ಸೇನೆಯ ಬಲಿದಾನ ನೆನೆದ ಧೋನಿಗೆ ಗ್ಲೌಸ್​ ಬದಲಿಸುವಂತೆ ಐಸಿಸಿ ತಾಕೀತು; ವಿಶ್ವಕಪ್​ನಿಂದ ಹಿಂದೆ ಸರಿಯಲಿದೆಯಾ ಭಾರತ?

ಐಸಿಸಿ ಆದೇಶಕ್ಕೆ ಭಾರತೀಯರು ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತ ಬೇಕಿದ್ದರೆ ವಿಶ್ವಕಪ್​ನಿಂದಲೇ ಹೊರಬರಲಿ, ಆದರೆ ಯಾವುದೆ ಕಾರಣಕ್ಕೂ ಈ ಗ್ಲೌಸ್​ ತೆಗೆಯಬಾರದು ಎಂದು ಕೆಲವರು ಆಗ್ರಹಿಸಿದ್ದಾರೆ.

ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೇನೆಯ ಬಲಿದಾನ ನೆನೆಯಲು ಧೊನಿ ಧರಿಸಿದ್ದ ಗ್ಲೌಸ್​

ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೇನೆಯ ಬಲಿದಾನ ನೆನೆಯಲು ಧೊನಿ ಧರಿಸಿದ್ದ ಗ್ಲೌಸ್​

  • News18
  • Last Updated :
  • Share this:
‘ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ನಿಂದ ಹಿಂದೆ ಸರಿಯುತ್ತಾ?’- ಹೀಗೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಚರ್ಚೆ ಹುಟ್ಟಲು ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿಗೆ ಮಾಡಿದ ತಾಕೀತು!

ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್​ ಧೋನಿ ತೊಟ್ಟಿದ್ದ ಗ್ಲೌಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇತ್ತು. ಇದಕ್ಕೆ ಐಸಿಸಿ ಅಪಸ್ವರ ಎತ್ತಿದೆ. ಈ ಬಗ್ಗೆ ಬಿಸಿಸಿಐಗೆ ಸೂಚನೆ ನೀಡಿರುವ ಐಸಿಸಿ, ಧೋನಿ ಗ್ಲೌಸ್​ನಲ್ಲಿ ಈ ಚಿನ್ಹೆ ತೆಗೆದು ಹಾಕಿ. ಈ ರೀತಿ ಚಿಹ್ನೆ ಧರಿಸಬೇಕಾದರೆ ತಂಡ ಅಥವಾ ಆಟಗಾರ ಐಸಿಸಿಯಿಂದ ಮೊದಲೇ ಅನುಮತಿ ಪಡೆಯಬೇಕು. ಧೋನಿ ಧರಿಸಿರುವುದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಸದ್ಯ ಭಾರತ ಇದಕ್ಕೆ ಐಸಿಸಿ ಬಳಿ ಅನುಮತಿ ಕೋರಿ ಮನವಿ ಸಲ್ಲಿಕೆ ಮಾಡಲಿದೆ.

ಇದನ್ನೂ ಓದಿ: ಕೊಹ್ಲಿಗೆ ಆಘಾತ, ವಿಶ್ವಕಪ್​ನಲ್ಲಿ ಧೋನಿ ಕ್ಯಾಪ್ಟನ್ ಆಗಲಿ ಎಂದ ಮಾಜಿ ಸ್ಟಾರ್ ಕ್ರಿಕೆಟಿಗ

ಐಸಿಸಿ ಆದೇಶಕ್ಕೆ ಭಾರತೀಯರು ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತ ಬೇಕಿದ್ದರೆ ವಿಶ್ವಕಪ್​ನಿಂದಲೇ ಹೊರಬರಲಿ, ಆದರೆ ಯಾವುದೆ ಕಾರಣಕ್ಕೂ ಈ ಗ್ಲೌಸ್​ ತೆಗೆಯಬಾರದು ಎಂದು ಕೆಲವರು ಆಗ್ರಹಿಸಿದ್ದಾರೆ.  ಅಷ್ಟೇ ಅಲ್ಲ #DhoniKeepTheGlove ಎನ್ನುವ ಹ್ಯಾಶ್​ ಟ್ಯಾಗ್​ ಹಾಕಿ ಟ್ವೀಟ್​ ಮಾಡುತ್ತಿದ್ದಾರೆ.2011ರಲ್ಲಿ ಎಂಎಸ್​ ಧೋನಿಗೆ ಲೆಫ್ಟಿನೆಂಟ್​ ಕರ್ನಲ್​ ರ್ಯಾಂಕ್​ ನೀಡಿ ಸೇನೆ ಗೌರವಿಸಿತ್ತು. 2015ರಲ್ಲಿ ಸೇನಾ ತರಬೇತಿಗೂ ಧೋನಿ ತೆರಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಲಿದಾನ್​ ಚಿಹ್ನೆ ಇರುವ ಗ್ಲೌಸ್​ ಧರಿಸುವ ಮೂಲಕ ಸೇನೆ ಮೇಲಿನ ಪ್ರೀತಿ ತೋರಿಸಿದ್ದರು. ಅರೆ ವಿಶೇಷ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿದವರು ‘ಬಲಿದಾನ್​’ ಚಿಹ್ನೆಯನ್ನು ಧರಿಸಬಹುದು. ಧೋನಿ ಎರಡು ವಾರಗಳ ಕಾಲ ವಿಶೇಷ ಸೇನಾ ಪಡೆಯಲ್ಲಿ ತರಬೇತಿ ಪಡೆದಿದ್ದರಿಂದ ಅವರು ಈ ಚಿನ್ಹೆ ಧರಿಸಬಹುದು.

ಇದನ್ನೂ ಓದಿ: 'ಎಂಎಸ್ ಧೋನಿ ಕಂಪ್ಯೂಟರ್​​ಗಿಂತ ವೇಗದವರು'; ಶೋಯೆಬ್ ಅಖ್ತರ್

First published: