ತನಗೆ ಯಾರ ಮೇಲೆ ಪ್ರೀತಿ ಎಂದು ಚಹಾಲ್ ಟಿವಿಯಲ್ಲಿ ಬಹಿರಂಗ ಪಡಿಸಿದ ಹಾರ್ದಿಕ್ ಪಾಂಡ್ಯ

Hardik Pandya: ಹಾರ್ದಿಕ್ ಜೊತೆ ಚಹಾಲ್ ಅವರು ತಮ್ಮ ಚಹಾಲ್ ಟಿವಿಯಲ್ಲಿ ನೀವು ಈಗಿನ ಫ್ಯಾಷನ್ ಜೊತೆಗೆ ಹೇಗೆ ಹೊಂದಿಕೊಂಡಿದ್ದೀರಿ? ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪಾಂಡ್ಯ ಉತ್ತರ ನೀವೇ ಕೇಳಿ

ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್

ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್

  • News18
  • Last Updated :
  • Share this:
ಬೆಂಗಳೂರು (ಜೂ. 18): ಸದ್ಯ ಸಾಗುತ್ತಿರುವ ವಿಶ್ವಕಪ್​ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ, ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್ ಪಡೆದು ಮಿಂಚಿದ್ದರು.

ಪಂದ್ಯ ಮುಗಿದ ಬಳಿಕ ಬಿಸಿಸಿಐಯ ಅಧಿಕೃತ 'ಚಹಾಲ್ ಟಿವಿ'ಯಲ್ಲಿ ಮಾತನಾಡಿದ ಹಾರ್ದಿಕ್ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಾರ್ದಿಕ್ ಜೊತೆ ಚಹಾಲ್ ಅವರು ತಮ್ಮ ಚಹಾಲ್ ಟಿವಿಯಲ್ಲಿ ನೀವು ಈಗಿನ ಫ್ಯಾಷನ್ ಜೊತೆಗೆ ಹೇಗೆ ಹೊಂದಿಕೊಂಡಿದ್ದೀರಿ? ಎಂಬ ಪ್ರಶ್ನೆ ಕೇಳಿದ್ದಾರೆ.

All-Rounder Hardik Pandya Reveals His Love For Diamonds On Chahal TV
ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್


ENG vs AFG: ಮಾರ್ಗನ್ 17 ಸಿಕ್ಸ್, 148 ರನ್; ರಶೀದ್ 9 ಓವರ್​ಗೆ 110 ರನ್; ಇಂಗ್ಲೆಂಡ್ 397/6

ಇದಕ್ಕೆ ಉತ್ತರಿಸಿದ ಅವರು ವಜ್ರದ ಮೇಲಿರುವ ವ್ಯಾಮೋಹದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಕತ್ತಿನಲ್ಲಿ ವಿಶೇಷ ಚೈನ್​ ಧರಿಸಿರುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇದು ವಜ್ರದಿಂದ ತಯಾರಿಸಲಾಗಿದೆಯಂತೆ. ಈ ಚೈನ್‌ನಲ್ಲಿ ವಜ್ರದ ಬ್ಯಾಟ್ ಮತ್ತು ಬಾಲ್‌ ಇದೆ. ಜೊತೆಗೆ ಪದಕವೂ ಇದೆ ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಕೈಯಲ್ಲಿ ಎರಡು ವಜ್ರದ ಉಂಗುರವಿದ್ದು, ನನಗೆ ವಜ್ರದ ಚೈನ್​​ ಎಂದರೆ ತುಂಬಾ ಪ್ರೀತಿ ಎಂದಿದ್ದಾರೆ.

 ಸದ್ಯ ಟೀಂ ಇಂಡಿಯಾ ಆಟಗಾರರು ಎರಡು ದಿನಗಳ ವಿಶ್ರಾಂತಿಯಲ್ಲಿದ್ದು, ಜೂ. 22 ರಂದು ಅಫ್ಘಾನಿಸ್ತಾನ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.

First published: