ವಿಶ್ವಕಪ್ ತಂಡದಲ್ಲಿ ಭಾಗಿಯಾಗಬೇಕು ಎಂಬುದು ನನ್ನ ಕನಸಾಗಿತ್ತು! ಆದರೆ… ; ಅಜಿಂಕ್ಯ ರಹಾನೆ
ಸೀಮಿತ ಓವರ್ ಕ್ರಿಕೆಟ್ನಲ್ಲಿ ನಾನು ಉತ್ತಮ ಪ್ರದರ್ಶನ ತೋರುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ ಎಂಬುದೆ ನನಗೆ ಸಂತಸದ ವಿಷಯ- ರಹಾನೆ

ಅಜಿಂಕ್ಯ ರಹಾನೆ
- News18
- Last Updated: August 11, 2019, 3:45 PM IST
ಬೆಂಗಳೂರು (ಆ. 11): 2015 ರಲ್ಲಿ ಟೀಂ ಇಂಡಿಯಾದ 4ನೇ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಅಜಿಂಕ್ಯ ರಹಾನೆ ಬಳಿಕ ಫಾರ್ಮ್ ವೈಫಲ್ಯದಿಂದ ಹೊರಗುಳಿಯಬೇಕಾಯಿತು. ಆದರೆ, ಕಳೆದ ವರ್ಷ ರಣಜಿ ಸೇರಿದಂತೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಕಮ್ಬ್ಯಾಕ್ ಮಾಡಿದ್ದರು. ಆದರೂ ಅವರಿಗೆ 2019 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಸದ್ಯ ಈ ಬಗ್ಗೆ ಮಾತನಾಡಿರುವ ರಹಾನೆ, ‘ವಿಶ್ವಕಪ್ ತಂಡದಲ್ಲಿ ಭಾಗಿಯಾಗಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ನನ್ನದು ಕೂಡ ಅದೆ ಕನಸಾಗಿತ್ತು. ಇದಕ್ಕೋಸ್ಕರ ಸಾಕಷ್ಟು ಸಮಯ ಕಾದು, ಬಳಿಕ ಸ್ಥಾನ ಸಿಗಲಿಲ್ಲ ಎಂದಾದರೆ ತುಂಬಾ ಬೇಸರವಾಗುತ್ತದೆ. ಆದರೆ, ಇದಕ್ಕೆ ಕುಗ್ಗದೆ ನಾವು ಮುಂದುವರೆಯಬೇಕು’ ಎಂದಿದ್ದಾರೆ.
‘ಕೌಂಟಿ ಕ್ರಿಕೆಟ್ನಲ್ಲಿ ನಾನು ಎರಡು ತಿಂಗಳು ಆಡಿದಾಗ ಸಾಕಷ್ಟು ವಿವಾರಗಳನ್ನು ಕಲಿತಿರುವೆ. ವಿಶ್ವಕಪ್ ತಂಡದಲ್ಲಿ ಆಡಬೇಕೆಂಬುದು ಕನಸಾಗಿತ್ತು. ಆದರೆ ಅವಕಾಶ ಸಿಗದಿದ್ದಾಗ ನಾವು ಮುಂದುವರೆಯಲೇಬೇಕು'.
ಭರ್ಜರಿ ಫಾರ್ಮ್ನಲ್ಲಿರುವ ಈ 5 ಆಟಗಾರರಿಗೆ ಟೀಂ ಇಂಡಿಯಾದಲ್ಲಿಲ್ಲ ಜಾಗ..!
'ಸದ್ಯ ಮುಂದಿನ ವಿಶ್ವಕಪ್ಗೆ ನಾನು ಈಗಿನಿಂದಲೇ ಪ್ರಯತ್ನ ಪಡುತ್ತಿದ್ದೇನೆ. ವಿಶ್ವಕಪ್ ನಂತರ ಜೀವನವಿದೆ. ಅನೇಕ ಸವಾಲುಗಳಿವೆ. ಮುಂದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದೆ. ನಾನೀಗ ಇದರತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ಭಾರತ ತಂಡವನ್ನು ಉತ್ತುಂಗಕ್ಕೇರಿಸಲು ಪ್ರಯತ್ನ ಪಡುತ್ತೇನೆ' ಎಂದಿದ್ದಾರೆ.
'ನನಗೆಲ್ಲಾದರು ಏಕದಿನ ಅಥವಾ ಟಿ-20 ಕ್ರಿಕೆಟ್ನಲ್ಲಿ ಆಡುವ ಅವಕಾಶ ಸಿಕ್ಕರೆ ಪರಿಶ್ರಮ ಪಟ್ಟು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ನಾನು ಉತ್ತಮ ಪ್ರದರ್ಶನ ತೋರುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ ಎಂಬುದೆ ನನಗೆ ಸಂತಸದ ವಿಷಯ' ಎಂದು ರಹಾನೆ ಹೇಳಿದ್ದಾರೆ.

Loading...
Loading...