ರಾಯುಡು ಮನೆಗೆ ಹೊಸ ಅತಿಥಿಯ ಆಗಮನ: ಸಿಎಸ್​ಕೆ ಕಡೆಯಿಂದ ವಿಸಲ್ ಪೋಡು ವಿಶಸ್

Ambati Rayudu: ಟೀಮ್  ಪರವಾಗಿ 55 ಏಕದಿನ ಪಂದ್ಯ 6 ಟಿ20 ಪಂದ್ಯಗಳನ್ನಾಡಿರುವ ರಾಯುಡು ಕಳೆದ ವರ್ಷ ಜುಲೈನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

news18-kannada
Updated:July 13, 2020, 10:05 PM IST
ರಾಯುಡು ಮನೆಗೆ ಹೊಸ ಅತಿಥಿಯ ಆಗಮನ: ಸಿಎಸ್​ಕೆ ಕಡೆಯಿಂದ ವಿಸಲ್ ಪೋಡು ವಿಶಸ್
Ambati Rayudu
  • Share this:
ಟೀಮ್ ಇಂಡಿಯಾ ಮಾಜಿ ಆಟಗಾರ ಅಂಬಟಿ ರಾಯುಡು ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ರಾಯುಡು ಅವರ ಪತ್ನಿ ಚೆನ್ನುಪಲ್ಲಿ ವಿದ್ಯಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿ ವಿಚಾರವನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡ ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಡ್ಯಾಡೀಸ್‌ ಆರ್ಮಿಯಿಂದ ಆಫ್-ಫೀಲ್ಡ್ ಪಾಠಗಳನ್ನು ಬಳಸಲಾಗುವುದು. ವಿಸಿಲ್ ಪೋಡು ಎಂದು ಅಂಬಟಿ ರಾಯುಡು ಮತ್ತು ಅವರು ಮಗಳು ಹಾಗೂ ಅವರ ಪತ್ನಿಯ ಸೆಲ್ಫಿ ಫೋಟೋವನ್ನು ಸಿಎಸ್​ಕೆ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್ ಮಾಡಲಾಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ಅಲ್ಲದೆ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಕೂಡ ವಿಶಸ್ ತಿಳಿಸಿದ್ದು, ಮುದ್ದು ಮಗಳ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಿ. ನಿಮಗೆ ದೇವರು ಮತ್ತಷ್ಟು ಖುಷಿ ನೀಡಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಸಹ ಆಟಗಾರನ ಶುಭಾಶಯಕ್ಕೆ ರಾಯುಡು ಧನ್ಯವಾದ ತಿಳಿಸಿದ್ದಾರೆ.

ಟೀಮ್  ಪರವಾಗಿ 55 ಏಕದಿನ ಪಂದ್ಯ 6 ಟಿ20 ಪಂದ್ಯಗಳನ್ನಾಡಿರುವ ರಾಯುಡು ಕಳೆದ ವರ್ಷ ಜುಲೈನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇನ್ನು ಐಪಿಎಲ್ ಕ್ರಿಕೆಟ್ ಮುಂದುವರೆಸಿರುವ ರಾಯುಡು,​ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. 147 ಐಪಿಎಲ್ ಪಂದ್ಯಗಳನ್ನಾಡಿರುವ ರಾಯುಡು ಪ್ರಸ್ತುತ ಸಿಎಸ್​ಕೆ ಆಟಗಾರ.
Published by: zahir
First published: July 13, 2020, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading