ಇನ್ಮುಂದೆ ಟಿವಿ-ಮೊಬೈಲ್ ಮಾತ್ರವಲ್ಲದೆ ಇದರಲ್ಲೂ ಪ್ರಸಾರವಾಗುತ್ತೆ ಕ್ರಿಕೆಟ್; ಬಿಸಿಸಿಐಯಿಂದ ಹೊಸ ಪ್ರಯತ್ನ

ಸೆ. 15 ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ-20 ಕ್ರಿಕೆಟ್‌ ಪಂದ್ಯದೊಂದಿಗೆ ಆಲ್‌ ಇಂಡಿಯಾ ರೇಡಿಯೋದಲ್ಲಿ ಬಿಸಿಸಿಐನ ಕ್ರಿಕೆಟ್‌ ಲೈವ್‌ ಕಾಮೆಂಟರಿ ಶುರುವಾಗಲಿದೆ.

Vinay Bhat | news18-kannada
Updated:September 11, 2019, 12:42 PM IST
ಇನ್ಮುಂದೆ ಟಿವಿ-ಮೊಬೈಲ್ ಮಾತ್ರವಲ್ಲದೆ ಇದರಲ್ಲೂ ಪ್ರಸಾರವಾಗುತ್ತೆ ಕ್ರಿಕೆಟ್; ಬಿಸಿಸಿಐಯಿಂದ ಹೊಸ ಪ್ರಯತ್ನ
ಸಾಂಧರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ. 11): 80, 90ರ ದಶತಕದಲ್ಲಿ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ಸಾಧನ. ಆದರೆ, ಕಳೆದ ಕೆಲ ವರ್ಷಗಳ ಹಿಂದೆ ಇದು ಸ್ಥಗಿತಗೊಂಡಿತ್ತು. ಆದರೀಗ ರೇಡಿಯೋಗೆ ಕಿವಿಯಾನಿಸಿ ಕೂರುತ್ತಿದ್ದ ಕಾಲ ಮತ್ತೆ ಮರುಕಳಿಸಲಿದೆ.

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಒದಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ದೇಶದ ಹಳ್ಳಿ-ಹಳ್ಳಿಗಳಿಗೂ ಕ್ರಿಕೆಟ್ ತಲುಪಿಸುವ ಉದ್ದೇಶದಿಂದ ಬಿಸಿಸಿಐ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಆಲ್ ಇಂಡಿಯಾ ರೇಡಿಯೋ (ಎಐಆರ್​​) ಆಕಾಶವಾಣಿಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಮೂಲಕ ಅಧಿಕೃತವಾಗಿ ಬಿಸಿಸಿಐ ಮೂಲಕವೇ ಲೈವ್‌ ಕಾಮೆಂಟರಿ ಒದಗಿಸಲು ಆಲ್‌ ಇಂಡಿಯಾ ರೇಡಿಯೊ ಮುಂದಾಗಿದೆ.

‘233 ಎಸೆತಗಳಲ್ಲಿ 483 ರನ್​​, 27 ಸಿಕ್ಸರ್’​; ಗೇಲ್ ಸಿಡಿಲಬ್ಬರ ಬ್ಯಾಟಿಂಗ್ ಹೊರತಾಗಿಯು ಸೋತ ಜಮೈಕಾ!

ನೂತನ ಒಪ್ಪಂದ ಸೆ. 10, 2019 ರಿಂದ ಆಗಸ್ಟ್​ 31, 2021 ವರೆಗೆ ಇರಲಿದೆ. ಸೆ. 15 ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ-20 ಕ್ರಿಕೆಟ್‌ ಪಂದ್ಯದೊಂದಿಗೆ ಆಲ್‌ ಇಂಡಿಯಾ ರೇಡಿಯೋದಲ್ಲಿ ಬಿಸಿಸಿಐನ ಕ್ರಿಕೆಟ್‌ ಲೈವ್‌ ಕಾಮೆಂಟರಿ ಶುರುವಾಗಲಿದೆ.

 ಆಕಾಶವಾಣಿಯಲ್ಲಿ ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು, ರಣಜಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿ, ಸೈಯದ್ ಮುಸ್ತಕ್ ಅಲಿ ಟ್ರೋಫಿ, ವುಮೆನ್ಸ್​​ ಚಾಲೆಂಜ್ ಸಿರೀಸ್ ಸೇರಿದಂತೆ ಅನೇಕ ಪಂದ್ಯಗಳ ವೀಕ್ಷಕ ವಿವರಣೆಯನ್ನು ಬಿತ್ತರಿಸಲಿದೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ