Ajay Jadeja| ಟಿ20 ವಿಶ್ವಕಪ್‌ಗೆ ಧೋನಿ ಮೆಂಟರ್‌: ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತೇ..?

ಭಾರತ ಕ್ರಿಕೆಟ್ ತಂಡವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದ ತರಬೇತುದಾರ ಮತ್ತು ನಾಯಕರಿದ್ದಾರೆ. ಆದರೂ ಮಾರ್ಗದರ್ಶಕನ ಅಗತ್ಯವಿತ್ತು ಎಂದು ರಾತ್ರೋರಾತ್ರಿ ಇವರಿಗೆ ಅನ್ನಿಸಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬಿಸಿಸಿಐನ ಈ ನಿರ್ಧಾರ ನನಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿದೆ ಎಂದು ಜಡೇಜಾ ಹೇಳಿದ್ದಾರೆ

ಅಜಯ್​ ಜಡೇಜಾ-ಧೋನಿ-ಕೊಹ್ಲಿ.

ಅಜಯ್​ ಜಡೇಜಾ-ಧೋನಿ-ಕೊಹ್ಲಿ.

  • Share this:

    ತನ್ನ ನಾಯಕತ್ವದಲ್ಲಿ ಎರಡು ಬಾರಿ ಭಾರತ ಕ್ರಿಕೆಟ್ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದಂತಹ ಮಹೇಂದ್ರ ಸಿಂಗ್ ಧೋನಿರನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮೆಂಟರ್ (ಮಾರ್ಗದರ್ಶಿ) ಆಗಿ ನಿಯೋಜಿಸಿದ್ದ ವಿಷಯ ಕೇಳಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ.ಆದರೆ ಈ ವಿಚಾರವನ್ನು ನಾವು ಮತ್ತೆ ನಿಮಗೆ ನೆನಪಿಸುವಂತೆ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗ ಎಂದರೆ ತಪ್ಪಾಗುವುದಿಲ್ಲ. ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನವನ್ನು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರಶ್ನಿಸಿದ್ದಾರೆ.


    ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನೊಂದಿಗೆ ಮಾತನಾಡಿದ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರರಾದ ಜಡೇಜಾ "ನನಗೆ ಬಿಸಿಸಿಐ ನಿರ್ಧಾರವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಈ ನಿರ್ಧಾರದ ಹಿಂದಿನ ಆಲೋಚನೆ ಏನಾಗಿರಬಹುದು ಎಂಬುದರ ಬಗ್ಗೆ ನಾನು ಕಳೆದ ಎರಡು ದಿನಗಳಿಂದ ಇದರ ಬಗ್ಗೆಯೇ ಯೋಚಿಸುತ್ತಿದ್ದೇನೆ. ನಾನು ಎಂ.ಎಸ್. ಧೋನಿ ಬಗ್ಗೆ ಮಾತನಾಡುತ್ತಿಲ್ಲ, ಅವರ ತಿಳುವಳಿಕೆ ಅಥವಾ ಅವರು ತಂಡಕ್ಕೆ ಎಷ್ಟು ಉಪಯುಕ್ತವಾಗಬಹುದು, ನಾನು ಅದರ ಬಗ್ಗೆ ಮಾತಾಡುತ್ತಿಲ್ಲ” ಎಂದು ಹೇಳಿದ್ದಾರೆ.


    "ನಾನು ಸಹ ಧೋನಿಯ ದೊಡ್ಡ ಅಭಿಮಾನಿ. ತಾವು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುವಾಗ ಮುಂದಿನ ನಾಯಕನನ್ನು ತಂಡಕ್ಕೆ ನೀಡಿ ಹೋಗಿದ್ದರು ಮತ್ತು ಅವರು ತಂಡಕ್ಕೆ ಅವಶ್ಯಕತೆ ಇದ್ದಾಗ ತಮ್ಮ ತಂಡದಲ್ಲಿಯೇ ನಾಯಕತ್ವದ ಬದಲಾವಣೆ ಮಾಡಲಾಗಿತ್ತು" ಎಂದು ಹೇಳಿದರು.


    “ಈಗಾಗಲೇ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ತರಬೇತುದಾರ ರವಿಶಾಸ್ತ್ರಿ ಉಪಸ್ಥಿತಿಯಲ್ಲಿ ಭಾರತ ತಂಡವು ತುಂಬಾ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಆದ್ದರಿಂದ ಮುಂಬರುವ ವಿಶ್ವಕಪ್ ಗೆ ಮಾರ್ಗದರ್ಶಕರ ಅವಶ್ಯಕತೆ ಇರಲಿಲ್ಲ ಎಂದು ಜಡೇಜಾ ಒತ್ತಿ ಹೇಳಿದ್ದಾರೆ.


    "ಭಾರತ ಕ್ರಿಕೆಟ್ ತಂಡವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದ ತರಬೇತುದಾರ ಮತ್ತು ನಾಯಕರಿದ್ದಾರೆ. ಆದರೂ ಮಾರ್ಗದರ್ಶಕನ ಅಗತ್ಯವಿತ್ತು ಎಂದು ರಾತ್ರೋರಾತ್ರಿ ಇವರಿಗೆ ಅನ್ನಿಸಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬಿಸಿಸಿಐನ ಈ ನಿರ್ಧಾರ ನನಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿದೆ" ಎಂದು ಜಡೇಜಾ ಹೇಳಿದರು.


    ಅಕ್ಟೋಬರ್ 17ರಂದು ಯುಎಇ ಮತ್ತು ಒಮನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಬಿಸಿಸಿಐ ಗುರುವಾರ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ತಂಡದ ಸದಸ್ಯರ ಹೆಸರುಗಳನ್ನು ಘೋಷಣೆ ಮಾಡುವಾಗ, ಬಿಸಿಸಿಐ ಕಾರ್ಯದರ್ಶಿ ಜೇ ಶಾ, ಎಂ. ಎಸ್. ಧೋನಿ ತಂಡದ ಮಾರ್ಗದರ್ಶಕರಾಗಲಿದ್ದಾರೆ ಎಂದು ಹೇಳಿದ್ದರು. ಇದು ಧೋನಿ ಅವರ ಅಭಿಮಾನಿಗಳನ್ನು ಮೆಚ್ಚಿಸಿರಬಹುದು. ಆದರೆ ಜಡೇಜಾ ಅವರಿಗೆ ಈ ಕ್ರಮದ ಹಿಂದಿನ ಉದ್ದೇಶವನ್ನು ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.


    ಇದನ್ನೂ ಓದಿ: ಪೋಷಕರ ಬಗ್ಗೆ ತನ್ನ ಕನಸೊಂದನ್ನು ನನಸು ಮಾಡಿಕೊಂಡ ನೀರಜ್ ಚೋಪ್ರಾ ..!

    ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ 40 ವರ್ಷದ ಧೋನಿ ಮಾರ್ಗದರ್ಶನದಲ್ಲಿ ಭಾರತ ಇನ್ನೊಂದು ವಿಶ್ವಕಪ್ ಗೆಲ್ಲುತ್ತಾ ಎಂದು ಕಾದು ನೋಡಬೇಕಾಗಿದೆ.

    Published by:MAshok Kumar
    First published: