬ್ಯಾಟ್​ ಬೀಸಬಲ್ಲ ಆಟಗಾರನನ್ನು ಕೈ ಬಿಟ್ಟು, ಕೇವಲ ಆಲ್​ರೌಂಡರ್ ಎಂಬ ಕಾರಣಕ್ಕೆ ವಿಜಯ್ ಶಂಕರ್​ ಅವರನ್ನು ಆಯ್ಕೆ ಮಾಡಿರುವುದು ಸರಿಯೇ ಎಂಬುದು ಇದೀಗ ರಾಯುಡು ಅಭಿಮಾನಿಗಳ ಪ್ರಶ್ನೆ. ಒಟ್ಟಾರೆ ತಂಡದಲ್ಲಿ ಯಾರೇ ಇದ್ದರೂ 3ನೇ ಬಾರಿ ಟೀಂ ಇಂಡಿಯಾ ವಿಶ್ವಕಪ್ ಕಿರೀಟ ಅಲಂಕರಿಸಲಿ ಎಂಬುದು ಭಾರತೀಯರ ಆಶಯ.

ಇದನ್ನೂ ಓದಿ: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದರೂ ಟೀಂ ಇಂಡಿಯಾ ಜೊತೆ ತೆರಳಲಿದೆ ಈ ನಾಲ್ವರು ಯುವವೇಗಿಗಳು!

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626