ಭಾರತದ ಆಲ್‌ರೌಂಡರ್ ವಿನಯ್ ಕುಮಾರ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಬೆನ್ನಿಗೆ ಮತ್ತೋರ್ವ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರು ಸಹ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಎಲ್ಲಾ ಮಾದರಿಯ ಕ್ರಿಕೆಟ್ನಿಂದ ತಾವು ನಿವೃತ್ತಿ ಹೊಂದುತ್ತಿರುವುದಾಗಿ ಟ್ವಿಟರ್ ಮೂಲಕ ಘೋಷಣೆ ಮಾಡಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿರುವ ಯೂಸುಫ್ ಪಠಾಣ್ ಭಾರತ ಮತ್ತೋರ್ವ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರ ಹಿರಿಯ ಸಹೋದರ ಎಂಬುದು ಉಲ್ಲೇಖಾರ್ಹ. ಇರ್ಫಾನ್ ಪಠಾಣ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದುಇದೀಗ ವಿಶ್ವದ ವಿವಿಧ ಕ್ರಿಕೆಟ್ ಲೀಗ್ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯೂಸುಫ್ ಪಠಾಣ್ ಸಹ ವಿದೇಶಿ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
I thank my family, friends, fans, teams, coaches and the whole country wholeheartedly for all the support and love. #retirement pic.twitter.com/usOzxer9CE
— Yusuf Pathan (@iamyusufpathan) February 26, 2021
ಭಾರತದ ಪರ ಒಟ್ಟು 22 ಟಿ-20 ಪಂದ್ಯಗಳನ್ನು ಆಡಿರುವ ಯೂಸುಫ್ 18.15 ಬ್ಯಾಟಿಂಗ್ ಸರಾಸರಿಯಲ್ಲಿ 236 ರನ್ ಕಲೆಹಾಕಿದ್ದರೆ, 8.62ರ ಎಕಾನಮಿಯಲ್ಲಿ 13 ವಿಕೆಟ್ಗಳನ್ನೂ ಕಬಳಿಸಿದ್ದಾರೆ. ಇನ್ನೂ ಏಕದಿನ ಮಾದರಿಯಲ್ಲಿ 57 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಯೂಸುಫ್ ಪಠಾಣ್, 27ರ ಬ್ಯಾಟಿಂಗ್ ಸರಾಸರಿಯಲ್ಲಿ 810 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕ ಮೂರು ಅರ್ಧ ಶತಕ ಅಡಕವಾಗಿದೆ. ಏಕದಿನ ಮಾದರಿಯಲ್ಲಿ 5.5 ಎಕಾನಮಿಯಲ್ಲಿ ರನ್ ನೀಡಿ 33 ವಿಕೆಟ್ಗಳನ್ನೂ ಯೂಸುಫ್ ಕಬಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ