• Home
 • »
 • News
 • »
 • sports
 • »
 • Ambati Rayudu: ರಾಯುಡು ಮನೆಗೆ ಕಾಲಿಟ್ಟ ಹೊಸ ಅತಿಥಿ; ತಂದೆಯಾದ ಖುಷಿಯಲ್ಲಿ ಅಂಬಟಿ

Ambati Rayudu: ರಾಯುಡು ಮನೆಗೆ ಕಾಲಿಟ್ಟ ಹೊಸ ಅತಿಥಿ; ತಂದೆಯಾದ ಖುಷಿಯಲ್ಲಿ ಅಂಬಟಿ

ಅಂಬಟಿ ರಾಯುಡು

ಅಂಬಟಿ ರಾಯುಡು

ತಂದೆಯಾದ ಸಂತಸದಲ್ಲಿರುವ ರಾಯುಡು ಅವರಿಗೆ ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ಶುಭಕೋರಿದ್ದಾರೆ.

 • Share this:

  ಟೀಂ ಇಂಡಿಯಾ ಕ್ರಿಕೆಟಿಗ ಅಂಬಟಿ ರಾಯುಡು ಮನೆಗೆ ಹೊಸ ಅತಿಥಿ ಕಾಲಿಟ್ಟಿದ್ದಾರೆ. 2009ರಲ್ಲಿ ಮದುವೆಯಾದ ರಾಯುಡು ಹಾಗೂ ಚೆನ್ನಪಲ್ಲಿ ವಿಧ್ಯಾ ದಂಪತಿಗೆ ಹೆಣ್ಣು ಮಗು ಹುಟ್ಟಿದೆ.


  ತಂದೆಯಾದ ಸಂತಸದಲ್ಲಿರುವ ರಾಯುಡು ಅವರಿಗೆ ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ಶುಭಕೋರಿದ್ದಾರೆ. ಈ ವಿಚಾರಚನ್ನು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಂಬಟಿ ರಾಯುಡು ಪ್ರತಿನಿಧಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದೆ.


  Dutee Chand: ಒಲಂಪಿಕ್ ಸಿದ್ಧತೆಗೆ ಹಣವಿಲ್ಲದೆ ಬಿಎಂಡಬ್ಲ್ಯು ಕಾರು ಮಾರಲು ಮುಂದಾದ ದ್ಯುತಿ ಚಾಂದ್  ಅಂಬಟಿ ರಾಯುಡು ಅವರು ಕಳೆದ ವರ್ಷ ಏಕದಿನ ವಿಶ್ವಕಪ್‌ ತಂಡದಿಂದ ಕೈಬಿಟ್ಟಿರುವದಕ್ಕೆ ತೀವ್ರ ನೊಂದು ಏಕಾಏಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. ಬಳಿಕ ಸ್ವಲ್ಪ ಸಮಯದ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ತಮ್ಮಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಬಾಕಿ ಉಳಿದಿರುವುದನ್ನು ಮನಗಂಡು ನಿವೃತ್ತಿ ಹಿಂಪಡೆಯುತ್ತಿದ್ದೇನೆ, ಟೀಂ ಇಂಡಿಯಾಕ್ಕೆ ಮತ್ತೆ ಕಮ್​ಬ್ಯಾಕ್ ಮಾಡುತ್ತೇನೆ ಎಂದಿದ್ದರು.  England vs West Indies: ಕೊರೋನಾ ಲಾಕ್​ಡೌನ್ ಬಳಿಕ ಕ್ರಿಕೆಟ್: ಬಲಿಷ್ಠ ಇಂಗ್ಲೆಂಡ್ ವಿರುದ್ಧ ವೆಸ್ಟ್​ ಇಂಡೀಸ್​ಗೆ ಭರ್ಜರಿ ಜಯ

  ಅಂಬಟಿ ರಾಯುಡು ಅವರಿಗೆ ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲು ಈ ಬಾರಿಯ ಐಪಿಎಲ್ ಟೂರ್ನಿ ಮಹತ್ವದ್ದಾಗಿದೆ. ಆದರೆ, ಸದ್ಯ ಮಾರಕ ಕೊರೋನಾ ವೈರಸ್​ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಐಪಿಎಲ್ ನಡೆಯುತ್ತೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ. ಇದರಿಂದ ರಾಯುಡು ಕ್ರಿಕೆಟ್ ಭವಿಷ್ಯ ಕೂಡ ಅತಂತ್ರದಲ್ಲಿದೆ.

  Published by:Vinay Bhat
  First published: