Ajinkya Rahane- ಕಾನ್ಪುರ್ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಕ್ಯಾಪ್ಟನ್?

Ajinkya Rahane Team India Captain?- ಕಾನ್ಪುರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅಲಭ್ಯ ಇರುವುದರಿಂದ ಅಜಿಂಕ್ಯ ರಹಾನೆ ಕ್ಯಾಪ್ಟನ್ ಆಗುವ ಸಾಧ್ಯತೆ ಇದೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

 • Share this:
  ನವದೆಹಲಿ, ನ. 11: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನವೆಂಬರ್ 17ರಿಂದ ಕ್ರಿಕೆಟ್ ಸರಣಿ (India vs New Zealand Cricket Series) ನಡೆಯಲಿದೆ. ಮೊದಲಿಗೆ ಮೂರು ಟಿ20 ಪಂದ್ಯಗಳ ಸರಣಿಯಾದರೆ, ನಂತರ ಟೆಸ್ಟ್ ಸರಣಿ ಇದೆ. ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್ ಆಗಿದ್ಧಾರೆ. ಅದಾದ ಬಳಿಕ ನಡೆಯುವ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ಕೊಡಲು ಬಿಸಿಸಿಐ ನಿರ್ಧರಿಸಿದೆ. ಕಾನ್​ಪುರದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರೂ ಅಲಭ್ಯರಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ (Ajinkya Rahane may lead team in Kanpur test) ಅವರು ಕಾನ್ಪುರದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ನಂತರದ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ (Virat Kohli) ಲಭ್ಯ ಇರಲಿದ್ದು ಅವರೇ ಕ್ಯಾಪ್ಟನ್ ಆಗಿ ಹೊಣೆ ಹೊರಲಿದ್ದಾರೆ.

  ಕಾನ್​ಪುರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಅವರನ್ನ ನಾಯಕರನ್ನಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಆಯ್ಕೆಗಾರರು ಬಹಳ ಚರ್ಚೆ ನಡೆಸಿದ ಬಳಿಕ ತೆಗೆದುಕೊಂಡಿದ್ದಾರೆ. ಆಟಗಾರರ ವರ್ಕ್ ಲೋಡ್ ಎಷ್ಟಿದೆ, ವಿಶ್ರಾಂತಿ ಎಷ್ಟು ಅಗತ್ಯ ಇದೆ ಎಂಬುದನ್ನೆಲ್ಲಾ ಪರಿಗಣಿಸಿ ಅಂತಿಮವಾಗಿ ರಹಾನೆಗೆ ಮೊದಲ ಪಂದ್ಯದ ಕ್ಯಾಪ್ಟನ್ಸಿ ಹೊಣೆಗಾರಿಕೆ ಕೊಡುವ ನಿರ್ಧಾರಕ್ಕೆ ಬರಲಾಯಿತು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ಹೇಳಿದೆ.

  ಆಟಗಾರರ ವರ್ಕ್​​ಲೋಡ್ ಪರಿಗಣಿಸಿ ನಿರ್ಧಾರ:

  ಭಾರತ ತಂಡ ಟಿ20 ವಿಶ್ವಕಪ್​ನ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗದೇ ಹೋಗಿದ್ದಕ್ಕೆ ನಿರಂತರ ಕ್ರಿಕೆಟ್ ಮತ್ತು ಬಯೋಬಬಲ್ ವ್ಯವಸ್ಥೆಯೇ ಕಾರಣ ಎಂಬ ಅಭಿಪ್ರಾಯಗಳು ಹೆಚ್ಚಾಗಿ ಕೇಳಿಬರುತ್ತಿವೆ. ಟೀಮ್ ಇಂಡಿಯಾ ಆಟಗಾರರಾದ ಜಸ್​ಪ್ರೀತ್ ಬೂಮ್ರಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರೇ ಬಾಯಿಬಿಟ್ಟು ಈ ವಿಚಾರ ಹೇಳಿದ್ಧಾರೆ. ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಧ್ವನಿಗೂಡಿಸಿದ್ದಾರೆ. ಹೊಸ ಕೋಚ್ ರಾಹುಲ್ ದ್ರಾವಿಡ್ ಕೂಡ ಇದೇ ಅನಿಸಿಕೆ ತಿಳಿಸಿದ್ದಾರೆ. ಹೀಗಾಗಿ, ಆಟಗಾರರ ವರ್ಕ್ ಲೋಡ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಬಿಸಿಸಿಐ ನಿರ್ಧರಿಸಿದೆ.

  ನ್ಯೂಜಿಲೆಂಡ್ ಸರಣಿಗೆ ಹಲವು ಆಟಗಾರರಿಗೆ ವಿಶ್ರಾಂತಿ:

  ಅದಕ್ಕೆ ಪೂರಕವೆಂಬಂತೆ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಅನೇಕ ಆಟಗಾರರಿಗೆ ವಿಶ್ರಾಂತಿ ಕೊಡಲಾಗಿದೆ. ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ಕೊಡಲಾಗಿದೆ. ಕೊಹ್ಲಿ ಅವರು ಟಿ20 ತಂಡದ ಕ್ಯಾಪ್ಟನ್ಸಿಯಿಂದ ಹಿಂದೆ ಸರಿದಾಗಿದೆ. ಹೀಗಾಗಿ, ರೋಹಿತ್ ಶರ್ಮಾ ಅವರಿಗೆ ನಾಯಕ ಸ್ಥಾನ ವಹಿಸಲಾಗಿದೆ. ಕೆಎಲ್ ರಾಹುಲ್ ಉಪನಾಯಕರಾಗಿದ್ದಾರೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮೊದಲಾದವರು ಟಿ20 ಸರಣಿಗೆ ಆಯ್ಕೆ ಆಗಿದ್ಧಾರೆ.

  ಇದನ್ನೂ ಓದಿ: ‘ಕ್ರೀಡಾ ಕ್ಷೇತ್ರಕ್ಕೆ ಬರಬೇಡಿ’- ಸೆಮಿಫೈನಲ್ ಹೀರೋ ನೀಶಂ ಹೀಗಂದದ್ದು ಯಾಕೆ? ಅವರ ಟ್ವೀಟ್ ವೈರಲ್

  ಐಪಿಎಲ್​ನಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಮೊದಲಾದವರೂ 15 ಆಟಗಾರರ ಟೀಮ್ ಇಂಡಿಯಾದಲ್ಲಿ ಇದ್ದಾರೆ.

  ಟಿ20 ಸರಣಿ ಬಳಿಕ ನಡೆಯಲಿರುವ ಟೆಸ್ಟ್ ಸರಣಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಟಿ20 ಸರಣಿ ನಡೆಯುವ ವೇಳೆ ಇದರ ಪ್ರಕಟಣೆ ಮಾಡುವ ಸಂಭವ ಇದೆ. ಒಂದು ವರದಿ ಪ್ರಕಾರ, ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯ ಇರುವುದರಿಂದ ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೇ ನಾಯಕರಾಗಲಿ. ನಂತರದ ಪಂದ್ಯದಲ್ಲಿ ರೋಹಿತ್ ಅವರಿಗೆ ವಿಶ್ರಾಂತಿ ನೀಡಬಹುದು ಎಂಬುದು ಆಯ್ಕೆಗಾರರ ಒಲವಾಗಿತ್ತು.

  ಇದನ್ನೂ ಓದಿ: Virat Kohli- ವಿರಾಟ್ ಕೊಹ್ಲಿ ರಿಟೈರ್ ಆಗ್ತಾರೆ ನೋಡ್ತಾ ಇರಿ: ಮಾಜಿ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

  ಆದರೆ, ರೋಹಿತ್ ಶರ್ಮಾ ಅವರು ಟಿ20 ಸರಣಿ ಮುಗಿದ ಬಳಿಕ ವಿಶ್ರಾಂತಿ ಬೇಕೆಂಬ ಅನಿಸಿಕೆ ವ್ಯಕ್ತಪಡಿಸಿರುವುದರಿಂದ ಅಂತಿಮವಾಗಿ ಅಜಿಂಕ್ಯ ರಹಾನೆ ಅವರನ್ನ ಕ್ಯಾಪ್ಟನ್ ಮಾಡುವುದೆಂದು ನಿರ್ಧರಿಸಲಾಯಿತೆನ್ನನಲಾಗಿದೆ.

  ನವೆಂಬರ್ 17ರಿಂದ ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿವೆ. ಅದಾದ ಬಳಿಕ ಕಾನ್​ಪುರ್ ಮತ್ತು ಮುಂಬೈನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲು ನಿಗದಿಯಾಗಿವೆ.
  Published by:Vijayasarthy SN
  First published: