ಅಂದು ಕುಡಿದ ಮತ್ತಿನಲ್ಲಿ ವಾರ್ನರ್ ಮಾಡಿದ್ದೇನು ಗೊತ್ತಾ?; ಅಚ್ಚರಿ ಸಂಗತಿ ಬಹಿರಂಗ ಪಡಿಸಿದ ಕುಕ್!

ವಾರ್ನರ್ ಕೇವಲ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಚೆಂಡನ್ನು ವಿರೂಪಗೊಳಿಸಿ ಮೋಸದಾಟ ಆಡುತ್ತಿದ್ದರು ಎಂಬ ಸಂಗತಿಯನ್ನು ಕುಕ್ ಬಹಿರಂಗ ಪಡಿಸಿದ್ದಾರೆ.

Vinay Bhat | news18-kannada
Updated:September 11, 2019, 8:12 AM IST
ಅಂದು ಕುಡಿದ ಮತ್ತಿನಲ್ಲಿ ವಾರ್ನರ್ ಮಾಡಿದ್ದೇನು ಗೊತ್ತಾ?; ಅಚ್ಚರಿ ಸಂಗತಿ ಬಹಿರಂಗ ಪಡಿಸಿದ ಕುಕ್!
ಡೇವಿಡ್ ವಾರ್ನರ್ ಹಾಗೂ ಅಲಸ್ಟೈರ್ ಕುಕ್
  • Share this:
ಬೆಂಗಳೂರು (ಸೆ. 11): ಬಾಲ್ ಟ್ಯಾಂಪರಿಂಗ್ (ಚೆಂಡು ವಿರೂಪ) ಮಾಡಿ ಒಂದು ವರ್ಷ ನಿಷೇಧ ಅನುಭವಿಸಿ ತಂಡಕ್ಕೆ ಕಮ್​ಬ್ಯಾಕ್​​ ಮಾಡಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​ಗೆ ಮತ್ತೆ ಮತ್ತೆ ಅವಮಾನವಾಗುತ್ತಿದೆ.

ಸದ್ಯ ಸಾಗುತ್ತಿರುವ ಆ್ಯಶಸ್ ಸರಣಿಯಲ್ಲೂ ವಾರ್ನರ್-ಸ್ಮಿತ್​ರನ್ನು ಇಂಗ್ಲೆಂಡ್ ಅಭಿಮಾನಿಗಳು ಹೀಯಾಳಿಸುತ್ತಿದ್ದಾರೆ. ಹೀಗಿರವಾಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ಅವರು ವಾರ್ನರ್ ಬಗ್ಗೆ ಅಚ್ಚರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

'ವಾರ್ನರ್ ಕೇವಲ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಚೆಂಡನ್ನು ವಿರೂಪಗೊಳಿಸಿ ಮೋಸದಾಟ ಆಡುತ್ತಿದ್ದರು' ಎಂಬ ಸಂಗತಿಯನ್ನು ಕುಕ್ ಬಹಿರಂಗ ಪಡಿಸಿದ್ದಾರೆ.

ಅನುಷ್ಕಾ ಶರ್ಮಾ-ದೀಪಿಕಾ ಇವರಲ್ಲಿ ಯಾರು ಹಾಟ್?; ಯಾರ್ಕರ್ ಪ್ರಶ್ನೆಗೆ ಬುಮ್ರಾ ಉತ್ತರವೇನು ಗೊತ್ತಾ?

2017-18ರ ಆ್ಯಶಸ್ ಸರಣಿಯ ವೇಳೆ ನಡೆದ ಘಟನೆಯನ್ನು ಕುಕ್ ವಿವರಿಸಿದ್ದು, ಇಂಗ್ಲೆಂಡಿನ ಕೆಲ ಆಟರೊಂದಿಗೆ ಡೇವಿಡ್ ವಾರ್ನರ್ ಬಿಯರ್ ಕುಡಿಯುತ್ತಿದ್ದ ವೇಳೆ ಈ ಸಂಗತಿಯನ್ನು ಕುದ್ದಾಗಿ ಅವರೇ ತಿಳಿಸಿರುವುದಾಗಿ ಕುಕ್ ಹೇಳಿದ್ದಾರೆ.

'ಎರಡು ಬಾಟಲ್ ಬಿಯರ್ ಕುಡಿದ ಮೇಲೆ ವಾರ್ನರ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಬಾಲ್ ಟ್ಯಾಪರಿಂಗ್ ನಡೆಸಲು ಬೇಕಾದ ವಸ್ತುವನ್ನು ತನ್ನ ಕೈಬೆರಳಿಗೆ ಕಟ್ಟಿಕೊಂಡು ಕೊಂಡೊಯ್ಯುತ್ತಿದ್ದುದ್ದಾಗಿ ಹೇಳಿದರು. ಆದರೆ, ಈ ಸಂದರ್ಭ ಸ್ಮಿತ್ ಕೂಡಲೇ ಎಚ್ಚೆತ್ತು, ಇದನ್ನು ನೀನು ಹೇಳಬಾರದಿತ್ತು ಎಂದು ವಾರ್ನರ್​​ಗೆ ಎಚ್ಚರಿಕೆ ನೀಡಿದರು' ಅಂದು ಘಟನೆಯ ಬಗ್ಗೆ ಕುಕ್ ವಿವರಿಸಿದ್ದಾರೆ.

2018ರಲ್ಲಿ ಆಸ್ಟೇಲಿಯಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸಿಸ್​ನ ಮೂವರು ಆಟಗಾರರು ಬಾಲ್​ನ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅದರಲ್ಲಿ ಪ್ರಮುಖವಾಗಿ ಸ್ಮಿತ್ ಹಾಗೂ ವಾರ್ನರ್​ಗೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಈಗ ಈ ಶಿಕ್ಷೆಯನ್ನ ಮುಗಿಸಿ ವಾಪಾಸ್ ಆಗಿರುವ ಸ್ಮಿತ್ ಹಾಗೂ ವಾರ್ನರ್ ಸದ್ಯ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ.
First published: September 11, 2019, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading