Video | ಭಾರತ-ಆಸ್ಟ್ರೇಲಿಯಾ ಪಂದ್ಯ ನೋಡಲು ಬಂದ ವಿಜಯ್ ಮಲ್ಯಗೆ ಕಳ್ಳ.. ಕಳ್ಳ.. ಎಂದು ಕೂಗಿದ ಭಾರತೀಯರು!

ಪಂದ್ಯ ನೋಡಲು ತೆರಳಿದ್ದ ಮಲ್ಯ ಕೂಡ ಕ್ರೀಡಾಂಗಣದಿಂದ ಹೊರಬರುತ್ತಿದ್ದರು. ಈ ವೇಳೆ ಹಿಂಬಂದಿಯಿಂದ ಬರುತ್ತಿದ್ದ ಅನೇಕರು ಮಲ್ಯ ಅವರನ್ನು ನೋಡಿ ‘ಚೋರ್​ ಹೈ’, ‘ಚೋರ್​ ಹೈ’ ಎನ್ನುವ ಘೋಷಣೆ ಕೂಗಿದ್ದಾರೆ.

Rajesh Duggumane | news18
Updated:June 11, 2019, 2:33 PM IST
Video | ಭಾರತ-ಆಸ್ಟ್ರೇಲಿಯಾ ಪಂದ್ಯ ನೋಡಲು ಬಂದ ವಿಜಯ್ ಮಲ್ಯಗೆ ಕಳ್ಳ.. ಕಳ್ಳ.. ಎಂದು ಕೂಗಿದ ಭಾರತೀಯರು!
ವಿಜಯ್​ ಮಲ್ಯಾ
  • News18
  • Last Updated: June 11, 2019, 2:33 PM IST
  • Share this:
ವಿವಿಧ ಬ್ಯಾಂಕ್​ಗಳಲ್ಲಿ 9,000 ಸಾವಿರ ಕೋಟಿ ರೂ. ಸಾಲ ಮಾಡಿ ವಿಜಯ್ ಮಲ್ಯ ಲಂಡನ್​ಗೆ ಪರಾರಿಯಾಗಿದ್ದಾರೆ. ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ. ವಿಜಯ್​ ಮಲ್ಯ ಮಾತ್ರ ಲಂಡನ್​ನಲ್ಲಿ ಉಂಡು-ತಿಂದು ಹಾಯಾಗಿದ್ದಾರೆ. ಭಾನುವಾರ ನಡೆದ ಆಸ್ಟ್ರೇಲಿಯಾ-ಭಾರತ ಪಂದ್ಯಕ್ಕೂ ಅವರು ಹಾಜರಿ ಹಾಕಿದ್ದರು. ಈ ವೇಳೆ ಭಾರತೀಯ ಅಭಿಮಾನಿಗಳು ಮಲ್ಯ ಬೆವರಿಳಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಸತತ ಎರಡನೇ ಗೆಲುವು ಸಾಧಿಸಿದ ಖುಷಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರ ಬರುತ್ತಿದ್ದರು. ಪಂದ್ಯ ನೋಡಲು ತೆರಳಿದ್ದ ಮಲ್ಯ ಕೂಡ ಕ್ರೀಡಾಂಗಣದಿಂದ ಹೊರಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಅನೇಕರು ಮಲ್ಯ ಅವರನ್ನು ಸುತ್ತುವರೆದು ‘ಚೋರ್​ ಹೈ’, ‘ಚೋರ್​ ಹೈ’ ಎಂದು ಘೋಷಣೆ ಕೂಗಿದ್ದಾರೆ.

ಈ ವಿಚಾರಕ್ಕೆ ಮಲ್ಯ ಕೋಪಗೊಂಡರೂ ಅದನ್ನು ತೋರಿಸಿಕೊಳ್ಳದೆ, “ಹೀಗೆ ಕೂಗಿದ್ದಕ್ಕೆ ನನ್ನ ಅಮ್ಮನಿಗೂ ಬೇಸರವಾಗುವುದಿಲ್ಲ,” ಎಂದಿದ್ದಾರೆ. ಈ ಮೂಲಕ ತನಗೆ ಈ ಮಾತು ತಟ್ಟೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.



Loading...

ಇದನ್ನೂ ಓದಿ: ಸಾಲ ಮಾಡಿ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯಗೆ ಸಂಕಷ್ಟ!

ಟ್ವಿಟ್ಟರ್​ನಲ್ಲಿ ಮಗ ಕಾರ್ತಿಕ್​ ಮಲ್ಯ ಜೊತೆ ಮೈದಾನದಲ್ಲಿರುವ ಫೋಟೋ ಅಪ್​ಲೋಡ್​  ಮಾಡಿರುವ ಮಲ್ಯ, “ಮಗನ ಜೊತೆ ಕ್ರಿಕೆಟ್ ಪಂದ್ಯ ನೋಡುವುದು ಖುಷಿಯ ವಿಚಾರ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದೆ ಎಂಬುದು ಮತ್ತೊಂದು ಖುಷಿಯ ವಿಚಾರ. ವಿರಾಟ್​ ಕೊಹ್ಲಿ ಹಾಗೂ ಅವರ ತಂಡಕ್ಕೆ ಅಭಿನಂದನೆ,” ಎಂದು ಮಲ್ಯ ಹೇಳಿದ್ದಾರೆ.



First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...