ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ನಟ ಅಕ್ಷಯ್ ಕುಮಾರ್​ಗೆ ಇಷ್ಟವಾದ ಇಬ್ಬರು ಕ್ರಿಕೆಟಿಗರು ಇವರು

Akshay Kumar favourite cricketers: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರಿಗೆ ಈಗಿನ ಕ್ರಿಕೆಟಿಗರ ಪೈಕಿ ಇಬ್ಬರು ಆಟಗಾರರು ಬಹಳ ಪ್ರಿಯವಂತೆ. ಆ ಇಬ್ಬರಲ್ಲಿ ಒಬ್ಬರು ಕರ್ನಾಟಕದ ಆಟಗಾರ ಇರುವುದು ಗಮನಾರ್ಹ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

 • Share this:
  ಕ್ರಿಕೆಟ್ ಮತ್ತು ಚಿತ್ರರಂಗಗಳಿಗೂ ಬಹಳ ಹತ್ತಿರದ ನಂಟು ಇದೆ. ಸಿನಿಮಾ ನಟರಂತೆ ಕ್ರಿಕೆಟಿಗರೂ ಸೆಲಬ್ರಿಟಿಗಳೇ. ಹಲವು ಕ್ರಿಕೆಟ್ ಕ್ಲಬ್​ಗಳನ್ನ ಸಿನಿಮಾ ನಟರು ಖರೀದಿಸಿ ನಿರ್ವಹಿಸುತ್ತಿರುವುದುಂಟು. ಶಾರುಕ್ ಖಾನ್ (Shahrukh Khan), ಪ್ರೀತಿ ಜಿಂಟಾ (Priety Zinta), ಶಿಲ್ಪಾ ಶೆಟ್ಟಿ (Shilpa Shetty) ಮೊದಲಾದವರು ಐಪಿಎಲ್ ತಂಡಗಳೊಂದಿಗೆ ಜೋಡಿತಗೊಂಡಿದ್ದವರೇ. ಬಹುತೇಕ ಎಲ್ಲಾ ಸಿನಿಮಾ ನಟರು ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವವರೇ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ಅಪ್ಪಟ ಕ್ರಿಕೆಟ್ ಅಭಿಮಾನಿ. ಟೀಮ್ ಇಂಡಿಯಾ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಅವರು ಹೋಗುವುದುಂಟು. ಅಕ್ಷಯ್ ಕುಮಾರ್ ಅವರಿಗೆ ಟೀಮ್ ಇಂಡಿಯಾದಲ್ಲಿ (Indian Cricket Team) ಬಹಳ ಅಚ್ಚುಮೆಚ್ಚು ಎನಿಸುವ ಇಬ್ಬರು ಆಟಗಾರರು ಇದ್ದಾರಂತೆ.

  ಕುತೂಹಲ ಎಂದರೆ ಅಕ್ಷಯ್ ಕುಮಾರ್ ಅವರಿಗೆ ಫೇವರಿಟ್ ಎನಿಸಿರುವ ಇಬ್ಬರು ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಇಲ್ಲ, ರೋಹಿತ್ ಶರ್ಮಾ ಕೂಡ ಇಲ್ಲ. “ಈಗ ಕ್ರಿಕೆಟ್ ಆಡುತ್ತಿರುವವರ ಪೈಕಿ ನನ್ನ ಅಚ್ಚುಮೆಚ್ಚಿನ ಆಟಗಾರರೆಂದರೆ ಕೆಎಲ್ ರಾಹುಲ್ (KL Rahul) ಮತ್ತು ಶಿಖರ್ ಧವನ್ (Shikhar Dhawan)” ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ ಎಂದು ಡಿಎನ್​ಎ ವೆಬ್ ಸೈಟ್ ವರದಿ ಮಾಡಿದೆ.

  ಕೆಎಲ್ ರಾಹುಲ್ ಟಿ20 ಕಿಂಗ್:

  ಕೆ ಎಲ್ ರಾಹುಲ್ ಸದ್ಯ ಭಾರತದ ಅತ್ಯುತ್ತಮ ಟಿ20 ಬ್ಯಾಟುಗಾರರ ಪೈಕಿ ಅಗ್ರಮಾನ್ಯರೆನಿಸಿದ್ದಾರೆ. ಐಪಿಎಲ್ ಆಗಲೀ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಲೀ ರಾಹುಲ್ ಕಿಂಗ್ ಎನಿಸಿದ್ಧಾರೆ. ಟೀಮ್ ಇಂಡಿಯಾದ ಮೂರು ಮಾದರಿ ಕ್ರಿಕೆಟ್​ನ ತಂಡಗಳಲ್ಲೂ ಅವರು ಸತತವಾಗಿ ಸ್ಥಾನ ಪಡೆಯುತ್ತಾ ಬಂದಿದ್ದಾರೆ.

  ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಬಿರುಕು?: ಸೌತ್ ಆಫ್ರಿಕಾ ಓಡಿಐ ಸರಣಿಯಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ

  ದಕ್ಷಿಣ ಆಫ್ರಿಕಾದಲ್ಲಿ ಡಿ. 26ರಿಂದ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳಿಗೂ ಕೆ ಎಲ್ ರಾಹುಲ್ ಆಯ್ಕೆ ಆಗಿದ್ದಾರೆ. ಅದಾದ ಬಳಿಕ ನಡೆಯುವ ಓಡಿಐ ಸರಣಿಗೂ ರಾಹುಲ್ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿದೆ.

  ಶಿಖರ್ ಧವನ್ ಟೀಮ್ ಇಂಡಿಯಾ ಗಬ್ಬರ್ ಸಿಂಗ್:

  ಇನ್ನು, ಟೀಮ್ ಇಂಡಿಯಾದಲ್ಲಿ ಗಬ್ಬರ್ ಸಿಂಗ್ ಎಂದು ಖ್ಯಾತರಾಗಿರುವ ಶಿಖರ್ ಧವನ್ ಬಹಳ ಸ್ಟೈಲಿಶ್ ಬ್ಯಾಟರ್. ಅವರು ಆರ್ಭಟಿಸಲು ನಿಂತರೆ ಬ್ಯಾಟಿಂಗ್ ಇಷ್ಟು ಸಲೀಸಾ ಎಂದು ಯಾರಿಗಾದರೂ ಅನಿಸದೇ ಇರದು. ಸದ್ಯ ಫಾರ್ಮ್ ಕಳೆದುಕೊಂಡಿದ್ಧಾರಾದರೂ ಇವರು ಲಯಕ್ಕೆ ಮರಳಲು ಒಂದು ಒಳ್ಳೆಯ ಇನ್ನಿಂಗ್ಸ್ ಸಾಕು, ಅಷ್ಟು ಕ್ಲಾಸಿಕ್ ಬ್ಯಾಟರ್. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಇವರು ಆಯ್ಕೆ ಆಗದೇ ಇದ್ದರೂ ಓಡಿಐ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ, ಉದಯೋನ್ಮುಖ ಪ್ರತಿಭೆಗಳು ಟೀಮ್ ಇಂಡಿಯಾದ ಬಾಗಿಲು ಬಡಿಯುತ್ತಿರುವುದರಿಂದ ಧವನ್ ತಮ್ಮ ಸ್ಥಾನ ಉಳಿಸಿಕೊಳ್ಳಲು ಹರಸಾಹಸವನ್ನಂತೂ ಪಡಬೇಕಿದೆ.

  ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ:

  ಡಿ. 26ರಂದು ದಕ್ಷಿಣ ಆಫ್ರಿಕಾ ಪ್ರವಾಸ ಆರಂಭಿಸಲಿರುವ ಟೀಮ್ ಇಂಡಿಯಾ ಮೂರು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಅದಾದ ಬಳಿಕ ಜನವರಿ 19, 21 ಮತ್ತು 23ರಂದು ಮೂರು ಏಕದಿನ ಪಂದ್ಯಗಳನ್ನ ಆಡಿ ತವರಿಗೆ ವಾಪಸ್ಸಾಗಲಿದೆ.

  ಇದನ್ನೂ ಓದಿ: Vijay Hazare Trophy: ಬಂಗಾಳ ವಿರುದ್ಧ ಸೋತರೂ ಕರ್ನಾಟಕ ಪ್ರೀಕ್ವಾರ್ಟರ್​ಫೈನಲ್​ಗೆ

  ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ಏಕದಿನ ತಂಡದ ನೇತೃತ್ವ ವಹಿಸಿದ್ದಾರೆ. ಟೆಸ್ಟ್ ತಂಡಕ್ಕೆ ವೈಸ್ ಕ್ಯಾಪ್ಟನ್ ಕೂಡ ಆಗಿದ್ದ ರೋಹಿತ್ ಶರ್ಮಾ ಮುಂಬೈನಲ್ಲಿ ನೆಟ್ ಪ್ರಾಕ್ಟೀಸ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದು ಟೆಸ್ಟ್ ಸರಣಿಗೆ ಅಲಭ್ಯರಿದ್ದಾರೆ.

  ಇನ್ನೊಂದೆಡೆ, ಓಡಿಐ ನಾಯಕತ್ವ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣವೊಡ್ಡಿ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
  Published by:Vijayasarthy SN
  First published: