HOME » NEWS » Sports » CRICKET AFTER VIRAT KOHLI WHO IS THE INDIAN CRICKET TEAM CAPTAIN VB

ಕ್ಯಾಪ್ಟನ್ ಪಟ್ಟಕ್ಕೆ ಟೀಂ ಇಂಡಿಯಾದಲ್ಲಿ ಶುರುವಾಗಿದೆ ಕಿತ್ತಾಟ?; ಕೊಹ್ಲಿ ನಂತರದ ನಾಯಕ ಯಾರು?

Virat Kohli: ಬಿಸಿಸಿಐ ಭವಿಷ್ಯದ ಟೀಂ ಇಂಡಿಯಾ ನಾಯಕನ ಪಟ್ಟಕ್ಕೆ ಈಗಾಗಲೇ ಇಬ್ಬರು ಪ್ರಮುಖ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ. ಮೈದಾನದಲ್ಲಿ ಈ ಆಟಗಾರರ  ನಡವಳಿಕೆ, ಸಂಕಷ್ಟದ ಸಂದರ್ಭದಲ್ಲಿ ಬ್ಯಾಟ್ ಬೀಸುವ ಪರಿ, ಹೀಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ.

news18-kannada
Updated:June 8, 2020, 9:25 AM IST
ಕ್ಯಾಪ್ಟನ್ ಪಟ್ಟಕ್ಕೆ ಟೀಂ ಇಂಡಿಯಾದಲ್ಲಿ ಶುರುವಾಗಿದೆ ಕಿತ್ತಾಟ?; ಕೊಹ್ಲಿ ನಂತರದ ನಾಯಕ ಯಾರು?
ಕೆ. ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ.
  • Share this:
ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಭಾರತೀಯ ಕ್ರಿಕೆಟ್ ತಂಡದ ಯಶಸ್ಸು ಮತ್ತಷ್ಟು ಉತ್ತುಂಗಕ್ಕೇರಿದೆ. ಕೆಲವು ಸ್ಮರಣೀಯ ಸರಣಿಯನ್ನೂ ಗೆದ್ದು ಬೀಗಿದೆ. ಉಪ ನಾಯಕನಾಗಿ ರೋಹಿತ್ ಶರ್ಮಾ, ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಆದರೆ, 31 ವರ್ಷದ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಇನ್ನೂ ಕೆಲವು ವರ್ಷಗಳ ಕಾಲವಷ್ಟೆ ನಾಯಕನಾಗಿ ಮುನ್ನಡೆಸಬಹುದು.

ಹೀಗಾಗಿ ಕೊಹ್ಲಿ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸುವವರಾರು? ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಇದಕ್ಕಾಗಿ ಈಗಿನಿಂದಲೇ ಭಾರತ ತಂಡದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿದೆ. ಸಹಜವಾಗಿಯೆ ಟೀಂ ಇಂಡಿಯಾ ಮುಂದಿನ ನಾಯಕ ಯಾರು ಪ್ರಶ್ನೆಗೆ ಕಾಣಿಸುವ ಉತ್ತರ ರೋಹಿತ್ ಶರ್ಮಾ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ ವಹಿಸಿಕೊಳ್ಳುವುದು ಹಿಟ್​ಮ್ಯಾನ್ ಎಂದೇ ನಂಬಲಾಗಿದೆ.

No decision on IPL 2020 yet, BCCI monitoring situation amid Covid-19 lockdown
ಟೀಂ ಇಂಡಿಯಾ ಆಟಗಾರರು.


ಆವೊಂದು ಬದಲಾವಣೆಯಿಂದಾಗಿ ಸ್ಟಾರ್​ ಆಟಗಾರಾಗಿದ್ದಾರೆ ಈ ಕ್ರಿಕೆಟ್​ ತಾರೆಯರು

ಆದರೆ, ರೋಹಿತ್​ಗೆ ನಾಯಕನ ಸ್ಥಾನ ಸಿಗುವುದು ಸಾಧ್ಯವಿಲ್ಲ. ಇದಕ್ಕೆ ಕಾರಣ ರೋಹಿತ್ ವಯಸ್ಸು. ರೋಹಿತ್​ಗೆ ಈಗಾಗಲೇ 32 ವರ್ಷವಾಗಿದೆ. ಹೀಗಾಗಿ ಬಿಸಿಸಿಐ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ನಾಯಕನನ್ನು ಆಯ್ಕೆ ಮಾಡುವುದು ಖಚಿತ.

ಕ್ಯಾಪ್ಟನ್ ರೇಸ್​ನಲ್ಲಿ ಯಾರಿದ್ದಾರೆ?

ಬಿಸಿಸಿಐ ಭವಿಷ್ಯದ ಟೀಂ ಇಂಡಿಯಾ ನಾಯಕನ ಪಟ್ಟಕ್ಕೆ ಈಗಾಗಲೇ ಇಬ್ಬರು ಪ್ರಮುಖ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ. ಮೈದಾನದಲ್ಲಿ ಈ ಆಟಗಾರರ  ನಡವಳಿಕೆ, ಸಂಕಷ್ಟದ ಸಂದರ್ಭದಲ್ಲಿ ಬ್ಯಾಟ್ ಬೀಸುವ ಪರಿ, ಹೀಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ಈ ಇಬ್ಬರು ಆಟಗಾರರು ಟೀಂ ಇಂಡಿಯಾ ಪರ ಕಳೆದ ಒಂದು ವರ್ಷದಿಂದ ಅತ್ಯುತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ.ಕನ್ನಡಿಗ ಕೆ. ಎಲ್. ರಾಹುಲ್ ಮೊದಲ ಆಯ್ಕೆ:

ಹೌದು, ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ ತೊಡುವವರ ಸಾಲಿನಲ್ಲಿ ಮೊದಲಿಗರಾಗಿ ಕನ್ನಡಿಗ ಕೆ. ಎಲ್. ರಾಹುಲ್ ಇದ್ದಾರೆ. ಶಾಂತ ಸ್ವಭಾವದ ರಾಹುಲ್ ಈಗಾಗಲೇ ಒಂದು ಬಾರಿ, ಕಳೆದ ನ್ಯೂಜಿಲೆಂಡ್ ಪ್ರವಾಸದ ವೇಳೆ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಭಾರತ ಗೆಲುವನ್ನೂ ಸಾಧಿಸಿತ್ತು. ಅಲ್ಲದೆ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ ರಾಹುಲ್​ನನ್ನು ನಾಯಕನಾಗಿ ಆಯ್ಕೆ ಮಾಡಿದೆ.

ಇತರೆ ಬ್ಯಾಟ್ಸ್​ಮನ್​ಗಳಿಗಿಂತ ದ್ರಾವಿಡ್ ಒಂದು ಹೆಜ್ಜೆ ಮುಂದಿದ್ದರು: ಪಾಕ್​ ಕ್ರಿಕೆಟಿಗನಿಂದ ಕನ್ನಡಿಗನ ಗುಣಗಾನ

ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಸದ್ಯ ವಿಕೆಟ್ ಕೀಪಿಂಗ್​ನಲ್ಲೂ ಮಿಂಚುತ್ತಿರುವ ರಾಹುಲ್, ಆರಂಭಿಕನಾಗಿ, ಮಧ್ಯಮ ಕ್ರಮಾಂಕದಲ್ಲಿ ಹಾಗೂ ಫಿನಿಶರ್ ಆಗಿ ಬಿಸಿಸಿಐಯ ಮನ ಗೆದ್ದಿದ್ದಾರೆ. ಹೀಗಾಗಿ ಕೆಲವೇ ವರ್ಷಗಳಲ್ಲಿ ರಾಹುಲ್ ಭಾರತ ಕ್ರಿಕೆಟ್ ತಂಡದ ನಾಯಕನಾಗುವುದು ಖಚಿತ ಎಂದೇ ಹೇಳಬಹುದು.

ರೇಸ್​ನಲ್ಲಿ ಶ್ರೇಯಸ್ ಅಯ್ಯರ್:

ಕೆ. ಎಲ್. ರಾಹುಲ್ ಬಿಟ್ಟರೆ ಮತ್ತೊಂದು ಆಯ್ಕೆ ಶ್ರೇಯಸ್ ಅಯ್ಯರ್. ಟೀಂ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಮಿಂಚುತ್ತಿರುವ ಈ ಆಟಗಾರ, ಭಾರತಕ್ಕಿದ್ದ ಬಹುಕಾಲದ ಸಮಸ್ಯೆಯನ್ನು ಪರಿಸಿಹರಿಸಿದರು. ಈಗಾಗಲೇ ದೇಶೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಅಯ್ಯರ್​ಗಿದೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕನಾಗಿ ಅಯ್ಯರ್ ಉತ್ತಮ ನಿರ್ವಹಣೆ ತೋರಿದ್ದಾರೆ. ಅಲ್ಲದೆ ಈ ಹಿಂದೆ ಭಾರತ ಎ ತಂಡ ಶ್ರೇಯಸ್ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನತೋರಿತ್ತು. ಹೀಗಾಗಿ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆ. ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಟೀಂ ಇಂಡಿಯಾ ನಾಯಕತ್ವಕ್ಕಾಗಿ ಕಠಿಣ ಪೈಪೋಟಿ ಏರ್ಪಡುವುದು ಖಚಿತ.
First published: June 8, 2020, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading