Kane Williamson: ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ನಾಯಕ..!

Dhoni-Kane Williamson

Dhoni-Kane Williamson

2016ರ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಕೇನ್ ವಿಲಿಯನ್ಸ್​ ಮುಂದಾಳತ್ವದ​ ನ್ಯೂಜಿಲೆಂಡ್ ತಂಡವು ಧೋನಿ ನೇತೃತ್ವದ ಟೀಮ್ ಇಂಡಿಯಾವನ್ನು 47 ರನ್‌ಗಳಿಂದ ಸೋಲಿಸಿತು

  • Share this:

    ಬ್ರಾಂಡನ್ ಮೆಕಲಮ್ ಅವರ ಯಶಸ್ವಿ ನಾಯಕತ್ವದ ನಂತರ ತಂಡವು ಬಲಿಷ್ಠವಾಗುತ್ತ ಸಾಗುತ್ತಿದೆ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ವಿಲಿಯಮ್ಸನ್ ನಾಯಕತ್ವದಲ್ಲಿ, ನ್ಯೂಜಿಲೆಂಡ್ ತಂಡವು 2016ರ ಟಿ20 ಸೆಮಿಫೈನಲ್ ಮತ್ತು 2019 ಏಕದಿನ ವಿಶ್ವಕಪ್‌ನ ಫೈನಲ್‌ ಪ್ರವೇಶಿಸಿತ್ತು. ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕಿವೀಸ್ ಪೆ ಎರಡನೇ ಸ್ಥಾನದಲ್ಲಿದೆ. ಹಾಗೆಯೇ 2021 ರಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಆಡುವ ವಿಶ್ವಾಸದಲ್ಲಿದೆ. ಸದ್ಯ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.


    ಈ ತಂಡವನ್ನು ಮುನ್ನಡೆಸುತ್ತಿರುವುದು ಕೇನ್ ವಿಲಿಯಮ್ಸನ್. ಶಾಂತ ಸ್ವಭಾವದ ಯಶಸ್ವಿ ನಾಯಕ ಎಂದು ಗುರುತಿಸಿಕೊಳ್ಳುತ್ತಿರುವ ಕೇನ್ ಅವರನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿಮ್ಮ ನೆಚ್ಚಿನ ನಾಯಕ ಯಾರು ಎಂದು ಪ್ರಶ್ನಿಸಲಾಗಿತ್ತು. ಅತ್ತ ಕಡೆಯಿಂದ ಕೇಳಿ ಬಂದ ಉತ್ತರ ಎಂ.ಎಸ್.ಡಿ ಅಲಿಯಾಸ್ ಮಹೇಂದ್ರ ಸಿಂಗ್ ಧೋನಿ.


    ನೀವು ಆಡಿದ ಅಥವಾ ನಾಯಕತ್ವ ಕಲಿಯಲು ಇಷ್ಟಪಟ್ಟಿರುವ ಯಾವುದಾದರೂ ಕಪ್ತಾನ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಲಿಯಮ್ಸನ್, ನನಗೆ ಎಂಎಸ್ ಧೋನಿ ಅವರು ಕಾರ್ಯ ನಿರ್ವಹಿಸುವ ರೀತಿ ತುಂಬಾ ಇಷ್ಟ. ಅವರು ಯಾವಾಗಲೂ ನಾನು ಇಷ್ಟಪಡುವ ನಾಯಕ ಎಂದು ಹೇಳಿದರು. ವಿಲಿಯಮ್ಸನ್ ನ್ಯೂಜಿಲೆಂಡ್‌ನ ಪೂರ್ಣ ಪ್ರಮಾಣ ನಾಯಕನಾರಾದ ವೇಳೆ, ಮಹೇಂದ್ರ ಸಿಂಗ್ ಧೋನಿ 2014 ರಲ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತೊರೆದರು. ಬಳಿಕ ಅವರು ಸೀಮಿತ ಓವರ್‌ಗಳ ನಾಯಕತ್ವವನ್ನೂ ಬಿಟ್ಟುಕೊಟ್ಟರು.


    2016ರ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಕೇನ್ ವಿಲಿಯನ್ಸ್​ ಮುಂದಾಳತ್ವದ​ ನ್ಯೂಜಿಲೆಂಡ್ ತಂಡವು ಧೋನಿ ನೇತೃತ್ವದ ಟೀಮ್ ಇಂಡಿಯಾವನ್ನು 47 ರನ್‌ಗಳಿಂದ ಸೋಲಿಸಿತು. ಹಾಗೆಯೇ ಕೇನ್ ನಾಯಕತ್ವದಲ್ಲಿ, ನ್ಯೂಜಿಲೆಂಡ್ ದ್ವಿಪಕ್ಷೀಯ ಸರಣಿಯಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡಿತ್ತು. ಆತಿಥೇಯ ತಂಡವು 3–2ರಿಂದ ಜಯಗಳಿಸಿತು. ಈ ಸರಣಿಯು ಧೋನಿ ನಾಯಕತ್ವದಲ್ಲಿ ಆಡಿದ ಕೊನೆಯ ಸರಣಿಯಾಗಿದೆ. ಇದರ ನಂತರ ಧೋನಿ ನಾಯಕತ್ವದ ಯುಗಾಂತ್ಯವಾಗಿತ್ತು.


    ಟೀಮ್ ಇಂಡಿಯಾ ಮಾಜಿ ಮಹೇಂದ್ರ ಸಿಂಗ್ ಧೋನಿ ಭಾರತವನ್ನು ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೆ ತಲುಪಿಸಿದ್ದರು. ಅಲ್ಲದೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದರು (ಟಿ20 ವಿಶ್ವಕಪ್ 2007, ಏಕದಿನ ವಿಶ್ವಕಪ್ 2011, ಚಾಂಪಿಯನ್ಸ್ ಟ್ರೋಫಿ 2013) ಏಕೈಕ ನಾಯಕ ಎಂಬ ಹೆಗ್ಗಳಿಕೆ ಕೂಡ ಧೋನಿ ಅವರದ್ದು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಅತ್ಯಂತ ಯಶಸ್ವಿ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದರು.

    Published by:zahir
    First published: